ಬದುಕಿನ ಕೊರತೆಗಳ ನಡುವೆಯೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವಿರಲಿ: ಮಹಾಂತಪ್ಪ

KannadaprabhaNewsNetwork |  
Published : Aug 27, 2026, 01:30 AM IST
 | Kannada Prabha

ಸಾರಾಂಶ

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಬಿ.ಎ., ಬಿ.ಕಾಂ. ಮತ್ತು ಬಿ.ಸಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ನಾವು ನಿಮ್ಮೊಂದಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭವಾರ್ತೆ ಸಿಂಧನೂರು

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಬಿ.ಎ., ಬಿ.ಕಾಂ. ಮತ್ತು ಬಿ.ಸಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ನಾವು ನಿಮ್ಮೊಂದಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡ ವಿಭಾಗದ ಮುಖ್ಯಸ್ಥ ಮಹಾಂತಪ್ಪ ಕೊಡಗಲಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ವೈಯಕ್ತಿಕ ಬೆಳವಣಿಗೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾವಂತರಾಗುವ ಮೊದಲು ನಾವೆಲ್ಲರೂ ಉತ್ತಮ ಮನುಷ್ಯರಾಗುವುದು ಅತ್ಯಗತ್ಯ. ಜೊತೆಗೆ ಬದುಕಿನ ಕೊರತೆಗಳ ನಡುವೆಯೂ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಎಲ್ಲರೂ ಸಮಾಜವನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು ಪ್ರತ್ಯೇಕಿಸುವ ಗೋಡೆಯಾಗಬಾರದು. ಬೆಳಕು ನೀಡುವ ದೀಪ ಹಚ್ಚಬೇಕೇ ಹೊರತು ಬೆಂಕಿ ಹಚ್ಚಬಾರದು ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ಪ ಮಾತನಾಡಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ಕಾಲೇಜು ಹೊಂದಿದೆ. ಇಲ್ಲಿ ಶಿಸ್ತು, ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಹೋಗಲಾಗುತ್ತಿದೆ. ವಿದ್ಯಾರ್ಥಿನಿಯರು ಕಾಲೇಜಿಗೆ ಸುಂದರ ಕನಸುಗಳನ್ನು ಕಟ್ಟಿಕೊಂಡು ಬಂದಿರುತ್ತೀರಿ ಅದಕ್ಕೆ ತಕ್ಕಂತೆ ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.---

ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ತಮ್ಮ ತಮ್ಮ ವಿಷಯಗಳ ಪಠ್ಯಕ್ರಮ, ಭವಿಷ್ಯದ ಅವಕಾಶಗಳು ಮತ್ತು ಕಾಲೇಜಿನ ವಿವಿಧ ಕೋಶಗಳ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಉಪನ್ಯಾಸಕರಾದ ಮುದುಕಪ್ಪ, ಡಾ.ಮುದುಕಪ್ಪ ಕೆ.,ಡಾ.ಮದಗಪ್ಪ, ಜಯಪ್ಪ, ಮಲ್ಲೇಶ, ಸಿದ್ಧರಾಮೇಶ್ವರ, ಬಸವರಾಜ ಕೆ., ಡಾ.ಮಂಜುನಾಥ,

ಡಾ.ರಂಗವಿಠಲ ಪಿ., ಎಂ.ಡಿ.ಲಿಯಾಖಿತ್, ಅಶ್ವಿನಿ ಹಾಗೂ ಕಾಲೇಜಿನ ಸಿಬ್ಬಂದಿ ಪಾಲ್ಗೊಂಡಿದ್ದರು. ಡಾ.ಮದಗಪ್ಪ ಬಂಡಾರಿ ಸ್ವಾಗತಿಸಿದರು, ಯರಿಯಪ್ಪ ಬೆಳಗುರ್ಕಿ ನಿರೂಪಿಸಿದರು, ಗೋಪಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು