ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಅಣ್ಣೂರು ಗೇಟ್ ಬಳಿ ಇರುವ ಜನನಿ ವಿದ್ಯಾ ಸಂಸ್ಥೆ ಜನನಿ ಜೋಗುಳ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಕೋವಿಡ್‌ನಿಂದ ಆನ್‌ಲೈನ್ ಶಿಕ್ಷಣ ಪಡೆಯಲು ಮುಂದಾದ ವಿದ್ಯಾರ್ಥಿಗಳು ಮೊಬೈಲ್ ಗೀಳು ಹೆಚ್ಚಿಸಿಕೊಂಡು ಹೆಚ್ಚು ಸಮಯವನ್ನು ಮೊಬೈಲ್ ಬಳಕೆಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಬಿಡಬೇಕೆಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೇ ಮಾತ್ರ ಶಾಲೆ ಹಾಗೂ ಪೋಷಕರಿಗೆ ಒಳ್ಳೇಯ ಹೆಸರು ಬರಲು ಸಾಧ್ಯ, ವಿದ್ಯಾರ್ಥಿಗಳು ನಿರಂತರ ಓದಿನೊಂದಿಗೆ ಸಾಧನೆ ಮಾಡಬೇಕು, ಗುರು ಹಿರಿಯರಿಗೆ ಗೌರವ ಕೊಟ್ಟು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕೆಂದರು.ಜನನಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಜಗದೀಶ್ ಮಾತನಾಡಿ, ಜನನಿ ವಿದ್ಯಾ ಸಂಸ್ಥೆಯೂ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಪಠ್ಯದ ಜೊತೆಗೆ ಪಠ್ಯ್ತೇತ್ತರ ಚಟುವಟಿಕೆಗಳಲ್ಲಿಯೂ ವಿಶೇಷ ಗಮನ ಹರಿಸಲಾಗುತ್ತಿದೆ. ಸಂಸ್ಥೆ ವಿದ್ಯಾರ್ಥಿಗಳ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವುದು ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿ.ಆರ್ ಸೌಮ್ಯ ಜಗದೀಶ್, ಜೆ.ಬ್ಯಾಡರಹಳ್ಳಿ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ರಂಜಿತ್, ಜನನಿ ಎಜುಕೇಷನ್ ಸೊಸೈಟಿ ಸದಸ್ಯರಾದ ಮೆಣಸಗೆರೆ ಕುಳ್ಳೇಗೌಡ, ಮಹದೇವು ಸೇರಿದಂತೆ ತಾಲೂಕುಕು ಖಾಸಗಿ ಶಾಲೆಗಳ ಮುಖ್ಯಸ್ಥರು ಭಾಗವಹಿಸಿದ್ದರು.