ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶಿಕ್ಷಕ ಭವನದಲ್ಲಿ ಅಕ್ಕ ಐಎಎಸ್ ಅಕಾಡೆಮಿ ಬೆಂಗಳೂರು ವತಿಯಿಂದ ಶ್ರೀಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆ.ಆರ್.ಪೇಟೆ ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್, ಸಮಾನ ಮನಸ್ಕರ ವೇದಿಕೆ, ರಾಜ್ಯ ರೈತ ಸಂಘ, ತಾಲೂಕು ನೌಕರರ ಬಳಗ ಆಶ್ರಯದಲ್ಲಿ ನಡೆದ 2026 ಸಾಲಿನ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಲ್ಲರು. ಅವರಿಗೆ ಅಕ್ಕ ಐ.ಎ.ಎಸ್ ಅಕಾಡೆಮಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮಾರ್ಗದರ್ಶನ ನೀಡುತ್ತಿದೆ. ಈ ಉಪಯುಕ್ತ ಪರೀಕ್ಷೆ ಕಾರ್ಯಾಗಾರ ಯುವಕರು ಹೆಚ್ಚೆಚ್ಚು ಅವಕಾಶ ಪಡೆದು ಕೊಳ್ಳಬಲ್ಲರು ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಹಿಂಜರಿಕೆ ಬೇಡ. ಯುವಕರು ಕೀಳರಿಮೆ ಮನೋಭಾವ ಬಿಟ್ಟು ವೃತ್ತಿಯೆಡೆಗೆ ಹೆಚ್ಚು ಆಕರ್ಷಿತರಾಗಬೇಕು. ಇದರಿಂದ ಉನ್ನತ ಗುರಿ ಇಟ್ಟುಕೊಂಡು ಅಧಿಕಾರಿಗಳಾಗಿ ದೇಶ ಕಟ್ಟುವ ಸದಾವಕಾಶ ಸಿಗುತ್ತದೆ ಎಂದು ಸಲಹೆ ನೀಡಿದರು.
ಕೆ.ಆರ್.ಪೇಟೆ
ಸರ್ಕಾರಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ್ ಮಾತನಾಡಿ, ಶಿಕ್ಷಕರಾಗಿ 33 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿರಾಗುತ್ತಿರುವ ಎಂ.ಕುಮಾರ್ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ವೃಂದ, ಪಾಲಕರು ಹಾಗೂ ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಆನಂದಕುಮಾರ್, ಪ್ರಧಾನ ಕಾರ್ಯದರ್ಶಿ ಎಲ್.ಎಸ್. ಧರ್ಮಪ್ಪ, ಮಾಜಿ ಅಧ್ಯಕ್ಷ ಪದ್ಮೇಶ್, ನಿರ್ದೇಶಕ ರವಿಕುಮಾರ್, ಶಿಕ್ಷಕರ ಪತ್ತಿನ ನೌಕರರ ಸಹಕಾರ ಸಂಘ ಅಧ್ಯಕ್ಷ ಏ.ಕೆ.ದೇವರಾಜ್, ನಿರ್ದೇಶಕ ಶಿವಕುಮಾರ್, ಶಿಕ್ಷಕರಾದ ಪಿ.ಜೆ.ಕುಮಾರ್, ಹರೀಶ್, ಎಸ್.ನಾರಾಯಣ್, ಆರ್.ಕೆ ರಮೇಶ್, ಎಂ.ಡಿ.ಯೋಗೇಂದ್ರ, ಮಂಜು, ಮುಖ್ಯ ಶಿಕ್ಷಕ ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್ ಸೇರಿದಂತೆ ಇತರರಿದ್ದರು.