ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೋಡಿ ಕಣ್ತುಂಬಿಕೊಳ್ಳಬೇಕು: ಎಚ್.ಆರ್.ಅರವಿಂದ್

KannadaprabhaNewsNetwork |  
Published : Dec 09, 2024, 12:45 AM IST
8ಕೆಎಂಎನ್ ಡಿ32 | Kannada Prabha

ಸಾರಾಂಶ

ಮಂಡ್ಯ ನೆಲದಲ್ಲಿ 3ನೇ ಬಾರಿಗೆ 87ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಸೌಭಾಗ್ಯವೇ ಸರಿ. ನಾವು ಪದವಿ ಓದುತ್ತಿದ್ದಾಗ 48ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು, ಅದೊಂದು ಅವಿಸ್ಮರಣೀಯ ಗಳಿಗೆ, ನಮ್ಮಲ್ಲಿ ದೊಡ್ಡ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಹೆಬ್ರಿ ತರ ಆಗಬಯಸುವವರು ಇರಬಹುದು. ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾಲಾ ಕಾಲೇಜಿನ ವಿದ್ಯಾರ್ಥಿಗಳು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೋಡಿ ಕಣ್ತುಂಬಿಕೊಳ್ಳಬೇಕು ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಪೊಲೀಸ್ ಕಾಲೋನಿ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಘಟಕ, ಬದುಕು ಬೆಳೆಕು ಸೇವಾಸಮಿತಿ, ನಿವೃತ್ತ ಶಿಕ್ಷಕ ಕೆ.ಮಾಹಿಗಶೆಟ್ಟಿ ಸೇವಾ ಸಮಿತಿ, ಡಾ.ರಾಮೇಗೌಡ ಬಳಗ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಾಗೃತಿ ಅಂಗವಾಗಿ ಮಕ್ಕಳ ಕವಿಗೋಷ್ಠಿ ಮತ್ತು ಸಾಹಿತಿಗಳ ಪರಿಚಯ ಪ್ರಬಂಧ ಸ್ಪರ್ಧೆ-ವಿಜೇತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಡ್ಯ ನೆಲದಲ್ಲಿ 3ನೇ ಬಾರಿಗೆ 87ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಸೌಭಾಗ್ಯವೇ ಸರಿ. ಜಾನಪದ ವಿದ್ವಾಂಸ ಗೋ.ರೂ.ಚನ್ನಬಸಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ವೈಭವನ್ನು ಕಣ್ತುಂಬಿಕೊಳ್ಳಲು ಪೋಷಕರೊಂದಿಗೆ ಅಥವಾ ಶಾಲೆ ಕಾಲೇಜು ವತಿಯಿಂದ ವೀಕ್ಷಿಸಿ ಎಂದು ಮನವಿ ಮಾಡಿದರು.

ನಾವು ಪದವಿ ಓದುತ್ತಿದ್ದಾಗ 48ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು, ಅದೊಂದು ಅವಿಸ್ಮರಣೀಯ ಗಳಿಗೆ, ನಮ್ಮಲ್ಲಿ ದೊಡ್ಡ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಹೆಬ್ರಿ ತರ ಆಗಬಯಸುವವರು ಇರಬಹುದು. ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಾಹಿತಿ ಡಾ.ಪ್ರದೀಪ ಕುಮಾರ ಹೆಬ್ರಿ ಮಾತನಾಡಿ, ಸುಂದರವಾದ ಬದುಕು ರೂಪಿಸಿಕೊಳ್ಳಲು ಓದು ಒಂದು ಮಾರ್ಗ, ಅಂದವಾದ ಮೊಗದಲ್ಲಿ ನಗು ಎಷ್ಟು ಚಂದವೋ ಹಾಗೆಯೇ ಉನ್ನತ ಶಿಕ್ಷಣ, ಉದ್ಯೋಗವು ಬದುಕಿಗೆ ಚಂದ. ನಮ್ಮ ಬದುಕು ಇನ್ನೊಬ್ಬರಿಗೆ ಪ್ರೇರಣೆಯಾಗುವಂತೆ ಕ್ರೀಯಾತ್ಮಕವಾಗಿ, ಕೌಸಲ್ಯತೆಯಿಂದ ಜೀವನ ಕಟ್ಟಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಪರೀಕ್ಷೆಯ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿನಿಯನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಮಂಡ್ಯ ಘಟಕ ಅಧ್ಯಕ್ಷ ಎಂ.ಲೋಕೇಶ್, ಜಿಲ್ಲಾ ಕಸಾಪ ನಗರಘಟಕ ಅಧ್ಯಕ್ಷೆ ಸುಜಾತಕೃಷ್ಣ, ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್, ಮಹಿಳಾ ಪೊಲೀಸ್ ಠಾಣೆ ಅರಕ್ಷಕ ಉಪನಿರೀಕ್ಷಕೆ ಸವಿತಾಪಾಟೀಲ್, ಹಿರಿಯ ಸಹಶಿಕ್ಷಕಿ ಡಾ. ಕೆ.ಸಭಾನಾ, ಶುಗರ್ ಡಯಾಕೇರ್ ತಜ್ಞ ಡಾ. ಅರುಣ್, ಶಿಕ್ಷಕವೃಂದ ಹಾಜರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ