ಹೊಸಕೋಟೆ: ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಗಳಿಸುವುದು ಅಗತ್ಯವಾಗಿದೆ. ಕಠಿಣ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅರುಣೋದಯ ಪಪೂ ಕಾಲೇಜಿನ ಅಧ್ಯಕ್ಷ ಶ್ರೀನಾಥ್ ಹೇಳಿದರು.
ವಿದ್ಯಾವನ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಎಂತಹುದೇ ಕಠಿಣ ಸವಾಲುಗಳನ್ನು ಸಂಕಲ್ಪ ಮತ್ತು ಪರಿಶ್ರಮದಿಂದ ಎದುರಿಸಲು ಆಶಾವಾದಿಯಾಗಬೇಕು. ತಮ್ಮ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಬೇಕು ಎಂದು ಹೇಳಿದರು.
ದ್ವಿತೀಯ ಪಿಯು ವಿದ್ಯಾರ್ಥಿಗಳು ಜ್ಞಾನ ಸ್ವರೂಪಿಯಾದ ದೀಪವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅರುಣೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿನೋದ್, ಟ್ರಸ್ಟಿಗಳಾದ ಬೈಯ್ಯರೆಡ್ಡಿ, ಲಕ್ಷ್ಮೀ ವೆಂಕಟೇಶ್, ಡಾ.ಮಂಜುನಾಥ್, ಶಿಕ್ಷಕರಾದ ಪ್ರಸನ್ನಕುಮಾರ್, ವೆಂಕಟರಮಣಪ್ಪ, ಬೈಯ್ಯರೆಡ್ಡಿ, ಉಪನ್ಯಾಸಕರಾದ ವಿನಯ್ ಕುಮಾರ್, ನಾಗವೇಣಿ, ಸುಗುಣ, ತೇಜಸ್ವಿನಿ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.(ಫೋಟೋ ಕ್ಯಾಫ್ಷನ್)ನಂದಗುಡಿಯ ಅರುಣೋದಯ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ಕಲರವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಂಸ್ಥೆ ಅಧ್ಯಕ್ಷ ಶ್ರೀನಾಥ್ ಇತರರು ಉದ್ಘಾಟಿಸಿದರು.