ಜೇವರ್ಗಿ:
ಅವರು ತಾಲೂಕಿನ ಗಂವ್ಹಾರ ಗ್ರಾಮದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಮಠದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಯೋಜನಾ ಶಿಬಿರದ ಉಸ್ತುವಾರಿ ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತನ್ನದೇಯಾದ ಪ್ರತಿಭೆ ಅಡಗಿರುತ್ತದೆ. ಹುದಗಿರುವ ಪ್ರತಿಭೆಯನ್ನು ಹೊರ ಹಾಕಲು ಈ ಶಿಬಿರವು ಪುರಕವಾಗಲಿದೆ ಎಂದು ಹೇಳಿದರು.
ಏಳು ದಿನಗಳ ಪರ್ಯಂತ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಗ್ರಾಮದ ಮಠ, ಮಂದಿರ, ಮಸಿದಿ ಸ್ವಚ್ಛತೆ ಕಾರ್ಯ, ಪ್ರತಿ ಕುಟುಂಬದ ಮಾಹಿತಿ, ಸಾಮಾಜಿಕ ಸಮಸ್ಯೆಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಅನಕ್ಷರತೆ, ಜೀತ ಪದ್ಧತಿ, ಪರಿಸರ ಸಂರಕ್ಷಣೆ, ಸಂವಿಧಾನದ ಮಹತ್ವ, ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಹತ್ತು ಹಲವಾರು ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಶರಣಪ್ಪ ಕುಮನಶಿರಸಿಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಿಂಗಣ್ಣ ದೊಡ್ಮನಿ, ಶಿವರಾಜ ಹೇಗಾ, ಸಾವಿತ್ರಿ ಮನಗೂಳಿ, ಭೀಮಣ್ಣ ಸಾಹು ರಡ್ಡಿ, ಚೈತ್ರಾ ಮೋರಟಗಿ, ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಬಡಿಗೇರ, ಕಾಲೇಜಿನ ಪ್ರಾಚಾರ್ಯ ಡಾ.ಧರ್ಮಣ್ಣ ಬಡಿಗೇರ, ಶಿವಶರಣಪ್ಪ ಹಳಿಮನಿ, ಸುರೇಶ ಹಿರೇಮಠ ಸೇರಿದಂತೆ ಶಿಬಿರಾರ್ಥಿಗಳು, ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು.