ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು: ಹನುಮಂತರಾಯಪ್ಪ

KannadaprabhaNewsNetwork |  
Published : Nov 03, 2026, 02:00 AM IST
30ಕೆಎಂಎನ್ ಡಿ11 | Kannada Prabha

ಸಾರಾಂಶ

ಏಕಾಗ್ರತೆಯಿಂದ ಧ್ಯಾನಸ್ಥರಾಗಿ ಮಕ್ಕಳು ಕಲಿಯಬೇಕು. ತಂದೆ, ತಾಯಿ ಮತ್ತು ಗುರುಗಳು ಮೆಚ್ಚುವಂತಹ ರೀತಿಯಲ್ಲಿ ವಿದ್ಯೆ ಕಲಿಯಬೇಕು. ಸಮಾಜಕ್ಕೆ ಉತ್ತಮ ಶಕ್ತಿಗಳಾಗಿ ಹೊರಹೊಮ್ಮಬೇಕು. ಪಠ್ಯಕ್ರಮಗಳ ಜೊತೆ ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು, ಜೀವನದಲ್ಲಿ ಶಿಸ್ತು ಸಂಯಮಗಳನ್ನು ರೂಢಿಸಿಕೊಂಡರೆ ಯಶಸ್ಸು ಸಾಧಿಸಬಹುದು.

ಕನ್ನಡಪ್ರಭ ವಾರ್ತೆ ಮದ್ದೂರು

ಪಠ್ಯಕ್ರಮಗಳ ಜೊತೆ ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು, ಜೀವನದಲ್ಲಿ ಶಿಸ್ತು ಸಂಯಮಗಳನ್ನು ರೂಢಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದು ತಾಲೂಕಿನ ಕೊಪ್ಪ ಸರ್ವೋದಯ ಕಾಲೇಜಿನ ಪ್ರಾಂಶುಪಾಲ ಹನುಮಂತರಾಯಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಹೊಸಗಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಮಕ್ಕಳಲ್ಲಿ ಮೌಲ್ಯ ಮತ್ತು ಸಂಸ್ಕಾರ ಕುರಿತು ಉಪನ್ಯಾಸ ಮತ್ತು ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ಏಕಾಗ್ರತೆಯಿಂದ ಧ್ಯಾನಸ್ಥರಾಗಿ ಮಕ್ಕಳು ಕಲಿಯಬೇಕು. ತಂದೆ, ತಾಯಿ ಮತ್ತು ಗುರುಗಳು ಮೆಚ್ಚುವಂತಹ ರೀತಿಯಲ್ಲಿ ವಿದ್ಯೆ ಕಲಿಯಬೇಕು. ಸಮಾಜಕ್ಕೆ ಉತ್ತಮ ಶಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ದಸಾಪ ಜಿಲ್ಲಾ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಮಾತನಾಡಿ, ಬುದ್ಧರ ಪ್ರೀತಿ ಮತ್ತು ಜ್ಞಾನ, ಬಸವಣ್ಣರ ದಯೆ, ಕಾಯಕವೇ ಕೈಲಾಸ, ಅಂಬೇಡ್ಕರ್ ಅವರ ಪುಸ್ತಕ ಪ್ರೇಮ, ಸಮಾನತೆ, ಗಾಂಧಿಯವರ ಮನಃಪರಿವರ್ತನೆ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಬಹುಜನರ ಅಭಿವೃದ್ಧಿ, ಪೆರಿಯಾರವರ ವೈಚಾರಿಕ ಚಿಂತನೆ ಮತ್ತು ಸಾವಿತ್ರಿಬಾಪುಲೆ, ಜ್ಯೋತಿಬಾಪುಲೆಯವರ ಶಿಕ್ಷಣ ಪ್ರೇಮದಂಥ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಯೋಜಕಿ ಮಂಜುಳಾ ಆಲದಳ್ಳಿ ಮಾತನಾಡಿ, ನಾಡು, ನುಡಿ, ಕಲೆ, ಸಾಹಿತ್ಯ ಕುರಿತು ನಾಡಿನಾದ್ಯಂತ ಕೆಲಸ ಮಾಡುತ್ತಿರುವ ಧಾರವಾಡ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳಲ್ಲಿ ಆದರ್ಶಗಳನ್ನು ಬಿತ್ತುತ್ತಿದೆ ಎಂದು ಹೇಳಿ, ಅಬ್ರಾಹಂ ಲಿಂಕನ್ ರವರ ಕಲಿಸು ಗುರುವೇ ಕಲಿಸು ಹಾಡನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅದರಲ್ಲಿನ ಮೌಲ್ಯಗಳನ್ನು ತಿಳಿಸಿದರು.

ಇದೇ ವೇಳೆ ಅಂತಾರಾಷ್ಟ್ರೀಯ ಗಾಯಕ ಪ್ರತಾಪ್ ಮತ್ತು ತಂಡ ಹಾಗೂ ಬಿಂದು ಮತ್ತು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಎಎಸ್ಐ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿ ಎಚ್.ಎಂ.ಕೃಷ್ಣ ಸಮಾರಂಭ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಎಚ್.ಎಸ್.ಶಿವರಾಮ್ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ರಾಯಶೆಟ್ಟಿಪುರ, ಶಿಕ್ಷಕರಾದ ನಟರಾಜ, ಜಯಲಿಂಗು, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿಲ್ಲಾ ಸಂಯೋಜಕಿ ಮಂಜುಳಾ ಆಲದಹಳ್ಳಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ