ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ದಿಮೆದಾರಿಕೆಯ ಗುರಿ ಇರಲಿ: ಕುಲಪತಿ ಪ್ರೊ.ಎಂ. ಮುನಿರಾಜು

KannadaprabhaNewsNetwork |  
Published : Dec 05, 2025, 01:00 AM IST
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಜರುಗಿದ ರಫ್ತು ಉತ್ತೇಜನ ಕುರಿತ ಕಾರ್ಯಾಗಾರಕ್ಕೆ ಕುಲಪತಿ ಪ್ರೊ.ಎಂ.ಮುನಿರಾಜು ಚಾಲನೆ ನೀಡಿದರು.  | Kannada Prabha

ಸಾರಾಂಶ

ದೇಶದಲ್ಲಿ ಹಲವಾರು ಸಣ್ಣ ಉದ್ದಿಮೆಗಳು ಮಧ್ಯಮ ವರ್ಗದವರಿಂದ ಆರಂಭವಾಗಿ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ.

ಬಳ್ಳಾರಿ: ದೇಶದಲ್ಲಿ ಹಲವಾರು ಸಣ್ಣ ಉದ್ದಿಮೆಗಳು ಮಧ್ಯಮ ವರ್ಗದವರಿಂದ ಆರಂಭವಾಗಿ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ದಿಮೆದಾರರಾಗುವ ಕನಸನ್ನು ಹೊಂದಬೇಕು ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ಮುನಿರಾಜು ತಿಳಿಸಿದರು.

ನಗರ ಹೊರವಲಯದ ಬಳ್ಳಾರಿ ವಿವಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ವಿಶ್ವವಿದ್ಯಾಲಯ ಹಾಗೂ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬಳ್ಳಾರಿ ಜಿಲ್ಲಾ ಕೈಗಾರಿಕಾ ಕೇಂದ್ರಗಳು ಜಂಟಿಯಾಗಿ ಆಯೋಜಿಸಿದ್ದ ರಫ್ತು ಉತ್ತೇಜನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಗೆ ಸಂಬಂಧಿಸಿದ ಸ್ಟೀಲ್, ಗಾರ್ಮೆಂಟ್ಸ್, ಕೃಷಿ ಆಧಾರಿತ ವಸ್ತುಗಳು 2024ನೇ ಸಾಲಿನಲ್ಲಿ ಅಂದಾಜು ₹20 ಸಾವಿರ ಕೋಟಿಗಳಷ್ಟು ರಫ್ತು ವಹಿವಾಟುಗಳಾಗಿವೆ. ವಹಿವಾಟು ನಡೆಸಲಾಗಿದೆ. ರಫ್ತು ಮಾಡಲಾಗಿದೆ. ಉದ್ಯಮಶೀಲತೆ ಬೆಳೆಸುವ, ಆರ್ಥಿಕ ಬೆಳವಣಿಗೆ ಹೊಂದಲು ಜಿಲ್ಲೆಯಲ್ಲಿ ಹಲವಾರು ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳಿ ಎಂದು ಎಂದು ಹೇಳಿದರು.

ಬಳ್ಳಾರಿಯ ಎಕ್ಸ್‌ಪೋರ್ಟ್ ಉದ್ದಿಮೆದಾರ ಕೃಷ್ಣ ಸ್ಟೋನ್ ಕ್ರಷರ್ ನ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಗೋಪಾಲ್ ಮಾತನಾಡಿ, ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಉದ್ದಿಮಗಳಿಗೆ ಹಲವಾರು ಅವಕಾಶಗಳಿವೆ. ವಿದ್ಯಾರ್ಥಿಗಳು ಅವಕಾಶಗಳನ್ನು ಉಪಯೋಗಿಸಿಕೊಂಡು ರಫ್ತು ಉದ್ದಿಮೆದಾರಿಕೆ ಹೊಂದಲು ಮುಂದಾಗಬೇಕು ಎಂದು ತಿಳಿಸಿದರು. ಇದೇ ವೇಳೆ ರಮೇಶ್ ಗೋಪಾಲ್ ರಫ್ತು ಉತ್ತೇಜನ ಕುರಿತಾದ ಅನುಭವ ಹಾಗೂ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ರಫ್ತು ಉತ್ತೇಜನ ಕಾರ್ಯಾಗಾರದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸೋಮಶೇಖರ್ ಬಿ., ವಿವಿಯ ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಪ್ರೊ. ಗೌರಿ ಮಾಣಿಕ್ ಮಾನಸ, ಪ್ರಮಾಣೀಕೃತ ರಾಷ್ಟ್ರೀಯ ತರಬೇತುದಾರರ ಮತ್ತು ಮಕ್ಕಳ ಸಲಹೆಗಾರ ಜೆಎಫ್‌ಎಂ ಮಂಜುನಾಥ್ ಬಳ್ಳುಳಿ, ಇಡಿಪಿ ಸಂಯೋಜಕ ಪ್ರೊ ಸುನಿಲ್ ಹಾಗೂ ಸಿಡಾಕ್‌ನ ತರಬೇತಿ ಅಧಿಕಾರಿ ವಿನೋದ್ ಕುಮಾರ್ ಭಾಗವಹಿಸಿದ್ದರು.

ರಫ್ತು ಉತ್ತೇಜನ ಕಾರ್ಯಾಗಾರದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಜರುಗಿದ ರಫ್ತು ಉತ್ತೇಜನ ಕುರಿತ ಕಾರ್ಯಾಗಾರಕ್ಕೆ ಕುಲಪತಿ ಪ್ರೊ.ಎಂ.ಮುನಿರಾಜು ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೌಕಾ ದಿನಾಚರಣೆಯಲ್ಲಿ ರಾಜ್ಯಪಾಲರು ಭಾಗಿ
ಡಿಸೆಂಬರ್‌ 10ರಿಂದ ಹುಕ್ಕೇರಿಮಠದ ಶ್ರೀಗಳಿಂದ ಹಾವೇರಿಯಲ್ಲಿ ಜನಜಾಗೃತಿ ಪಾದಯಾತ್ರೆ