ವಿದ್ಯಾರ್ಥಿಗಳು ಓದಿನೆಡೆ ಹೆಚ್ಚಿನ ಗಮನನೀಡಲಿ

KannadaprabhaNewsNetwork |  
Published : Sep 11, 2025, 12:04 AM IST
ಸಿಕ್ಯಾಬ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ | Kannada Prabha

ಸಾರಾಂಶ

ನಮ್ಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಓದುಗರೇ ನಾಯಕರಾಗಿರುವುದರಿಂದ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ನೀಡಬೇಕು

ಕನ್ನಡಪ್ರಭ ವಾರ್ತೆ ವಿಜಯಪುರ

ಪರಿಸರ ಮತ್ತು ಸಮಾಜದ ಬಗ್ಗೆ ಎಂಜಿನಿಯರ್‌ಗಳ ಮೌಲ್ಯ ಅತ್ಯಂತ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಎಸ್ಐಇಟಿಯ ಹಳೆಯ ವಿದ್ಯಾರ್ಥಿ ಸಲ್ಮಾನ್ ಉಸ್ಮಾನಿ ತಿಳಿಸಿದರು.

ನಗರದ ಸಿಕ್ಯಾಬ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಸಿಕ್ಯಾಬ್ ಎಸ್ಐಇಟಿ ಸೆಮಿನಾರ್ ಹಾಲ್‌ನಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ನಮ್ಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಓದುಗರೇ ನಾಯಕರಾಗಿರುವುದರಿಂದ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.

ಡಾ.ಶುಜಾ ಪುಣೇಕರ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ರಕ್ತಹೀನತೆ, ಆರೋಗ್ಯ ಕ್ರಮಗಳ ಸಮಗ್ರ ಬೆಳವಣಿಗೆ ಸಹಯೋಗದ ಮಹತ್ವ ಅರಿಯಬೇಕು ಎಂದರು. ಸಿಕ್ಯಾಬ್ ಶಿಕ್ಷಣ ಸಂಸ್ಥೆಯು ಈಗಾಗಲೇ 9 ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಭಾರತ ದೇಶವು ಕೃಷಿಯಿಂದ ತಂತ್ರಜ್ಞಾನದತ್ತ ಮುನ್ನಡೆಯುತ್ತಿದೆ. ಭಾರತದ ಬೆಳವಣಿಗೆಗೆ ಕೊಡುಗೆ ನೀಡಲು ನಾವು ನಮ್ಮ ಎಂಜಿನಿಯರ್‌ಗಳನ್ನು ಉತ್ತಮ ವಜ್ರಗಳಾಗಿ ಹೊಳಪು ಮಾಡುತ್ತೇವೆ ಎಂದರು.

ಡಾ.ಎಂ.ಡಿ.ಯಾಸೀನ್ ಸ್ವಾಗತಿಸಿದರು. ಪ್ರೊ.ನೇತ್ರಾವತಿ ಪುರೋಹಿತ ನಿರೂಪಿಸಿದರು. ಪ್ರೊ.ಶಿರೀನ್ ಮುಲ್ಲಾ ವಂದಿಸಿದರು. ಎಸ್ಐಇಟಿ ಪ್ರಾಚಾರ್ಯ ಡಾ.ಸೈಯದ್ ಅಬ್ಬಾಸ್‌ಅಲಿ, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ ಮೇತ್ರಿ, ಡಾ.ಅಬ್ಬಾಸ್‌ಅಲಿ ದುಂಡಸಿ, ಡಾ.ಅಸ್ಲಂ ಕರ್ಜಗಿ, ಡಾ.ರವಿ ಹೊಸಮನಿ, ಪ್ರೊ.ಸಚಿನ ಪಾಂಡೆ, ಡಾ.ಮಹಮ್ಮದ್ ಜಿಯಾವುಲ್ಲಾ ಚೌಧರಿ, ಪ್ರೊ.ಆರೀಫ್ ಮಕಾಂದಾರ, ಪ್ರೊ.ನ್ಯಾಮತುಲ್ಲಾ ಪಟೇಲ, ಪ್ರೊ.ಜಿ.ವಿ.ನಂದಿ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ