ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿರುವ ಪದವಿ ಪೂರ್ವ ಬಾಲಕಿಯರ ಕಾಲೇಜಿನ 2 ನೂತನ ಕಟ್ಟಡ ಮತ್ತು 2 ಪ್ರಯೋಗಾಲಯಗಳ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬರೀ ಪುಸ್ತಕಗಳಿಗೆ ಸಿಮೀತವಾಗಬಾರದು, ಪುಸ್ತಕಗಳ ಜತೆಗೆ ಹೊರಗಿನ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕು, ಮೊಬೈಲ್ ಗೀಳು ಬಿಟ್ಟು ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನಪಡೆದ ವಿದ್ಯಾರ್ಥಿನಿಯರಿಗೆ ಶಾಸಕರು 10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಶಾಸಕರು ಕಾಲೇಜಿನ ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಿಸಿದರು. ಇದೇ ವೇಳೆ ಪಟ್ಟಣದ ಕೇಂದ್ರ ಶಾಲೆಯ ನೂತನ 3 ಶಾಲಾ ಕಟ್ಟಡಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 3 ಶಾಲಾ ಕಟ್ಟಡಗಳಿಗೆ 41 ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದೆ ಎಂದು ಜೆಇ ಗಜಾನನ ತಿಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರು, ಪ್ರಾಂಶುಪಾಲ ರಂಗಯ್ಯ ಸೇರಿ ಉಪನ್ಯಾಸಕರು, ಶಾಲಾ ಶಿಕ್ಷಕರು ಸೇರಿ ಪಕ್ಷದ ಕಾರ್ಯಕರ್ತರಿದ್ದರು.
ಕೇಂದ್ರ ಶಾಲೆ: ಪುಡಾರಿಗಳ ಹಾವಳಿಗೆ ಬ್ರೇಕ್ ಹಾಕಲು ಶಾಸಕರಿಗೆ ಮನವಿಮಸ್ಕಿ ಪಟ್ಟಣದ ಕೇಂದ್ರ ಶಾಲಾ ಆವರಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣ ಇರುವುದರಿಂದ ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಆವರಣದಲ್ಲಿ ಮತ್ತು ರಸ್ತೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಅಲ್ಲದೇ ಸಂಜೆಯಾಗುತ್ತಿದ್ದಂತೆ ಆವರಣದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ. ಆದ್ದರಿಂದ ಪುಡಾರಿಗಳ ಹಾವಳಿಗೆ ಬ್ರೇಕ್ ಹಾಕುವಂತೆ ಶಾಸಕರಲ್ಲಿ ಉಪನ್ಯಾಸಕ ಮಹಾಂತೇಶ ಮಸ್ಕಿ ಮನವಿ ಮಾಡಿಕೊಂಡಾಗ ಸ್ಥಳದಲ್ಲಿಯೇ ಶಾಸಕರು ಸಿಪಿಐ ರಾಮಪ್ಪ ಜಲಿಗೇರಿ ಅವರಿಗೆ ಶಾಲಾ-ಕಾಲೇಜು ಸುತ್ತಲೂ ಗಸ್ತು ಹಾಕಲು ತಿಳಿಸಿದರು.