ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ಜಾಂಬೋಟಿ ಗ್ರಾಮದ ಮಾಧ್ಯಮಿಕ ಪ್ರೌಢಶಾಲೆಯಲ್ಲಿ ಬೆಳಗಾವಿ ರಾಯಲ್ ರೌಂಡ್ ಟೇಬಲ್ ಸಂಘಟನೆ ವತಿಯಿಂದ ಸಿದ್ಧಪಡಿಸಿದ ಕುಸ್ತಿ ಮ್ಯಾಟ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಐಎಎಸ್ ಮತ್ತು ಐಪಿಎಸ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದವರ ಜೀವನಗಾಥೆ ನೋಡಿದಾಗ ಅವರು ಈ ಸ್ಥಾನಕ್ಕೇರಲು ಪಟ್ಟ ಪರಿಶ್ರಮದ ಬಗ್ಗೆ ಅರಿವಾಗುತ್ತದೆ ಎಂದರು.ಪ್ರೊಬೆಶನರಿ ಐಎಎಸ್ ಅಧಿಕಾರಿ ರೋಹಿತ ಸಿಂಗ್ ಶಾಲೆಯಲ್ಲಿ ಆರಂಭಿಸಿದ ವ್ಯಾಯಾಮ ಕೇಂದ್ರ ಲೋಕಾರ್ಪಣಿಗೊಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮಾತನಾಡಿ ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿ ಜಾಂಬೋಟಿ ಪ್ರೌಢಶಾಲೆಯಲ್ಲಿ ಕುಸ್ತಿ ಮ್ಯಾಟ್ ಅಳವಡಿಸಿ ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ರಾಯಲ್ ರೌಂಡ್ ಟೇಬಲ್ ಸಂಘಟನೆ ಅಧ್ಯಕ್ಷ ವರುಣ ಪಾಟೀಲ, ವಿಶ್ವಭಾರತ ಸೇವಾ ಸಮಿತಿಯ ಅಧ್ಯಕ್ಷ ವಿಜಯ ನಂದಿಹಳ್ಳಿ, ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಂಚಾಲಕ ಆನಂದ ದೇಸಾಯಿ, ಕಾರ್ತಿಕ ಮಿಸ್ಕಿನ, ರೋಹಣ ಸುಂಠಣಕರ, ಆಯುಷ್ ದಾಲ್ಮಿಯಾ, ಕ್ರೀಡಾಭಾರತಿ ರಾಜ್ಯಾಧ್ಯಕ್ಷ ಅಶೋಕ ಶಿಂತ್ರಿ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ಮಾಜಿ ಜಿಪಂ ಸದಸ್ಯ ಜಯರಾಮ ದೇಸಾಯಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಆಹ್ವಾನಿತರು, ಸ್ಥಳೀಯರು ಇದ್ದರು. ಮುಖ್ಯ ಶಿಕ್ಷಕ ಮಹೇಶ ಸಡೇಕರ ಪ್ರಾಸ್ತಾವಿಕ ಮಾತನಾಡಿದರು. ವರುಣ ಪಾಟೀಲ ಸ್ವಾಗತಿಸಿದರು. ಆನಂದಿ ದೇಸಾಯಿ ನಿರೂಪಿಸಿದರು. ದಿನಕರ ಪಾಟೀಲ ವಂದಿಸಿದರು.ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳು ರಾಜ್ಯಮಟ್ಟದ ಮಿನಿ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಬಳಿಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ಸಂವಾದ ನಡೆಸಿದರು. ಸಂವಾದದಲ್ಲಿ ಜಾಂಬೋಟಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಮತ್ತು ವಿದ್ಯಾರ್ಥಿಗಳಿಂದ ಕೇಳಿ ಬಂದ ಸಾರಿಗೆ, ವಿದ್ಯುತ್, ಆರೋಗ್ಯ, ವನ್ಯಜೀವಿ ಮತ್ತು ಮಾನವ ಸಂಘರ್ಷ, ಮೊಬೈಲ್ ನೆಟವರ್ಕ್, ರೈತರ ಬೆಳೆಹಾನಿ, ಪ್ರವಾಹ ಮತ್ತಿತರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಅವುಗಳನ್ನು ಆದ್ಯತೆ ಮೇರೆಗೆ ಹಂತ-ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.