ದೇವನಹಳ್ಳಿ: ವಿದ್ಯಾರ್ಥಿಗಳು ತಾವು ಅಂದುಕೊಂಡದ್ದನ್ನು ಸಾಧಿಸುವವರೆಗೆ ಆತ್ಮಸ್ಥೈರ್ಯದಿಂದ ಮುಂದೆ ಸಾಗಬೇಕು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಏಳು ಎದ್ದೇಳು ನಿನ್ನಗುರಿ ಮುಟ್ಟುವ ತನಕ ನಿಲ್ಲದಿರು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ನ್ಯಾಯಾಲಯಗಳಿಗೆ ಶೇ.೯೦ರಷ್ಟು ವಿದ್ಯಾವಂತರೇ ಬರುತ್ತಿದ್ದಾರೆ. ನ್ಯಾಯಲಗಳಲ್ಲಿ ಸುಳ್ಳು ದಾವೆಗಳಿಂದ ತ್ವರಿತವಾಗಿ ವಿಲೆ ಮಾಡಲು ಆಗುತ್ತಿಲ್ಲ. ಪೋಷಕರು ಕಷ್ಟಪಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತಾರೆ. ಆದರೆ ವಿದ್ಯಾರ್ಥಿಗಳು ದೊಡ್ದವರಾದ ಮೇಲೆ ಅವರನ್ನು ಆಶ್ರಮಕ್ಕೆ ಕಳುಹಿಸುತ್ತಾರೆ. ಅಂತಹ ಮಕ್ಕಳು ಪೋಷಕರಿಗೆ ಬೇಕಾ? ವಿದ್ಯಾರ್ಥಿಗಳು ತಂದೆ ತಾಯಿ ಹಾಗೂ ಗುರುಗಳಿಗೆ ಮೋಸ ಮಾಡಬಾರದು. ಮೋಸಮಾಡಿದರೆ ಹಿರಿಯ ನಾಗರಿಕರ ಹಕ್ಕು ಕಾಯಿದೆಯಡಿ ಆಸ್ತಿಯನ್ನು ಬರೆಸಿಕೊಂಡಿದ್ದರೆ ಅದನ್ನು ವಾಪಸ್ ತೆಗೆದುಕೊಳ್ಳುವ ತೀರ್ಮಾನ ಬರೆದಿದ್ದೇನೆ. ತಂದೆ ತಾಯಂದಿರು ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ವ್ಯಾಮೋಹ ಇಟ್ಟುಕೊಳ್ಳಬೇಡಿ. ವ್ಯಾಮೋಹ ಇದ್ದರೆ ಆಶ್ರಮ ಗ್ಯಾರಂಟಿ. ಹಿರಿಯ ನಾಗರಿಕರ ಹಕ್ಕಿನಡಿ ತಮ್ಮ ಹಕ್ಕನ್ನು ಚಲಾಯಿಸಿ ಅಂತ ಸಂದರ್ಭ ಬಂದರೆ ನಿಮ್ಮಜೊತೆಗೆ ನಾನಿರುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್ ಮಾತನಾಡಿ, ಜನನಿ ಮೊದಲ ಗುರು, ಪೋಷಕರ ಪಾತ್ರ ಮಹತ್ವದ್ದು, ತಾಯಿ ಭಾಷೆ ಸಂಸ್ಕಾರ ಕಲಿಸುವಳು. ಮಕ್ಕಳು ಮನೆ ವಾತಾವರಣವಿದ್ದಂತೆ ಬೆಳೆಯುತ್ತಾರೆ. ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಸಣ್ಣ ಕುಟುಂಬಗಳಾಗಿವೆ. ಪೋಷಕರು ಮಕ್ಕಳೊಟ್ಟಿಗೆ ಕಾಲ ಕಳೆಯಿರಿ, ಅವರಿಗೆ ಧೈರ್ಯತುಂಬಿ ಪ್ರೋತ್ಸಾಹಿಸಬೇಕು ಎಂದರು.ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಅತಿ ಕಡಿಮೆ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಅದಕ್ಕೆ ಪೋಷಕರೆ ಕಾರಣ, ಅವರ ನಿರೀಕ್ಷೆಗೂ ಮೀರಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಸಂಸ್ಥೆ. ಮಕ್ಕಳ ಮುಂದಿನ ಭವಿಷ್ಯಕ್ಕೆ ಪೋಷಕರು ನಮ್ಮೊಟ್ಟಿಗೆ ಕೈಜೋಡಿಸಿ ಸಹಕರಿಸಬೇಕು. ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿ ಬದುಕಿನ ಪರಿಪೂರ್ಣತೆಯತ್ತ ಸಾಗೋಣ ಎಂದರು.
ಈ ವೇಳೆ ನ್ಯಾಯಾಧೀಶರಾದ ಚಂದ್ರಿಕ, ತಹಸೀಲ್ದಾರ್ ಅನಿಲ್, ಕಾರ್ಯದರ್ಶಿ ಕೆಂಪೇಗೌಡ, ನಿರ್ದೇಶಕರಾದ ಡಾ.ಗೀಶ್ಮನಾಗರಾಜ್, ಮಮತಾಸ್ವಾಮಿ, ನಿಶಾಂತ್, ಪ್ರಾಂಶುಪಾಲೆ ಪದ್ಮಜಾ.ವಿ, ಪಿಯು ಕಾಲೇಜಿನ ಪ್ರಾಂಶುಪಾಲ ಕೆಂಪೇಗೌಡ, ಶಾಲೆಯ ಆಡಳಿತ ವರ್ಗದ ಬಸವರಾಜ್, ಶಿಕ್ಷಕ ವೃಂದ, ಪೋಷಕರು ಹಾಜರಿದ್ದರು.೭ ದೇವನಹಳ್ಳಿ ಚಿತ್ರಸುದ್ದಿ:೧
ದೇವನಹಳ್ಳಿ ತಾಲೂಕಿನ ಆವತಿ ಸಮೀಪದ ಅನಂತ ವಿದ್ಯಾನಿಕೇತನ ಶಾಲೆಯ ಅನಂತ ಲಹರಿ ಕಾರ್ಯಕ್ರಮನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಇತರರು ಉದ್ಘಾಟಿಸಿದರು.