ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ತುಂಬಬೇಕು

KannadaprabhaNewsNetwork | Published : Sep 9, 2024 1:35 AM

ಸಾರಾಂಶ

ವಿದ್ಯಾವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ದೇಶಭಕ್ತರ ಬಳಗದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಪ್ರಾಂಶುಪಾಲ ಎಂ ಎಂ ರಮೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವಂತೆ ಕರೆ ನೀಡಿದರು. ಉತ್ತಮ ಸ್ವಾಸ್ಥ್ಯ ಮತ್ತು ಸದೃಢ ಸಮಾಜ ಕಟ್ಟುವಲ್ಲಿ ಇಂದಿನ ಮಕ್ಕಳೇ ಮುಂದಿನ ಜನಾಂಗ ಮತ್ತು ಇಂದಿನ ವಿದ್ಯಾರ್ಥಿಗಳೇ ಮುಂದಿನ ಸತ್ಪ್ರಜೆಗಳು. ಹಾಗಾಗಿ ಅವರಲ್ಲಿ ವಿದ್ಯಾರ್ಥಿದೆಸೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುವಂತೆ ಮತ್ತು ನಮ್ಮ ದೇಶದ ಸಂಸ್ಕೃತಿ ಪರಂಪರೆ ಯಲ್ಲಿ ಗೌರವ ಮೂಡುವಂತೆ ಮತ್ತು ಈ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಅಸಂಖ್ಯಾತ ಶೂರರ ಬಲಿದಾನಗಳ ಸ್ಮರಣೆಯನ್ನು ನೆನಪಿಟ್ಟುಕೊಳ್ಳುವಂತೆ ಶಿಕ್ಷಕರು ಬೋಧಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ವಿದ್ಯಾವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ದೇಶಭಕ್ತರ ಬಳಗದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಪ್ರಾಂಶುಪಾಲ ಎಂ ಎಂ ರಮೇಶ್ ಅವರನ್ನು ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವಂತೆ ಕರೆ ನೀಡಿದರು. ಉತ್ತಮ ಸ್ವಾಸ್ಥ್ಯ ಮತ್ತು ಸದೃಢ ಸಮಾಜ ಕಟ್ಟುವಲ್ಲಿ ಇಂದಿನ ಮಕ್ಕಳೇ ಮುಂದಿನ ಜನಾಂಗ ಮತ್ತು ಇಂದಿನ ವಿದ್ಯಾರ್ಥಿಗಳೇ ಮುಂದಿನ ಸತ್ಪ್ರಜೆಗಳು. ಹಾಗಾಗಿ ಅವರಲ್ಲಿ ವಿದ್ಯಾರ್ಥಿದೆಸೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುವಂತೆ ಮತ್ತು ನಮ್ಮ ದೇಶದ ಸಂಸ್ಕೃತಿ ಪರಂಪರೆ ಯಲ್ಲಿ ಗೌರವ ಮೂಡುವಂತೆ ಮತ್ತು ಈ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಅಸಂಖ್ಯಾತ ಶೂರರ ಬಲಿದಾನಗಳ ಸ್ಮರಣೆಯನ್ನು ನೆನಪಿಟ್ಟುಕೊಳ್ಳುವಂತೆ ಶಿಕ್ಷಕರು ಬೋಧಿಸಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್ ಮಾತನಾಡಿ, ಒಂದು ಒಳ್ಳೆಯ ಗುರಿ ಇರಬೇಕು ಮತ್ತು ಒಂದು ಒಳ್ಳೆಯ ಗುರು ಇರಬೇಕು. ಪುರಾಣ ಪುರುಷರಾದ ರಾಮಕೃಷ್ಣ, ಅರ್ಜುನ ಮುಂತಾದವರಿಗೆ ಅತ್ಯುತ್ತಮ ಗುರುಗಳು ಮಾರ್ಗದರ್ಶನ ನೀಡಿದರು. ಮತ್ತು ಶಿವಾಜಿ, ಕೃಷ್ಣದೇವರಾಯ, ಚಂದ್ರಗುಪ್ತ ಮುಂತಾದ ಧೀರರಿಗೆ ಉತ್ತಮ ಗುರುಗಳ ಮಾರ್ಗದರ್ಶನ ದೊರೆತಿದ್ದರಿಂದ ಒಂದು ಸಾಮ್ರಾಜ್ಯ ಕಟ್ಟುವುದರಲ್ಲಿ ಯಶಸ್ಸು ಮೂಡಿತು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಎಂ. ಎಂ ರಮೇಶ್, ಈ ಸನ್ಮಾನಕ್ಕೆ ನಾನು ಆಭಾರಿಯಾಗಿದ್ದೇನೆ ಮತ್ತು ಈ ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಯವದನ ರಾವ್ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವಾಕ್ಯವನ್ನು ವಿದ್ಯಾರ್ಥಿಗಳಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳುವಂತೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಅನ್ನಪೂರ್ಣ ಯುವ ಸಾಹಿತಿ ನಿರಂಜನ್, ಧರ್ಮ ಪ್ರಕೃತಿ ಪವನ್ ಗ್ಲಾಸ್ ಪ್ರಕಾಶ್, ಸುಶೀಲಾ ಮತ್ತು ಇನ್ನುಳಿದ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article