ಅದ್ಧೂರಿಯಾಗಿ ನಡೆದ ಸುಬ್ರಮಣ್ಯ ಸ್ವಾಮಿ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jan 17, 2024, 01:45 AM IST
ಫೋಟೋ 16ಪಿವಿಡಿ1ಪಾವಗಡ,ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಶಾಸಕ ಎಚ್.ವಿ.ವೆಂಕಟೇಶ್‌ ಹಾಗೂ ತಹಸೀಲ್ದಾರ್‌ ವರದರಾಜು ಚಾಲನೆ ನೀಡಿದರು.ಫೋಟೋ 16ಪಿವಿಡಿ2ನಾಗಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿಯ ಜಾತ್ರಾಮಹೋತ್ಸವ    ಬ್ರಹ್ಮರಥೋತ್ಸವಕ್ಕೆ ಆಗಮಿಸಿದ್ದ ಶಾಸಕ ವೆಂಕಟೇಶ್‌ ಅವರನ್ನು ತಾ,ಆಡಳಿತದಿಂದ ಸ್ವಾಗತಿ ಕರೆ ತರಲಾಯಿತು.   | Kannada Prabha

ಸಾರಾಂಶ

ಪಾವಗಡ ತಾಲೂಕಿನ ನಾಗಲಮಡಿಕೆ ಅಂತ್ಯ ಸುಬ್ರಮಣ್ಯ ಸ್ವಾಮಿ ರಥೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪಾವಗಡ

ರಾಜ್ಯ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಇಲ್ಲಿನ ಕರ್ನಾಟಕದ ಸುಪ್ರಸಿದ್ಧ ತಾಲೂಕಿನ ನಾಗಲಮಡಿಕೆಯ ಶ್ರೀ ಅಂತ್ಯ ಸುಬ್ರಮಣ್ಯಸ್ವಾಮಿಯ ಜಾತ್ರಾ ಮಹೋತ್ಸವ ಮಂಗಳವಾರ ಅತ್ಯಂತ ವಿಜೃಂಭಣೆ ಹಾಗೂ ಯಶಸ್ವಿಯಾಗಿ ನೆರೆವೇರಿಸಲಾಯಿತು.

ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸುಬ್ರಮಣ್ಯಸ್ವಾಮಿಯ ಜಾತ್ರಾಮಹೋತ್ಸವದ ರಥೋತ್ಸವಕ್ಕೆ ಬೆಳಿಗ್ಗೆ 12 ಗಂಟೆಗೆ ಶಾಸಕ ಎಚ್‌.ವಿ. ವೆಂಕಟೇಶ್‌ ಹಾಗೂ ತಹಸೀಲ್ದಾರ್‌ ವರದರಾಜು ಚಾಲನೆ ನೀಡಿದ್ದು, ಶುದ್ಧ ಪುಷ್ಟಿಯ ಹಿನ್ನೆಲೆಯಲ್ಲಿ ಆಂಧ್ರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆನೇಕ ನಗರ ಹಾಗೂ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯ ಭಕ್ತ ಸಾಗರ ಹರಿದು ಬರುವ ಮೂಲಕ ದೇವಸ್ಥಾನ ಮುಂಭಾಗದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡಿ ಶ್ರದ್ಧಾಭಕ್ತಿಯಿಂದ ದೇವರ ಕೃಪೆಗೆ ಪಾತ್ರರಾಗಿದ್ದು ವಿಶೇಷವಾಗಿತ್ತು.

ಬೆಳಗಿನ ಜಾವದಿಂದಲೇ ಸುಬ್ರಮಣ್ಯೇಶ್ವರ ಸ್ವಾಮಿಗೆ ಶಾಸ್ತ್ರೋಕ್ತವಾಗಿ ವಿವಿಧ ರೀತಿಯ ಪೂಜಾ ಕೈಂಕರ್ಯ ನೆರವೇರಿಸಿದ್ದು, ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ದೇವಸ್ಥಾನದ ಬ್ರಹ್ಮ ರಥೋತ್ಸವಕ್ಕೆ ವಿಶೇಷ ಹೋಮ ಹವನಗಳನ್ನು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಉಪವಾಸದೊಂದಿಗೆ ಆಗಮಿಸಿದ್ದ ಭಕ್ತರು ಅಲ್ಲಿಯೇ ಅಡಿಗೆ ಮಾಡಿಕೊಳ್ಳುವ ಮೂಲಕ ಶ್ರೀ ಸುಬ್ರಮಣ್ಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ಪೀಕರಿಸುವ ಮೂಲಕ ಆಹಾರ ಸೇವನೆ ಮಾಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಚ್.ವಿ. ವೆಂಕಟೇಶ್, ಇಲ್ಲಿನ ಅಂತ್ಯ ಸುಬ್ರಮಣ್ಯಸ್ವಾಮಿ ದೇವಸ್ಥಾನ ನಾಡಿನಾದ್ಯಂತ ಪ್ರಸಿದ್ಧಿಯಾಗಿದ್ದು, ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಕೆಲ ಕಾರಣಗಳ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕುಂಠಿತವಾಗಿದೆ. ದೇವಸ್ಥಾನದಲ್ಲಿ ಪಾರುಪತ್ತೆ ನಡೆಸುವ ಮತ್ತು ಪ್ರಧಾನ ಅರ್ಚಕರ ನಡುವಿನ ಬಿನ್ನಾಭಿಪ್ರಾಯ ಸಹ ಒಂದು ಕಾರಣವಾಗಿದೆ. ಈ ಪರಿಣಾಮ ದೇವಸ್ಥಾನದ ಪ್ರಗತಿಗೆ ಸ್ಪಲ್ಪ ಮಟ್ಟಿನ ಅಡ್ಡಿ ಆಗುತ್ತಿದೆ. ಈ ಸಂಬಂಧ ಈಗಾಗಲೇ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಬದ್ರಿನಾಥರನ್ನು ಭೇಟಿಯಾಗಿ ಚರ್ಚಿಸಿ ಸಮಗ್ರ ಮಾಹಿತಿ ಪಡೆದಿದ್ದೇನೆ. ನೀವಿಬ್ಬರೂ ಅನುಸರಿಸಿಕೊಂಡು ಹೋದರೆ ಮಾತ್ರ ದೇವಸ್ಥಾನ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದ್ದು, ಇನ್ನೂ ಈ ಬಗ್ಗೆ ರಾಜ್ಯದ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಇಲ್ಲಿನ ದೇವಸ್ಥಾನದ ಅಭಿವೃದ್ಧಿ ಕುರಿತು ಚರ್ಚೆಸುತ್ತೇನೆ ಎಂದರು.

ಹೀಗಿಗಲೇ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಾಗಿರುವಂತಹ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ವರದಿ ತಯಾರಿಸುವಂತೆ ಅಧಿಕಾರಿಗಳಿಗೂ ಸೂಚಿಸಿದ್ದು, ದೇವಸ್ಥಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿದ್ದು ಮುಂದಿನ ವರ್ಷ ಇಲ್ಲಿನ ಶ್ರೀ ಸುಬ್ರಮಣ್ಯಸ್ವಾಮಿಯ ಜಾತ್ರಾ ಮಹೋತ್ಸವದ ವೇಳೆಗೆ ಭಕ್ತರು ಹಾಗೂ ಜನ ಸಾಮಾನ್ಯರು ಶುಭ ಸುದ್ದಿ ಕೇಳಲಿರುವ ಭರವಸೆ ವ್ಯಕ್ತಪಡಿಸಿದರು.

ಹಚ್ಚಿನ ಸಂಖ್ಯೆಯ ಭಕ್ತರ ಆಗಮನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಅಗತ್ಯ ಕ್ರಮ ವಹಿಸಿದ್ದು, ಇನ್ನೂ ಗ್ರಾಮಾಂತರ ವೃತ್ತ ಸಿಪಿಐ, ತಿರುಮಣಿಯ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿತ್ತು.

ತಹಸೀಲ್ದಾರ್ ಡಿ.ಎನ್. ವರದರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪಾವಗಡ ಪುರಸಭೆಯ ಸದಸ್ಯ ಪಿ.ಎಚ್. ರಾಜೇಶ್, ತೆಂಗಿನ ಕಾಯಿ ರವಿ, ಮುಖಂಡರಾದ ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌ (ನಾನಿ) ಎನ್.ಆರ್‌. ಅಶ್ವಥ್, ನಾಗಲಮಡಿಕೆ ಮಂಜುನಾಥ್, ನಾಗರಾಜು, ಗ್ರೆಡ್‌-2 ಶಿರಸೇದಾರ್ ನರಸಿಂಹಮೂರ್ತಿ, ಕಂದಾಯ ನಿರೀಕ್ಷಕರಾದ ರಾಜಗೋಪಾಲ್, ಕಿರಣ್ ಕುಮಾರ್, ರವಿಕುಮಾರ್, ನಾರಾಯಣ್, ದೇವಸ್ಥಾನದ ಪ್ರಧಾನ ಅರ್ಚಕ ಬದ್ರಿನಾಥ್, ಸಿಪಿಐ ಗಿರೀಶ್, ತಿಮ್ಮಾರೆಡ್ಡಿ, ಮಧುಸೂದನ್ ಅಸಿಸ್‌ ಸೇರಿದಂತೆ ಆನೇಕ ಮಂದಿ ಗಣ್ಯರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ