ಹೆತ್ತವರನ್ನು ಗುರು ಹಿರಿಯರನ್ನು ವಿದ್ಯಾರ್ಥಿಗಳು ಗೌರವಿಸಿ

KannadaprabhaNewsNetwork |  
Published : Jan 04, 2025, 12:33 AM IST
3ಎಚ್ಎಸ್ಎನ್5 : ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆರಳಾಪುರದ ಶ್ರೀವಿದ್ಯಾಗಣಪತಿ ಫ್ರೌಡಶಾಲೆಯ 1993-94 ನೇ ಸಾಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು. | Kannada Prabha

ಸಾರಾಂಶ

ತಂದೆ, ತಾಯಿ ಗುರು- ಹಿರಿಯರನ್ನು ಗೌರವಿಸಬೇಕು. ನಿಮ್ಮ ಮಕ್ಕಳಿಗೆ ಉತ್ತಮ ವಿಚಾರವನ್ನು ತಿಳಿಸಿಕೊಟ್ಟು ಗುಣಮಟ್ಟ ಶಿಕ್ಷಣ ನೀಡಿ ಎಂದು ಹಿರಿಯ ಶಿಕ್ಷಕ ವೀರಭದ್ರಪ್ಪ ಬಿ.ಪಿ ಹೇಳಿದರು. ಬಸವಾಪಟ್ಟಣ ಸಮೀಪದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಬಿ.ಜಿ.ಎಸ್ ಕಲ್ಯಾಣ ಮಂಟಪದಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಸಮೀಪದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಬಿ.ಜಿ.ಎಸ್ ಕಲ್ಯಾಣ ಮಂಟಪದಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು.

ಈ ಶಾಲೆ ಕೇರಳಾಪುರ ಗ್ರಾಮದಲ್ಲಿ ಪ್ರಾರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದೆ. ಈ ನಿಟ್ಟಿನಲ್ಲಿ ಅನೇಕರು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆ ಗಳಿಸಿದ್ದಾರೆ. ಶಿಕ್ಷಣಕ್ಕೆ ಉತ್ತಮ ತಳಪಾಯದಿಂದ ಅನೇಕರು ಖ್ಯಾತ ವ್ಯಕ್ತಿರಾಗಿದ್ದಾರೆ.

ಹಿರಿಯ ಶಿಕ್ಷಕ ವೀರಭದ್ರಪ್ಪ ಬಿ.ಪಿ ಮಾತನಾಡಿ, ತಂದೆ, ತಾಯಿ ಗುರು- ಹಿರಿಯರನ್ನು ಗೌರವಿಸಬೇಕು. ನಿಮ್ಮ ಮಕ್ಕಳಿಗೆ ಉತ್ತಮ ವಿಚಾರವನ್ನು ತಿಳಿಸಿಕೊಟ್ಟು ಗುಣಮಟ್ಟ ಶಿಕ್ಷಣ ನೀಡಿ ಎಂದರು. ಹಿರಿಯ ಶಿಕ್ಷಕರಾದ ಬಿ.ಪಿ ವೀರಭದ್ರಪ್ಪ, ಕೆ.ಎಸ್ ರಾಜಶೇಖರಯ್ಯ, ಪುಟ್ಟಲಿಂಗಯ್ಯ, ಜಿ.ಟಿ ನಾಗರಾಜು, ಉಷಾ, ಕೆ.ಎಸ್ ಕೃಷ್ಣ, ಸ್ವಾಮಿ, ದಿ. ಶಿಕ್ಷಕ ಕೋಂದಡಪಾಣಿ, ರಾಜಶೇಖರಯ್ಯ, ಸಿಂಗ್ರಿಗೌಡರು, ರಾಮಪ್ಪ, ಕೃಷ್ಣಪ್ಪ ಕುಟುಂಬದವರನ್ನು ಸನ್ಮಾನಿಸಲಾಯಿತು

ಇದೇ ವೇಳೆ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಾದ ಭಾಸ್ಕರ್, ಮಧುಸೂದನ್, ಸತೀಶ್‌ಕುಮಾರ್, ಹೇಮಂತ್‌ಕುಮಾರ್ ಬಿ.ವಿ, ರಾಘವೇಂದ್ರ, ಕಿರಣ್, ಲೋಕೇಶ್, ಚಿನ್ನಸ್ವಾಮಿ, ಲೋಕೇಶ್, ಶಿವಣ್ಣ, ಸುಕನ್ಯ, ಸುಮಾ ಇನ್ನು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾಏಕಿ ಕಾರ್ಮಿಕ ಸಂಹಿತೆ ಜಾರಿ ಖಂಡಿಸಿ ಸಿಐಟಿಯು ಪ್ರತಿಭಟನೆ
ಪದವೀಧರರು ಜಾಗತಿಕ ನಾಗರೀಕರಾಗಿ ಹೊರಹೊಮ್ಮಬೇಕು: ಪ್ರೊ.ನಿರಂಜನ