ಹುಬ್ಬಳ್ಳಿ: ವಿದ್ಯಾರ್ಥಿಗಳು ಪದವಿಯ ನಂತರ ವೃತ್ತಿ ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯ ಹಾಗೂ ಸ್ಥೈರ್ಯದಿಂದ ಎದುರಿಸಿ ಮುನ್ನುಗ್ಗಿದಾಗ ಮಾತ್ರ ಸಾಧನೆ ಎಂಬ ಶಿಖರವನ್ನು ಏರಲು ಸಾಧ್ಯವಾಗುತ್ತದೆ ಎಂದು ಮ್ಯಾಗ್ನಾ ಇಂಟರ್ನ್ಯಾಶನಲ್ ಸಿಇಒ ಸೀತಾರಾಮ (ಸ್ವಾಮಿ) ಕೋಟಗಿರಿ ಹೇಳಿದರು.
ಕುಟುಂಬದವರ, ಸಂಬಂಧಿಕರ ಮತ್ತು ಸ್ನೇಹಿತರ ತ್ಯಾಗ-ಸಹಕಾರ ನಮ್ಮೆಲ್ಲರ ಸಾಧನೆ, ಗುರಿ ಮುಟ್ಟವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರೆಲ್ಲರನ್ನೂ ನಾವು ನೆನೆಯಬೇಕು. ನಾನೂ ಇದೇ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದೇನೆ. ಈಗ ಇದೇ ಕಾಲೇಜಿನ ಘಟಿಕೋತ್ಸವದ ಅತಿಥಿಯಾಗಿ ಘಟಿಕೋತ್ಸವದ ಭಾಷಣ ಮಾಡುತ್ತಿರುವುದು ಬಹಳಷ್ಟು ಹೆಮ್ಮೆ ಅನಿಸುತ್ತದೆ ಎಂದರು.
ಜೀವನದಲ್ಲಿ ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆಯಾಗಿದೆ. ವಿದ್ಯೆಯನ್ನು ಉತ್ತಮ ಸಾಧನೆಗೆ ಬಳಸಿಕೊಳ್ಳಬೇಕು. ಸಾಧಿಸುವ ಛಲ ಹಾಗೂ ತುಡಿತ ನಿರಂತರವಾಗಿರಬೇಕು. ಸಾಧನೆ ಸಾಕಾರಕ್ಕೆ ನಿರಂತರವಾಗಿ ಶ್ರಮಿಸಬೇಕು. ಇಂದು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿವೆ. ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡುವಂತಾಗಬೇಕು ಎಂದು ಶುಭ ಹಾರೈಸಿದರು.2466 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಒಟ್ಟು 2466 ವಿದ್ಯಾರ್ಥಿಗಳಿಗೆ ಪದವಿ ಮಾಡಲಾಯಿತು. ಒಟ್ಟು ೨೪ ಅಭ್ಯರ್ಥಿಗಳು ಪಿಎಚ್ಡಿ ಪದವಿ, ವಿವಿಧ ಪದವಿ ವಿಭಾಗದಲ್ಲಿ ೧೩೩೧ ವಿದ್ಯಾರ್ಥಿಗಳು ಮತ್ತು ೮೦೦ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ೩೧೧ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಮುಖ್ಯ ಅತಿಥಿ ಮ್ಯಾಗ್ನಾ ಇಂಟರ್ನ್ಯಾಶನಲ್ನ ಸಿಇಒ ಸೀತಾರಾಮ (ಸ್ವಾಮಿ) ಕೋಟಗಿರಿ, ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿವಿಯ ಕುಲಪತಿ ಡಾ. ಪ್ರಭಾಕರ ಕೋರೆ ಪದವಿ ಪ್ರದಾನ ಮಾಡಿದರು.
ಶ್ರೀವತ್ಸವಗೆ 2 ಚಿನ್ನದ ಪದಕ:ಸಿವಿಲ್ ಇಂಜಿನೀಯರಿಂಗ್ ಪದವಿ ವಿಭಾಗದಲ್ಲಿ ಶ್ರೀವತ್ಸವ ಸುದೀಂದ್ರ ಭಾವಿಕಟ್ಟಿ ಡಾ. ಎಸ್.ಎಸ್. ಭಾವಿಕಟ್ಟಿ ಚಿನ್ನದ ಪದಕ ಸೇರಿದಂತೆ ಒಟ್ಟು ಎರಡು ಚಿನ್ನದ ಪದಕ ಪಡೆದು ಚಿನ್ನದ ವಿದ್ಯಾರ್ಥಿಯಾದರು. ಪದವಿಪೂರ್ವ ವಿಭಾಗದಲ್ಲಿ ಒಟ್ಟು 2131 ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿಯಲ್ಲಿ 311 ವಿದ್ಯಾರ್ಥಿಗಳು ಪದವಿ ಪಡೆದರು. ಪದವಿಪೂರ್ವ ವಿಭಾಗದಲ್ಲಿ ೧೫ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ೬ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಪದವಿಪೂರ್ವ ವಿಭಾಗದಲ್ಲಿ ೧೫ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ೭ ಬೆಳ್ಳಿ ಪದಕವನ್ನು ನೀಡಲಾಯಿತು.
ಪ್ರೊ. ಅಶೋಕ ಶೆಟ್ಟರ್ ವಾರ್ಷಿಕ ವರದಿ ವಾಚಿಸಿದರು. ಡಾ. ಬಿ.ಬಿ. ಕೊಟ್ಟೂರಶೆಟ್ಟರ ಪದವಿ ಪ್ರದಾನ ಸಮಾರಂಭ ನಡೆಸಿಕೊಟ್ಟರು.ಅಧ್ಯಯನಶೀಲತಂದೆ-ತಾಯಿಯ ಸಹಕಾರ, ಉಪನ್ಯಾಸಕರ ಪ್ರೋತ್ಸಾಹವೇ ಸಾಧನೆಗೆ ಸ್ಫೂರ್ತಿಯಾಗಿದೆ. ಪಠ್ಯವನ್ನು ಶ್ರದ್ಧೆಯಿಂದ ಆಲಿಸಿ, ನಮ್ಮಲ್ಲಿನ ಗೊಂದಲಗಳನ್ನು ಅಂದೇ ಪರಿಹರಿಸಿಕೊಂಡು ಅಧ್ಯಯನಶೀಲರಾದಲ್ಲಿ ಸಾಧನೆ ಸುಲಭ ಎಂಬುದು ನನ್ನ ಅನಿಸಿಕೆ ಎಂದು ೨ ಚಿನ್ನದ ಪದಕ ವಿಜೇತ ವಿದ್ಯಾರ್ಥಿ ಶ್ರೀವತ್ಸವ ಸುಧೀಂದ್ರ ಭಾವಿಕಟ್ಟಿ ಹೇಳಿದರು.