ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಸ್ವ ವಿಕಾಸದೆಡೆ ಮುನ್ನಡೆಯಿರಿ

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ಜಗತ್ತು ನಮ್ಮ ಕೈಯಲ್ಲಿ ಇದೆ ಮನೋಧೈರ್ಯ, ಛಲದೊಂದಿಗೆ ಏನುಬೇಕಾದರು ಸಾಧಿಸಬಹುದು

ಗದಗ: ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಅಧ್ಯಯನದ ಆಸಕ್ತಿ ಹೊಂದಿ ಸ್ವವಿಕಾಸದ ಕಡೆ ಮುನ್ನಡೆಯಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.

ನಗರದ ಜೆಟಿ ಪಪೂ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಾಣಿಜ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಜಗತ್ತು ನಮ್ಮ ಕೈಯಲ್ಲಿ ಇದೆ ಮನೋಧೈರ್ಯ, ಛಲದೊಂದಿಗೆ ಏನುಬೇಕಾದರು ಸಾಧಿಸಬಹುದು ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಆರೋಗ್ಯ ನಿರುದ್ಯೋಗದಂತ ಬೃಹತ ಸಮಸ್ಯೆ ಭಾರತ ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಕ ಪರಿಹಾರ ಕಂಡುಕೊಳ್ಳಬಹುದು, ಜಾಗತಿಕ ಮಟ್ಟದ ದೊಡ್ಡ ಪ್ರಶಸ್ತಿ ಎನಿಸಿಕೊಂಡ ನೋಬೆಲ್ ಪಾರಿತೋಷಕ ಪಡೆದ ಮೊದಲ ದೇಶವೆಂದರೆ ಅಮೇರಿಕಾ, ಎರಡನೇ ಸ್ಥಾನದಲ್ಲಿ ಯುಕೆ, ಮೂರನೇ ಸ್ಥಾನದಲ್ಲಿ ಜರ್ಮನ ದೇಶವಿದ್ದರೆ ನಮ್ಮ ಭಾರತ ಕೇವಲ ಕೈ ಬೆರಳೆಣಿಕೆಯಷ್ಟು ಪ್ರಶಸ್ತಿ ಪಡೆದಿರುವುದು ವಿಷಾದನಿಯ ಸಂಗತಿ. ಹಾಗಾಗಿ ಭಾವಿ ಭವಿಷ್ಯತಿನ ವಿದ್ಯಾರ್ಥಿಗಳಾದ ತಾವು ಭಾರತಕ್ಕೆ ಮುಂಬರುವ ದಿನಮಾನಗಳಲ್ಲಿ ನೋಬೆಲ್ ಪ್ರಶಸ್ತಿ ತಂದು ಕೊಡುವ ನಿಟ್ಟಿನಲ್ಲಿ ಏಕೆ...? ಹೇಗೆ...? ಎಂಬ ಪ್ರಶ್ನಾತ್ಮಕ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ 94 ಶಾಲಾ ತಂಡಗಳು, ವಾಣಿಜ್ಯ ಮೇಳದಲ್ಲಿ 18 ಪ್ರೌಢಶಾಲಾ ತಂಡಗಳು ಭಾಗವಹಿಸಿದವು. ವಿಜ್ಞಾನ ವಸ್ತು ಪ್ರದರ್ಶನ ವಿಭಾಗದಲ್ಲಿ ಚೇತನ ತೊಂಡಿಹಾಳ ಮತ್ತು ಇಕ್ಬಾಲ್ ಕೊಟಗಿ ಜೆಸಿ ಪ್ರೌಢಶಾಲೆ ಗದಗ ಪ್ರಥಮ ಬಹುಮಾನ ₹5000, ವೆಂಕಟೇಶ ಕೇರಿ ಮತ್ತು ಅಮೃತ ಗಾಳಪ್ಪಣ್ಣವರ ಶ್ರೀ ಮಹಾವೀರ ಜೈನ್‌ ಇಂಗ್ಲೀಷ ಮಾಧ್ಯಮ ಪ್ರೌಢಶಾಲೆ ಗದಗ ದ್ವಿತೀಯ ₹3000, ಅಂಕಿತಾ ಇಟಗಿ ಮತ್ತು ಅಶ್ವಿನಿ ಬೇಂದ್ರೆ ತೃತೀಯ ಸ್ಥಾನ ₹ 2000 ಪಡೆದಿದ್ದಾರೆ. ಜಾಹೀರಾತು ಮಾಡಿ ಗೆಲ್ಲಿ ಸ್ಥರ್ಧೆಯಲ್ಲಿ ನಿವೇದಿತಾ ದಾಸರ ಮತ್ತು ಭಾರತಿ ಮ್ಯಾಗಡಿ ಬಿ.ಎಂ.ಎ ಪ್ರೌಢಶಾಲೆ ಗದಗ ಪ್ರಥಮ ಸ್ಥಾನ ₹ 2000, ಕ್ಷೀತಿ ಟಕ್ಕರ್ ಹಾಗೂ ಜುಬಾ ಅಂಜುಮ ಕೊಪ್ಪಳ ಸಿಡಿಓ ಜೈನ್ ಪ್ರೌಢಶಾಲೆ ದ್ವಿತೀಯ ಸ್ಥಾನ ₹1500, ಕಾವ್ಯಾ ಬನ್ನಿಕೊಪ್ಪ ಹಾಗೂ ದೀಪಾ ಭಾಂಡಗೆ ಜೆ.ಟಿ. ಇಂಗ್ಲೀಷ ಮಾಧ್ಯಮ ಶಾಲೆ ತೃತೀಯ ಸ್ಥಾನ ₹1000 ಪಡೆದಿದ್ದಾರೆ. ಪತ್ರಿಕಾ ಜಾಹೀರಾತಿನಲ್ಲಿ ಸಾದಿಯಾ ಖಾಜಿ ಹಾಗೂ ಪಾಯಲ್ ಸೋಲಂಕೆ ಸಿಡಿಓ ಜೈನ್‌ ಪ್ರೌಢಶಾಲೆ ಪ್ರಥಮ ₹2000, ಶ್ರೀನಿವಾಸ ಕಥಣಿ, ಪುನೀತರಾಜ ನಿಂಬಣ್ಣವರ ದ್ವಿತೀಯ ಸ್ಥಾನ ₹15000, ಸಂಜನಾ ವೀರಾಪೂರ, ಶಂಶ್ಯಾವಿ ಕಮ್ಮಾರ ಎಸ್.ಎ.ವಿ ಪೌಢಶಾಲೆ ಅಬ್ಬಿಗೇರಿ ತೃತೀಯ ಸ್ಥಾನ ₹1000 ಪಡೆದಿದ್ದಾರೆ.

ಈ ವೇಳೆ ಪದವಿ ಪ್ರಾ. ಪ್ರೊ.ಪಿ.ಜಿ.ಪಾಟೀಲ ಸೇರಿದಂತೆ ಸಿಬ್ಬಂದಿ ಇದ್ದರು. ಪಪೂ ಪ್ರಾ. ಪ್ರೊ.ಎಸ್.ಬಿ. ಹಾವೇರಿ ಸ್ವಾಗತಿಸಿದರು. ನೇತ್ರಾವತಿ ನಾಗಲೋಟಿಮಠ, ಸೌಭಾಗ್ಯ ಹಿರೇಮಠ ನಿರೂಪಿಸಿದರು. ಡಾ.ಎನ್.ಎನ್. ಗೊರವರ ವಂದಿಸಿದರು.

Share this article