)
ಧಾರವಾಡ: ಅವಸರ್ ಫೌಂಡೇಶನ್ ಟ್ರಸ್ಟ್ ಆರ್ಥಿಕ ಸಹಾಯದಲ್ಲಿ ನೀಡಲಾಗಿರುವ ಸ್ಮಾರ್ಟ್ ಬೋರ್ಡ್ ಸೌಲಭ್ಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಲು ಕವಿವಿಯ ಕುಲಪತಿ ಪ್ರೊ. ಎ. ಎಂ. ಖಾನ್ ಹೇಳಿದರು.
ಅವಸರ ಫೌಂಡೇಶನ್ ಕರ್ನಾಟಕ ವಿವಿಗೆ ಉದಾರವಾಗಿ ಹಣಕಾಸಿನ ನೆರವು ನೀಡಿದ್ದು, ಅವರ ಸೇವೆ ಸದಾ ಸ್ಮರಣೀಯ. ನವೀಕರಣಗೊಂಡ ನಂತರ ಶಾಲೆಗೆ ಮೆರುಗು ಬಂದಿದೆ ಎಂದರು.
ಅವಸರ್ ಫೌಂಡೇಶನ್ ಸಂಸ್ಥಾಪಕ ಆನಂದ ಚತುರ್ವೇದಿ ಮಾತನಾಡಿ, ಹದಿನಾಲ್ಕು ವರ್ಷಗಳಿಂದ ಶಾಲೆಯ ಅಭಿವೃದ್ಧಿಯ ಕಾರ್ಯಗಳನ್ನು ಮಾಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕೃತಜ್ಞತೆಯ ಮನೋಭಾವ ಕಳೆದು ಹೋಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಮಾತನಾಡಿ, ಒಂದು ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಈಗಿನ ಕಾಲದಲ್ಲಿ ಈ ಶಾಲೆಗೆ ₹30 ಲಕ್ಷ ಖರ್ಚು ಮಾಡಿರುವ ಅವಸರ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು. ದತ್ತು ಗ್ರಾಮಗಳ 13 ಜನ ವಿದ್ಯಾರ್ಥಿನಿಯರಿಗೆ ತಲಾ ಹತ್ತು ಸಾವಿರ ಶಿಷ್ಯವೇತನ ಚೆಕ್ ವಿತರಿಸಲಾಯಿತು.