ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇಂಗ್ಲೀಷ್ ಭಾಷೆ ಕಲಿಯಿರಿ: ರೇವಣಸಿದ್ದಪ್ಪ

KannadaprabhaNewsNetwork |  
Published : Feb 07, 2026, 01:30 AM IST
೬ಶಿರಾ೧: ಶಿರಾ ನಗರದ ಪಿ.ಎಮ್.ಶ್ರೀ. ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಭಾಷಾ ಕಲಿಕೆ ಹಾಗೂ ಬೋಧನೆಯ ಪ್ರಾತ್ಯಕ್ಷಿತೆಯಲ್ಲಿ ಇಂಗ್ಲೀಷ್ ಭಾಷಾ ನಿವೃತ್ತ ಉಪನ್ಯಾಸಕ ಹಾಗೂ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದ ರೇವಣಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳೇ ಪರಸ್ಪರ ಬೋಧಕ ಹಾಗೂ ವಿದ್ಯಾರ್ಥಿ ಪಾತ್ರ ನಿರ್ವಹಿಸುವ ವಿಧಾನದ ಮೂಲಕ ಶಿಕ್ಷಕರು ತರಗತಿಗಳಲ್ಲಿ ಬೋಧಿಸಿದರೆ ಕೇವಲ ಮೂರು ತಿಂಗಳಲ್ಲಿ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಭಾಷೆ ಕಲಿಯಬಹುದು. ಮಕ್ಕಳಲ್ಲಿರುವ ಅಗಾಧವಾದ ಸಾಮರ್ಥ್ಯವನ್ನು ನವೀನ ಕೌಶಲ್ಯದ ಮೂಲಕ ಬಳಸಿಕೊಂಡು ಅವರನ್ನು ಮಾದರಿಯನ್ನಾಗಿ ರೂಪಿಸುವುದು ಬಹಳ ಸುಲಭ.

ಕನ್ನಡಪ್ರಭ ವಾರ್ತೆ ಶಿರಾ

ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ವಹಿಸಿದಾಗ, ಅವರ ಕಲಿಕೆ ಪರಿಣಾಮಕಾರಿಯಾಗುತ್ತದೆ ಹಾಗೂ ಆತ್ಮವಿಶ್ವಾಸದಿಂದ ಇಂಗ್ಲಿಷ್ ಭಾಷೆಯನ್ನು ಕಲಿಯುವ ಹಾಗೂ ಅಷ್ಟೇ ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಮಕ್ಕಳು ಪಡೆದುಕೊಳ್ಳುವರು ಎಂದು ಇಂಗ್ಲೀಷ್ ಭಾಷಾ ನಿವೃತ್ತ ಉಪನ್ಯಾಸಕ ಹಾಗೂ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದ ರೇವಣಸಿದ್ದಪ್ಪ ಹೇಳಿದರು.

ನಗರದ ಪಿ.ಎಮ್.ಶ್ರೀ. ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷಾ ಕಲಿಕೆ ಹಾಗೂ ಬೋಧನೆಯ ಪ್ರಾತ್ಯಕ್ಷಿತೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳೇ ಪರಸ್ಪರ ಬೋಧಕ ಹಾಗೂ ವಿದ್ಯಾರ್ಥಿ ಪಾತ್ರ ನಿರ್ವಹಿಸುವ ವಿಧಾನದ ಮೂಲಕ ಶಿಕ್ಷಕರು ತರಗತಿಗಳಲ್ಲಿ ಬೋಧಿಸಿದರೆ ಕೇವಲ ಮೂರು ತಿಂಗಳಲ್ಲಿ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಭಾಷೆ ಕಲಿಯಬಹುದು. ಮಕ್ಕಳಲ್ಲಿರುವ ಅಗಾಧವಾದ ಸಾಮರ್ಥ್ಯವನ್ನು ನವೀನ ಕೌಶಲ್ಯದ ಮೂಲಕ ಬಳಸಿಕೊಂಡು ಅವರನ್ನು ಮಾದರಿಯನ್ನಾಗಿ ರೂಪಿಸುವುದು ಬಹಳ ಸುಲಭ ಎಂದು ಅವರು ತೋರಿಸಿಕೊಟ್ಟರು.ಮುಂಬರುವ ಬೇಸಿಗೆ ರಜೆಯಲ್ಲಿ ೬೦ ದಿನಗಳ ಕಾಲ ಸ್ಥಳೀಯ ಉಪನ್ಯಾಸಕರು, ಶಿಕ್ಷಕರು ಹಾಗೂ ಪೋಷಕರನ್ನು ಒಳಗೊಂಡಂತೆ ಶಿರಾ ತಾಲೂಕಿನಲ್ಲಿ ಎಲ್ಲಾ ಸರಕಾರಿ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳಿಗೆ ಪೂರ್ಣ ಪ್ರಮಾಣದ ಇಂಗ್ಲಿಷ್ ಭಾಷೆ ಕಲಿಸಲು ಯೋಜನೆ ರೂಪಿಸಲಾಗಿದೆ. ಅದರ ಪೂರ್ವಭಾವಿಯಾಗಿ ಇಂದಿನ ಕಾರ್ಯಕ್ರಮ ಮಾದರಿಯಾಗಿದೆ ಎಂದು ಹೇಳಿದರು.ಗಾಣದಹುಣಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಭಾಷಾ ಶಿಕ್ಷಕ ಆರ್. ತಿಪ್ಪೇಸ್ವಾಮಿ ಮಾತನಾಡಿ, ಇಂಗ್ಲಿಷ್ ಭಾಷಾ ಪ್ರಭುತ್ವವನ್ನು ಹೊಂದಿರುವ ರೇವಣಸಿದ್ದಪ್ಪ ಅವರನ್ನು ಒಳಗೊಂಡಂತೆ ಮುಂಬರುವ ದಿನಗಳಲ್ಲಿ ತಾಲೂಕಿನ ವಿವಿಧ ಉಪನ್ಯಾಸಕರು, ಶಿಕ್ಷಕರು ಒಟ್ಟಾಗಿ ತಾಲೂಕಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹೊಸ ಪ್ರಯೋಗ ನಡೆಸಲಾಗುತ್ತದೆ. ಇಂತಹ ವಿದ್ಯಾರ್ಥಿಮುಖಿ ಕಾರ್ಯಕ್ರಮಗಳನ್ನು ತಾಲೂಕಿನ ಎಲ್ಲಾ ಶಿಕ್ಷಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಪ್ರಭಾರ ಮುಖ್ಯ ಶಿಕ್ಷಕಿ ದೇವರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬಿ.ವಿ.ವಾಣಿ, ಎಚ್.ಎನ್.ಕೆಂಪಮ್ಮ, ಕೆ.ಕೆಂಚಮ್ಮ,ಎಚ್.ಆರ್. ವೀರಣ್ಣ, ಎಂ.ಲೀಲಾವತಿ, ವಿಜಯಮ್ಮ, ಫಯಾಜ್ ಜಿ.ನಾಗರತ್ನ, ಜಿ.ಎಚ್.ಅನಿತ, ವಿ.ದಾಕ್ಷಾಯಣಿ , ಎಸ್.ಆರ್.ನೇತ್ರಾವತಿ, ಎಸ್.ಜೆ.ಮುದ್ದಣ್ಣ, ಶಶಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು