ಸುಸ್ಥಿರ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದು

KannadaprabhaNewsNetwork |  
Published : Feb 15, 2026, 03:45 AM IST
ಪೋಟೊ13ಕೆಎಸಟಿ1: ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಸಂಘ ಮತ್ತು ಸುಜಲಾನ ನೀಡ್ಸ್ ಸಂಸ್ಥೆಯ ಅಡಿಯಲ್ಲಿ ಆಯೋಜಿಸಿದ ಪರಿಸರ ಸಂರಕ್ಷಣೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲು ತಂತಿಗಳ ಹುಕ್ಕುಗಳನ್ನು ಹಾಗೂ ನೋಟ್‌ ಬುಕ್ಕಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಬಟ್ಟೆ ಚೀಲ, ಕಾಗದದ ಸ್ಟ್ರಾಗಳ ಬಳಕೆ, ಮರುಬಳಕೆ ಮತ್ತು ಜಾಗೃತಿ ಅಭಿಯಾನಗಳ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ಸಾಧ್ಯ

ಕುಷ್ಟಗಿ: ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂದರೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಪರಿಸರ ಸ್ನೇಹಿ ಪರ್ಯಾಯ ಅಳವಡಿಸಿಕೊಳ್ಳಬೇಕೆಂದು ಸುಜಲಾನ ಫೌಂಡೇಶನ್ ಸಂಸ್ಥೆ ವ್ಯವಸ್ಥಾಪಕ ಅಜಿತ ಪಾಟೀಲ ಹೇಳಿದರು.

ತಾಲೂಕಿನ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಸಂಘ ಮತ್ತು ಸುಜಲಾನ ನೀಡ್ಸ್ ಸಂಸ್ಥೆಯಡಿಯಲ್ಲಿ ಆಯೋಜಿಸಿದ ಪರಿಸರ ಸಂರಕ್ಷಣೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲು ತಂತಿಗಳ ಹುಕ್ಕು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನೀಡ್ಸ್ ಸಂಸ್ಥೆ ಕುಷ್ಟಗಿ ಸಂಸ್ಥೆಯ ಉಳವಪ್ಪ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು, ಆರೋಗ್ಯ ರಕ್ಷಿಸಲು ಮತ್ತು ಸುಸ್ಥಿರ ಪರಿಸರ ನಿರ್ಮಿಸಲು ವಿದ್ಯಾರ್ಥಿಗಳ ಪಾತ್ರ ಅಗತ್ಯವಾಗಿದೆ ಎಂದರು.

ವಿಜ್ಞಾನ ಶಿಕ್ಷಕ ಬಸಪ್ಪ ವಾಲಿಕಾರ ಮಾತನಾಡಿ, ಬಟ್ಟೆ ಚೀಲ, ಕಾಗದದ ಸ್ಟ್ರಾಗಳ ಬಳಕೆ, ಮರುಬಳಕೆ ಮತ್ತು ಜಾಗೃತಿ ಅಭಿಯಾನಗಳ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ಸಾಧ್ಯ ಎಂದರು.

ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ದೇವಪ್ಪ ಬಾಚಾಳಿ ಉಪಾಧ್ಯಕ್ಷ ಚಂದ್ರಶೇಖರ ಕುಂಬಾರ, ಗ್ರಾಮಸ್ಥ ರಾದ ಹನುಮಂತ ಆರೇರ ಮುಖ್ಯೋಪಾಧ್ಯಾಯ ರಾಜೇಂದ್ರ ಸಿನ್ನೂರ, ಎಸ್‌.ಎಸ್.ಅಂಗಡಿ, ಗೀತಾ ದೇವಾಂಗಮಠ, ಮಹಾಂತೇಶ ಹೊಸಮನಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನಲ್ಲಿ ನೆಮ್ಮದಿಗೆ ಸಂಗೀತ ಅಗತ್ಯ: ಡಾ. ಜಿ.ಎಲ್. ಹೆಗಡೆ
ಕವಿತೆಗಳಿಗೆ ಕಿವಿಯಾದ ಅಂಗನವಾಡಿ ಕಾರ್ಯಕರ್ತೆಯರು