ಕಠಿಣ ಪರಿಶ್ರಮ, ನಿರಂತರ ಪ್ರಯತ್ನದಿಂದ ಯಶಸ್ಸು: ಅನನ್ಯಾ ಹಿರೇಮಠ

KannadaprabhaNewsNetwork |  
Published : Feb 09, 2026, 02:45 AM IST
ಸಮಾರಂಭವನ್ನು ಅನನ್ಯಾ ಹಿರೇಮಠ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಮಾಡುವುದು ನಮ್ಮ ಗುರಿಯಾಗಬೇಕು.

ಲಕ್ಷ್ಮೇಶ್ವರ: ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನವಿದ್ದರೆ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಾಧ್ಯ ಎಂದು ಮಲ್ಲಕಂಬ ಹಾಗೂ ಯೋಗ ಸಾಧಕಿ ಕುಮಾರಿ ಅನನ್ಯಾ ಸಾಂಬಯ್ಯ ಹಿರೇಮಠ ತಿಳಿಸಿದರು.

ಶನಿವಾರ ಪಟ್ಟಣದ ವಿದ್ಯಾಪೀಠ ಪಾಠಶಾಲೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಮಾಡುವುದು ನಮ್ಮ ಗುರಿಯಾಗಬೇಕು. ಕೇವಲ ಅಂಕ ಗಳಿಕೆಯೊಂದೆ ಶಿಕ್ಷಣವಲ್ಲ, ಕ್ರೀಡೆಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿದಲ್ಲಿ ಅವರಿಗೆ ಸರ್ಕಾರಿ ಉದ್ಯೋಗ ದೊರೆಯುವ ಜತೆ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕ್ರೀಡೆಗೆ ಉತ್ತೇಜನ ನೀಡುವ ಕಾರ್ಯ ಮಾಡಬೇಕು ಎಂದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಮಹಾಬಲೇಶ್ವರಪ್ಪ ಬೇವಿನಮರದ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮತ್ತು ಏಕಾಗ್ರತೆಯನ್ನು ಮೂಡಿಸುತ್ತವೆ ಎಂದರು.ಈ ವೇಳೆ ಬಸವರಾಜ ಮಹಾಂತಶೆಟ್ಟರ, ಪುರಸಭೆಯ ಮಾಜಿ ಸದಸ್ಯ ಗಣಪತಿ ಬೇವಿನಮರದ, ಪುರಸಭೆಯ ಮಾಜಿ ಉಪಾಧ್ಯಕ್ಷ ಗುರುಪುತ್ರಪ್ಪ ಮಡ್ಲೇರಿ, ಈಶ್ವರ ಬನ್ನಿಕೊಪ್ಪ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮಡ್ಲೇರಿ, ವಸಂತ ಬೇವಿನಮರದ, ಜಂಟಿ ಕಾರ್ಯದರ್ಶಿ ಅನಂತರಾಜ ಮಿಣಜಿಗಿ, ನಿರ್ದೇಶಕ ಮಲ್ಲಿಕಾರ್ಜುನ ಮಹಾಂತಶೆಟ್ಟರ, ಅಶೋಕಗೌಡ ಪಾಟೀಲ, ವಸಂತ ಪಾಟೀಲ, ಸುಮಂಗಲಾ ಬೇವಿನಮರದ, ಅರ್ಪಿತಾ ಮಿಣಜಿಗಿ ಹಾಗೂ ಸಾಕ್ಷಿ ಬೇವಿನಮರದ ಇದ್ದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಗತಿ ತಾವರೆ ಸ್ವಾಗತಿಸಿದರು. ಶಾಲೆಯ ಕ್ರೀಡಾ ವರದಿ ವಾಚಿಸಿದರು. ಸಮಾರಂಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’