ಕೊಪ್ಪಳ:
ಹೇಳಿದರು.ಭಾಗ್ಯನಗರದ ವಿದ್ಯಾವಿಕಾಸ ಶಾಲೆಯ ಸಭಾ ಭವನದಲ್ಲಿ ಫಾನಘಂಟಿ ಫೌಂಡೇಶನ್, ವಾಸವಿ ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೆ ಓದುವುದರಿಂದ ನಿಮ್ಮಲ್ಲಿನ ಜ್ಞಾನದ ಅರಿವು ಹೆಚ್ಚಳವಾಗುತ್ತದೆ. ಇದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಕಷ್ಟು ಪ್ರೇರಣೆಯಾಗುತ್ತದೆ. ಹೀಗಾಗಿ, ಪಠ್ಯದ ಜತೆಗೆ ನಿತ್ಯವೂ ಅರ್ಧಗಂಟೆಯಾದರೂ ನಿಮಗಿಷ್ಟವಾದ ಪತ್ರಿಕೆ ಓದಬೇಕು ಎಂದರು.ಹಿರಿಯ ಪತ್ರಕರ್ತ ಸಾಧಿಕ್ ಅಲಿ ಮಾತನಾಡಿ, ಪತ್ರಕರ್ತರು ವಿಷಯವನ್ನು ಬರೀ ಸುದ್ದಿಯನ್ನಾಗಿ ನೋಡದೆ ಸಮಾಜದ ಅಭಿವೃದ್ಧಿ ಬಗ್ಗೆಯೂ ಚಿಂತಿಸಬೇಕು. ಪತ್ರಕರ್ತರು ನಿರ್ಣಾಯಕರಲ್ಲ, ಓದುಗರೇ ನಿರ್ಣಾಯಕರು. ವಿದ್ಯಾರ್ಥಿಗಳು ಕೂಡ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆ ಓದುವ ಹವ್ಯಾಸ ರೂಪಿಸಿಕೊಳ್ಳಿ ಎಂದರು.
ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ರವೀಂದ್ರ ಅನಿಸಿಕೆ ಹಂಚಿಕೊಂಡರು. ಪತ್ರಿಕಾ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.
ವಾದಿರಾಜ್ ದೇಸಾಯು, ಪ್ರಿಯದರ್ಶಿನಿ ಮುಂಡರಗಿಮಠ, ಹೇಮಾ ಪಾನಘಂಟಿ, ಗಿರಿಜಾ, ವೈಷ್ಣವಿ, ಸಂದೇಶ, ಅರ್ಚನಾ ಹಾಗೂ ಫೌಂಡೇಶನ್ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.