ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಜಿಎಚ್ ಶಿವಮಠ ಐಟಿಐ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶರಣ ಜಿ.ಎಚ್.ಶಿವಮಠ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಹಣ, ಸಂಪತ್ತು ಕಳೆದು ಕೊಂಡರೆ ಮತ್ತೆ ಸಂಪಾದಿಸಬಹುದು, ಆದರೆ ಚಾರಿತ್ರ್ಯ ಕಳೆದುಕೊಂಡರೆ ಮತ್ತೆ ಗಳಿಸುವುದು ಕಷ್ಟ ಎಂದರು.
ವಿದ್ಯಾರ್ಥಿ ಜೀವನ ದಿಸೆಯಿಂದಲೇ ಶರೀರ, ವ್ಯಕ್ತಿತ್ವ, ಚಾರಿತ್ರ್ಯೆತೆ ಶುದ್ಧವಾಗಿರಿಸಿಕೊಳ್ಳಬೇಕು. ತಮ್ಮ ದಿನಚರಿಯನ್ನು ಉತ್ತಮವಾಗಿ ರೂಪಿಸಿಕೊಂಡು ಉತ್ತಮ ನಿದ್ರೆ, ಯೋಗ, ಶುದ್ಧ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಓದಿನಲ್ಲಿ ತನ್ಮಯತೆ ಇದ್ದರೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.ಜಿ.ಎಚ್.ಶಿವಮಠ ಅವರು ಮಠದ ಪೂಜ್ಯರ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದರು. ಮೂಲತಃ ವಿಜಯಪುರ ಜಿಲ್ಲೆಯ ನಿಡಗುಂದಿ ಗ್ರಾಮದವರಾಗಿದ್ದ ಜಿ.ಎಚ್.ಶಿವಮಠ ಅವರು ಹಲವು ವರ್ಷಗಳ ಕಾಲ ಭಾಲ್ಕಿ ಅಂಚೆ ಕಚೇರಿಯಲ್ಲಿ ಅಂಚೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಪ್ರಾಚಾರ್ಯ ದೇವರಾಜ ಕುಂಬಾರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಂಗಮೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಪ್ರವೀಣ ಹಿರೇಮಠ, ಮುಖ್ಯಗುರುಗಳಾದ ವಿಶ್ವನಾಥ ಪಕ್ಕಾ, ಬಸವರಾಜ ರಂಜೇರೆ, ರಾಜಕುಮಾರ ಕಲಶೆಟ್ಟಿ, ರಾಜಕುಮಾರ ಸ್ವಾಮಿ, ಬಸವರಾಜ ಗೋರನಾಳೆ, ದೇವರಾಜ ಕುಂಬಾರ, ಪ್ರವೀಣ ಹಿರೇಮಠ, ವಿಶ್ವನಾಥ ಪಕ್ಕಾ, ಬಸವರಾಜ ರಂಜೇರೆ ಇದ್ದರು.