ವಿದ್ಯಾರ್ಥಿಗಳಿಗೆ ತಂಬಾಕಿನ ದುಷ್ಪರಿಣಾಮಗಳ ಅರಿವು ಅಗತ್ಯ

KannadaprabhaNewsNetwork |  
Published : Jun 01, 2026, 01:45 AM IST
೦೧ವಿಜೆಪಿ೩೦ ವಿಜಯಪುರ ಹೋಬಳಿಯ ನಾರಾಯಣಪುರ ಗ್ರಾಮದ ಶ್ರೀ ಸಾಯಿ ಲಾ ಕಾಲೇಜಿನ ಆವರಣದಲ್ಲಿ ಶ್ರೀ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮzಲ್ಲಿ ಲಾ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದೊಂದಿಗೆ  ದೇವನಹಳ್ಳಿ ಜಿಲ್ಲಾ ೫ನೇ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಲಕ್ಷ್ಮಣ ರಾಮು ಕುರಾಣಿ ಮತ್ತಿತರರು. | Kannada Prabha

ಸಾರಾಂಶ

ವಿಜಯಪುರ: ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ೫ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮಣ ರಾಮು ಕುರಾಣಿ ತಿಳಿಸಿದರು

ವಿಜಯಪುರ: ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ೫ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮಣ ರಾಮು ಕುರಾಣಿ ತಿಳಿಸಿದರು.

ಹೋಬಳಿಯ ನಾರಾಯಣಪುರದ ಶ್ರೀ ಸಾಯಿ ಲಾ ಕಾಲೇಜಿನ ಆವರಣದಲ್ಲಿ ಶ್ರೀ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ''''''''ವಿಶ್ವ ತಂಬಾಕು ನಿಷೇಧ ದಿನ'''''''' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇವನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ, ಇಂದಿನ ಕಾಲಮಾನದಲ್ಲಿ ಯುವಜನತೆಗೆ ತಂಬಾಕಿನ ದುಷ್ಟಪರಿಣಾಮಗಳ ಬಗ್ಗೆ ತಿಳಿದಿದ್ದರೂ ಕೇವಲ ಕ್ಷಣಿಕ ಖುಷಿಗಾಗಿ ಯುವಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಚಲನಚಿತ್ರ ಮಂದಿರಗಳಲ್ಲಿ ಪ್ರತಿ ಪ್ರದರ್ಶನದ ವೇಳೆಯೂ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೂ ಯುವಜನತೆ ಎಚ್ಚೆತ್ತುಕೊಳ್ಳದಿರುವುದು ಆತಂಕಕಾರಿ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನೆಲ್ ನ್ಯಾಯವಾದಿ ಎಂ.ಮೂರ್ತಿ ಮಾತನಾಡಿ, ತಂಬಾಕಿನಲ್ಲಿ ಹೊಗೆರಹಿತ (ಕಡ್ಡಿಪುಡಿ, ಪಾನ್‌ಪರಾಗ್ ಇತ್ಯಾದಿ) ಹಾಗೂ ಹೊಗೆಸಹಿತ (ಬೀಡಿ, ಸಿಗರೇಟು) ಎಂಬ ಎರಡು ವಿಧಗಳಿವೆ. ಮಾಲ್ಡೀವ್ಸ್, ಭೂತಾನ್ ದೇಶಗಳು ಈಗಾಗಲೇ ಸಂಪೂರ್ಣ ತಂಬಾಕು ಮುಕ್ತ ದೇಶಗಳಾಗಿದ್ದು, ನಮ್ಮ ದೇಶದಲ್ಲಿಯೂ ಒರಿಸ್ಸಾ ರಾಜ್ಯ ಬಹಳ ಹಿಂದಿನಿಂದಲೇ ತಂಬಾಕನ್ನು ಸಂಪೂರ್ಣ ನಿಷೇಧಿಸಿದೆ. ಅದೇ ರೀತಿ ದೇಶದಲ್ಲಿ ಸಂಪೂರ್ಣ ತಂಬಾಕು ನಿಷೇಧ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿನಿ ಜಮುನಾ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ೮ ಲಕ್ಷ ಜನ ತಂಬಾಕು ಸೇವನೆಯಿಂದ ಮೃತಪಡುತ್ತಿದ್ದರೆ, ಧೂಮಪಾನ ಮಾಡುವವರ ಪಕ್ಕದಲ್ಲಿದ್ದು ಪರೋಕ್ಷವಾಗಿ ಅದರ ಹೊಗೆಯನ್ನು ಸೇವಿಸುವ ಸುಮಾರು ೨ ಲಕ್ಷ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ತಂಬಾಕು ಬಳಸುವವರು ತಮ್ಮ ಆರೋಗ್ಯದ ಜೊತೆಗೆ ಸುತ್ತಮುತ್ತಲಿನವರ ಜೀವದ ಜೊತೆಯೂ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಆಸ್ತಿ, ಅಂತಸ್ತಿಗಿಂತ ಆರೋಗ್ಯವೇ ನಿಜವಾದ ಸಂಪತ್ತು. ಉತ್ತಮ ಭವಿಷ್ಯಕ್ಕಾಗಿ ಯುವಜನತೆ ತಂಬಾಕಿನಿಂದ ದೂರವಿರಬೇಕು. ತಂಬಾಕು ಸ್ವೀಕರಿಸದಿರುವ ಬಗ್ಗೆ ಹಾಗೂ ಇತರರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಪಮಾಣ ವಚನ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಮೂರ್ತಿ ಉಪನ್ಯಾಸಕರು.ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ವೆಂಕಟೇಶ್, ಶ್ರೀ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬಿ. ಮಂಜುನಾಥ್, ಪ್ರಾಂಶುಪಾಲರಾದ ಸದಾಶಿವ ಕಾಂಬ್ಳೆ, ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮುನೇಗೌಡ, ವಕೀಲರುಗಳಾದ ವೆಂಕಟೇಶ್, ಮೋಹನ್, ಚೇತನ್, ಹಾಗೂ ಉಪನ್ಯಾಸಕರುಗಳಾದ ಭಾಗ್ಯಶ್ರೀ,ಕೇಶವಮೂರ್ತಿ, ರಾಘವೇಂದ್ರ, ಶ್ರೀನಿವಾಸ್ ಮೂರ್ತಿ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

೦೨ವಿಜೆಪಿ೩೦

ವಿಜಯಪುರ ಹೋಬಳಿಯ ನಾರಾಯಣಪುರದ ಶ್ರೀ ಸಾಯಿ ಲಾ ಕಾಲೇಜಿನ ಆವರಣದಲ್ಲಿ ಶ್ರೀ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ವಿಕಸಿತ ಭಾರತ’ಕ್ಕಾಗಿ ಸಂಕಲ್ಪಿಸಿ: ರಾಧಾಕೃಷ್ಣನ್‌
ಬಳ್ಳಾವರ ಗಂಗೂರು ಗ್ರಾಮಗಳ ಸುತ್ತ ನಿಲ್ಲದ ಕಾಡಾನೆಗಳ ಕಾಟ