ಸುಬ್ಬಯ್ಯ ಟ್ರಸ್ಟ್‌ ಅಧ್ಯಕ್ಷ ಟಿ.ಸುಬ್ಬರಾಮಯ್ಯ ಇನ್ನಿಲ್ಲ

KannadaprabhaNewsNetwork | Published : Nov 6, 2024 12:35 AM

ಸಾರಾಂಶ

ಶಿವಮೊಗ್ಗ: ನಗರದ ಖ್ಯಾತ ವೈದ್ಯ ಹಾಗೂ ಸುಬ್ಬಯ್ಯ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಡಾ.ನಾಗೇಂದ್ರ ಅವರ ತಂದೆ ಟಿ.ಸುಬ್ಬರಾಮಯ್ಯ (85) ಅವರು ಮಂಗಳವಾರ ನಿಧನರಾದರು.

ಶಿವಮೊಗ್ಗ: ನಗರದ ಖ್ಯಾತ ವೈದ್ಯ ಹಾಗೂ ಸುಬ್ಬಯ್ಯ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಡಾ.ನಾಗೇಂದ್ರ ಅವರ ತಂದೆ ಟಿ.ಸುಬ್ಬರಾಮಯ್ಯ (85) ಅವರು ಮಂಗಳವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಬ್ಬರಾಮಯ್ಯ ಅವರು ನಗರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ರವೀಂದ್ರ ನಗರ ಬಲಮುರಿ ಗಣಪತಿ ದೇವಸ್ಥಾನದ ಸಮೀಪವಿರುವ ಅವರ ನಿವಾಸದಲ್ಲಿ ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ಕೃಷಿಕರಾದ ಟಿ.ಸುಬ್ಬರಾಮಯ್ಯ 2003ರಲ್ಲಿ ಆರಂಭಿಸಲಾದ ಸುಬ್ಬಯ್ಯ ಟ್ರಸ್ಟ್ ಯಶಸ್ವಿಯಾಗಿ ನಡೆಸಿಕೊಂಡು ಬಂದ ಪರಿಣಾಮ ಶಿವಮೊಗ್ಗದಲ್ಲಿ ಮ್ಯಾಕ್ಸ್ ಮತ್ತು ಭರತ್ ನ್ಯೂರೋ ಆಸ್ಪತ್ರೆಗಳನ್ನು ನಿರ್ಮಿಸಲಾಗಿತ್ತು. 2003ರಲ್ಲಿ ಸುಬ್ಬಯ್ಯ ಆಸ್ಪತ್ರೆ ಆರಂಭಗೊಂಡಿತು. ತಡಿಕೇಲ ಸುಬ್ಬಯ್ಯ ಟ್ರಸ್ಟ್‌ನ ಅಡಿ ಆರಂಭಗೊಂಡ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ಟಿ.ಸುಬ್ಬರಾಮಯ್ಯನವರೇ ಸಂಸ್ಥಾಪಕರಾಗಿದ್ದರು. ಅದೇ ರೀತಿ ನಗರದ ಹೊಳೆಹೊನ್ನೂರು ರಸ್ತೆಯಲ್ಲಿ ಸುಬ್ಬಯ್ಯ ಟ್ರಸ್ಟ್ ಮೂಲಕವೇ ಸುಬ್ಬಯ್ಯ ಮೆಡಿಕಲ್ ಕಾಲೇಜು ಆರಂಭಗೊಂಡಿತು.ಸುಬ್ಬರಾಮ್ಮಯ್ಯ ಅವರು ಶಿವಮೊಗ್ಗ ನಗರದಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ನಗರದ ಉದ್ಯಮ ವಲಯಕ್ಕೆ ಗಣಿನಿಯ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಶಿವಮೊಗ್ಗ ನಗರದಲ್ಲಿ ಒಬ್ಬ ಅತ್ಯುತ್ತಮ ಉದ್ಯಮಿಯನ್ನು ಕಳೆದುಕೊಂಡು ಉದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ಕುಟುಂಬ ವರ್ಗಕ್ಕೆ ಹಾಗೂ ಇವರ ಸಮೂಹ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆ ಇವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ.

-- ಮಧು ಬಂಗಾರಪ್ಪ, ಸಚಿವಸಂಸದ ಬಿ.ವೈ.ರಾಘವೇಂದ್ರ ಸಂತಾಪ

ಶಿವಮೊಗ್ಗ: ಸುಬ್ಬಯ್ಯ ಟ್ರಸ್ಟ್ ಮತ್ತು ಮ್ಯಾಕ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ಸುಬ್ಬರಾಮ್ಮಯ್ಯ ಅವರ ನಿಧನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.

ತಡಿಕೇಲ ಸುಬ್ಬಯ್ಯ ಟ್ರಸ್ಟ್‌ನ ಅಡಿ 2003ರಲ್ಲಿ ಆರಂಭಗೊಂಡ ಸುಬ್ಬಯ್ಯ ಮೆಡಿಕಲ್‌ ಕಾಲೇಜಿಗೆ ಟಿ.ಸುಬ್ಬರಾಮಯ್ಯನವರೇ ಸಂಸ್ಥಾಪಕರಾಗಿದ್ದು, ಅನೇಕ ವೈದ್ಯರಿಗೆ ಮಾರ್ಗದರ್ಶಕರಾಗಿದ್ದರು. ಶಿವಮೊಗ್ಗ ನಗರದಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಉದ್ಯಮ ವಲಯದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಅತ್ಯತ್ತಮ ವೈದ್ಯಕೀಯ ಸೇವಾ ಉದ್ಯಮಿಯನ್ನು ಕಳೆದುಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Share this article