ಯಲಬುರ್ಗಾ: ವಿಜಯನಗರ ಸಾಮ್ರಾಜ್ಯ ದೊರೆ ಶ್ರೀಕೃಷ್ಣದೇವರಾಯರ ಕೊಡುಗೆ ಅಮೂಲ್ಯವಾಗಿದ್ದು, ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಧೀರ್ ಕೊರ್ಲಹಳ್ಳಿ ಹೇಳಿದರು.
ಇತಿಹಾಸ ಪುಟದಲ್ಲಿ ಅಜರಾಮರವಾಗಿರುವ ವಿಜಯನಗರ ಸಾಮ್ರಾಜ್ಯದ ಚರಿತ್ರೆ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಕೃಷ್ಣದೇವರಾಯ ಆಡಳಿತ, ನಾಡಪ್ರೇಮ ಸೇರಿದಂತೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಶ್ರೀಕೃಷ್ಣದೇವರಾಯ ನಾಟಕ ಪ್ರದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಯುವ ಸಮುದಾಯದಲ್ಲಿ ನಾಡಿಗೆ ತಮ್ಮದೇ ಕೊಡುಗೆ ನೀಡಿರುವಂತಹ ರಾಜರ ಇತಿಹಾಸ ತಿಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ.ಇಡೀ ದೇಶಕ್ಕೆ ಹಂಪಿಯ ಆಡಳಿತ ಕಲೆ ವಾಸ್ತುಶಿಲ್ಪ ಮಹತ್ವದ ನೀಡಿದೆ. ಕಾಲೇಜು ದಿನಗಳಲ್ಲಿ ರಂಗಭೂಮಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶ್ರೀಕೃಷ್ಣದೇವರಾಯರು ತಮ್ಮ ಆಡಳಿತಾವಧಿಯಲ್ಲಿ ಕನ್ನಡ ನಾಡಿನ ಉಸಿರಿಗಾಗಿ ಹೋರಾಡಿದ್ದಾರೆ. ಇತಿಹಾಸದಲ್ಲಿ ಅವರ ಆಡಳಿತ ಅಜರಾಮರವಾಗಿ ಉಳಿದಿದೆ. ಹಂಪಿ ಕಲೆ ವಾಸ್ತುಶಿಲ್ಪದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದಕ್ಕೆ ರಾಯರ ಕೊಡುಗೆ ಅನನ್ಯವಾಗಿದೆ. ವಿದ್ಯಾರ್ಥಿಗಳು ನಮ್ಮ ನಾಡಿನ ರಾಜರ ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು ಎಂದರು.ಪ್ರಾಚಾರ್ಯ ಕೆ.ಎಚ್. ಛತ್ರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಕೃಷ್ಣದೇವರಾಯರ ಆಡಳಿತದಲ್ಲಿ ಸುವರ್ಣಯುಗ ಕಾಣುತ್ತೇವೆ. ಕನ್ನಡ ರಾಜಮನೆತನದಲ್ಲಿ ವಿಜಯನಗರ ಸಾಮ್ರಾಜ್ಯವು ತಮ್ಮ ಇತಿಹಾಸ ಹೊಂದಿದೆ. ಕೊಪ್ಪಳ ವಿವಿಯಿಂದ ನಾಟಕದ ಮೂಲಕ ವಿದ್ಯಾರ್ಥಿಗಳಲ್ಲಿ ಇತಿಹಾಸ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭ ಸಿಡಿಸಿ ಸದಸ್ಯ ಕಳಕಪ್ಪ ಕುರಿ, ಜಯಶ್ರೀ ಕಂದಕೂರು, ವಿರೂಪಾಕ್ಷಯ್ಯ ಗಂಧದ, ವಿಕಾಸ ಉಳ್ಳಾಗಡ್ಡಿ, ರೆಹಮಾನ್ ನಾಯಕ, ಕಳಕೇಶ ಸೂಡಿ, ಬಸವರಾಜ ಓಂಟೇಲಿ, ಲಿಂಗರಾಜ ಪಾಟೀಲ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮಹಾಂತೇಶ ಛಲವಾದಿ, ಪ್ರಾಧ್ಯಾಪಕ ಅಶೋಕ ಕೆಂಚರಡ್ಡಿ, ಶಂಕ್ರಯ್ಯ, ನಂದಾ, ಮಂಜುಳಾ, ಬಿ.ಶಶಿಕುಮಾರ್, ವಂಶಿಕೃಷ್ಣ, ನಾಟಕ ಪ್ರದರ್ಶನ ವಿಭಾಗದ ಕೆ.ಜಗದೀಶ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.