ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ: ಮಿಶಲ್ ಕ್ವೀನಿ ಡಿಕೋಸ್ತಾ

KannadaprabhaNewsNetwork |  
Published : Sep 10, 2025, 01:04 AM IST
09ಅನುಗ್ರಹ | Kannada Prabha

ಸಾರಾಂಶ

ಸಂತೆಕಟ್ಟೆ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗ, ಶಿಕ್ಷಣ ಮಾತ್ತು ಸಾಮಾಜಿಕ ಸಂಪರ್ಕ ಮಾಧ್ಯಮ ಆಯೋಗದ ಜಂಟಿ ಆಶ್ರಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 372ನೇ ರ್‍ಯಾಂಕ್ ಪಡೆದ ಉಡುಪಿಯ ಶ್ರೇಯಾನ್ಸ್ ಗೋಮ್ಸ್, ತಾವು ಪರೀಕ್ಷೆಗೆ ನಡೆಸಿದ ತಯಾರಿ, ಎದುರಿಸಿದ ಸವಾಲುಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಜೀವನದ ಸವಾಲುಗಳನ್ನು ಎದುರಿಸುವುದರೊಂದಿಗೆ ನಿರಂತರ ಪ್ರಯತ್ನ ಮತ್ತು ಪರಿಶ್ರಮ ಪಟ್ಟರೆ ಯಶಸ್ಸು ಸುಗಮವಾಗುತ್ತದೆ ಎಂದು ಮುಂಬೈಯಲ್ಲಿ ಕಸ್ಟಮ್ಸ್ ವಿಭಾಗದ ಸಹಾಯಕ ಆಯುಕ್ತೆ ಐ.ಆರ್.ಎಸ್. ಅಧಿಕಾರಿ ಮಿಶಲ್ ಕ್ವೀನಿ ಡಿಕೋಸ್ತಾ ಹೇಳಿದರು.ಅವರು ಭಾನುವಾರ ಸಂತೆಕಟ್ಟೆ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗ, ಶಿಕ್ಷಣ ಮಾತ್ತು ಸಾಮಾಜಿಕ ಸಂಪರ್ಕ ಮಾಧ್ಯಮ ಆಯೋಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಮೂಲಕ ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬ ಹಂಬಲವಿದ್ದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಠಿಣ ಪರಿಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಯುವಜನರು ಮೊದಲ ಸ್ಥಾನದಲ್ಲಿದ್ದರೂ ಕೂಡ ಸರ್ಕಾರಿ ಸೇವೆಗಳತ್ತ ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಸೇವೆಗೆ ಆಯ್ಕೆಯಾಗುವುದು ಕಷ್ಟದ ಕೆಲಸ ಎಂಬ ತಪ್ಪು ಭಾವನೆ ಕೂಡ ಇದ್ದು, ಸೂಕ್ತ ಜಾಗೃತಿಯ ಮೂಲಕ ಯುವಜನತೆಗೆ ಪ್ರೋತ್ಸಾಹ ನೀಡಬೇಕು ಎಂದರು.2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 372ನೇ ರ್‍ಯಾಂಕ್ ಪಡೆದ ಉಡುಪಿಯ ಶ್ರೇಯಾನ್ಸ್ ಗೋಮ್ಸ್, ತಾವು ಪರೀಕ್ಷೆಗೆ ನಡೆಸಿದ ತಯಾರಿ, ಎದುರಿಸಿದ ಸವಾಲುಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ, ಸಮುದಾಯದ ಮಕ್ಕಳು ಸರ್ಕಾರಿ ಸೇವೆಗೆ ಹೋಗುವ ಬಗ್ಗೆ ಸದಾ ಕನಸುಗಳನ್ನು ಕಾಣಬೇಕು. ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಧರ್ಮಪ್ರಾಂತ್ಯದ ವತಿಯಿಂದ ಸದಾ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಹೇಳಿದರು.ಧರ್ಮಪ್ರಾಂತ್ಯದ ಕುಲಪತಿ ಸ್ಟೀವನ್ ಡಿಸೋಜ, ಧರ್ಮಗುರುಗಳಾದ ವಿಲ್ಸನ್ ಡಿಸೋಜ, ಅಶ್ವಿನ್ ಆರಾನ್ಹಾ ಉಪಸ್ಥಿತರಿದ್ದರು.ಧರ್ಮಪ್ರಾಂತ್ಯದ ಶಿಕ್ಷಣ ಆಯೋಗದ ನಿರ್ದೇಶಕ ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಅತಿಥಿಗಳನ್ನು ಪರಿಚಯಿಸಿದರು. ಯುವ ಆಯೋಗದ ನಿರ್ದೇಶಕ ಸ್ಟೀವನ್ ಫರ್ನಾಂಡಿಸ್ ಪ್ರಾರ್ಥನಾ ವಿಧಿ ನೆರವೇರಿಸಿದರು. ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV

Recommended Stories

ಅಕ್ಕಿ ಅಕ್ರಮ ಹಗರಣ: ಸತ್ತವರಿಗೂ ಅನ್ನಭಾಗ್ಯ !
ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು