ಕೃಷಿ ಸಿಂಚಾಯಿಯಡಿ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ

KannadaprabhaNewsNetwork |  
Published : May 27, 2025, 01:58 AM IST
ಚಿತ್ರ :೨೬ಎಚ್‌ಬಿಎಚ್೩ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದಲ್ಲಿ ಸಹಾಯಧನದಡಿ ಸಮೃದ್ಧವಾಗಿ ಬೆಳೆದ ಬಾಳೆ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. | Kannada Prabha

ಸಾರಾಂಶ

ತಾಲೂಕಿನ ತೋಟಗಾರಿಕೆ ಬೆಳೆಗಾರರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ವಿವಿಧ ಬೆಳೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿತಾಲೂಕಿನ ತೋಟಗಾರಿಕೆ ಬೆಳೆಗಾರರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ವಿವಿಧ ಬೆಳೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಬಹುವಾರ್ಷಿಕ ಬೆಳೆಗಳಿಗೆ ಕನಿಷ್ಠ ೨ರಿಂದ ೫ ಹೆ.ವರೆಗೆ ಶೇ.೪೫ರಷ್ಟು ಸಹಾಯ ಧನ ನೀಡಲಾಗುವುದು. ಮನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಪ್ರದೇಶ ವಿಸ್ತರಣೆಗಾಗಿ ಮಾವು, ನಿಂಬೆ, ದಾಳಿಂಬೆ, ಪಪ್ಪಾಯ, ಸೀಬೆ, ಮಲ್ಲಿಗೆ, ಡ್ರಾಗನ್, ತೆಂಗು, ಗುಲಾಬಿ, ಕರಿಬೇವು, ಎಲೆಬಳ್ಳಿ, ಬಾಳೆ ಬೆಳೆಗಳ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ. ಸಾಮಾನ್ಯವರ್ಗದ ರೈತರು ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣ ಪತ್ರ ಒದಗಿಸಬೇಕು. ಹನಿ ನೀರಾವರಿ ಪದ್ದತಿ ಅಳವಡಿಕೆಗೆ ಎಲ್ಲ ವರ್ಗದ ರೈತರಿಗೆ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಠ ೨ ಹೆ.ವರೆಗೆ ಶೇ.೯೦ ರಷ್ಟು ಸಹಾಯಧನ ವಿತರಿಸಲಾಗುವುದು.ರಾಷ್ಟ್ರೀಯ ತೋಟಗಾರಿಕ ಮಿಷನ್ ಯೊಜನೆಯಡಿ ಎಲ್ಲಾ ವರ್ಗದ ರೈತರಿಗೆ ಬಹು ವಾರ್ಷಿಕ ಬೆಳೆಗಳು ಮತ್ತು ಅಲ್ಪಾವಧಿ ಬೆಳೆಗಳಾದ ಹೂ ಮತ್ತು ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆಗಾಗಿ ಶೇ.೫೦ ರಷ್ಟು ಸಹಾಯಧನ ನೀಡಲಾಗುವುದು. ಈರುಳ್ಳಿ ಘಟಕ ನಿರ್ಮಾಣ, ಪ್ಯಾಕ್ ಹೌಸ ನಿರ್ಮಾಣ, ಸಮುದಾಯ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಬಹುವಾರ್ಷಿಕ ಬೆಳೆಗಳಾದ ದಾಳಿಂಬೆ, ಡ್ರಾಗನ್ ಬೆಳೆಗಳ ಬೆಳೆಗಳ ಪ್ರದೇಶ ವಿಸ್ತರಣೆಗಾಗಿ ಎಲ್ಲಾ ವರ್ಗದ ರೈತರಿಗೆ ಶೇ.೪೦ರಷ್ಟು ಸಹಾಯಧನ ನೀಡಲಾಗುವುದು. ರೈತರಿಗೆ ಸ್ಪ್ರೇಯರ್, ವೀಡ್ ಕಟ್ಟರ್, ಪವರ್ ವೀಡರ್ ಪರಿಕರಗಳಿಗೆ ಎಸ್ಸಿಎಸ್ಟಿ ಮತ್ತು ಮಹಿಳೆಯರಿಗೆ ಶೇ.೫೦ರಷ್ಟು ಮತ್ತು ಸಾಮಾನ್ಯ ವರ್ಗದವರಿಗೆ ಶೇ.೪೦ರಷ್ಟು ಸಹಾಯಧನವಿದೆ. ರಾಷ್ಟ್ರೀಯ ತಾಳೆ ಬೆಳೆ ಖಾದ್ಯ ಅಭಿಯಾನ ಯೋಜನೆಯಡಿ ತಾಳೆ ತೋಟ ಸ್ಥಾಪಿಸುವ ರೈತರಿಗೆ ಸಸಿಗಳನ್ನು ಒದಗಿಸಲಾಗುವುದು. ತಾಳೆ ತೋಟಗಳ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ವರ್ಷಗಳ ನಿರ್ವಹಣೆಗೆ ಪ್ರತಿ ರೈತರಿಗೆ ೬೫೦೦ ರೂ. ನೀಡಲಾಗುವುದು. ಕನಿಷ್ಟ ೪ ಹೆಕ್ಟರ್ ತೋಟಗಾರಿಕೆ ಬೆಳೆ ಪ್ರದೇಶ ಹೊಂದಿರುವ ರೈತರಿಗೆ ಗರಿಷ್ಠ ೫ಲಕ್ಷ ರೂ.ವರೆಗೂ ಸಹಾಯಧನ ನೀಡಲಾಗುವುದು. ಮಾಹಿತಿಗೆ ದೂ.೭೪೧೧೮೮೭೬೦೧, ೯೮೮೬೧೨೩೦೭೭, ೭೮೯೯೦೧೨೦೨೨, ೮೬೬೦೧೫೨೯೩೧ ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿದೇರ್ಶಕ ಡಾ. ರಾಜೇಂದ್ರ ತಿಳಿಸಿದ್ದಾರೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ