ಕ್ರೀಡೆಯಲ್ಲಿ ಉತ್ತಮ ಸಾಧನೆಯಿಂದ ಯಶಸ್ಸು ಸಾಧ್ಯ-ಪ್ರಾಚಾರ್ಯ ಹರಿಹರ

KannadaprabhaNewsNetwork |  
Published : Aug 31, 2024, 01:34 AM IST
ಪೋಟೋ ಇದೆ. | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಕೂಡ ಭಾಗವಹಿಸಿ ಉತ್ತಮ ಸಾಧನೆ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಆರ್‌ಟಿಇಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಎ. ಹರಿಹರ ಹೇಳಿದರು.

ರಾಣಿಬೆನ್ನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಕೂಡ ಭಾಗವಹಿಸಿ ಉತ್ತಮ ಸಾಧನೆ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಆರ್‌ಟಿಇಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಎ. ಹರಿಹರ ಹೇಳಿದರು. ನಗರದ ಆರ್‌ಟಿಇಎಸ್ ಮಹಾವಿದ್ಯಾಲಯದಲ್ಲಿ ಸಭಾಭವನದಲ್ಲಿ ಗುರುವಾರ ಜಿಲ್ಲಾ ನೆಹರು ಯುವ ಕೇಂದ್ರ, ಯುವ ವ್ಯವಹಾರ ಕ್ರೀಡಾ ಸಚಿವಾಲಯ ಹಾಗೂ ಎನ್‌ಎಸ್‌ಎಸ್ ಮತ್ತು ಎನ್.ಸಿ.ಸಿ ಕೋಶ, ರಾ.ತಾ.ಶಿ ಸಂಸ್ಥೆಯ ಐಕ್ಯೂಎಸಿ ಕೋಶ ಪದವಿ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮೇಜರ್ ಧ್ಯಾನಚಂದ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವಕರು ಮೋಬೈಲ್ ಬಳಕೆ ಕಡಿಮೆ ಮಾಡಿ ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಇದರಿಂದಾಗಿ ಶ್ರದ್ಧೆ, ನಿಷ್ಠೆ, ಮಾನಸಿಕ ನೆಮ್ಮದಿ, ಆತ್ಮಸ್ಥೈರ್ಯ ಹಾಗೂ ಉತ್ಸಾಹದೊಂದಿಗೆ ಸದಾ ಕಾರ್ಯಪ್ರವೃತ್ತರಾಗಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಉಜ್ಜಲ ಭವಿಷ್ಯವಿದೆ ಎಂದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಮಾತನಾಡಿ, ಮೇಜರ್ ಧ್ಯಾನಚಂದ ಜೀವನ ಚರಿತ್ರೆ ಹಾಗೂ ಕ್ರೀಡಾ ಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ನೆಹರು ಯುವ ಕೇಂದ್ರದಿಂದ ಮಹಾವಿದ್ಯಾಲಯಕ್ಕೆ ಸ್ಪೋರ್ಟ್ಸ ಕಿಟ್‌ಗಳನ್ನು ನೀಡಿದರು. ನೆಹರು ಯುವ ಕೇಂದ್ರದ ಸಿಬ್ಬಂದಿ ಹೇಮಗಿರಿ ಅಂಗಡಿ, ಬಿಎಡ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೋಟ್ರೇಶ ಬಸಾಪುರ, ದೈಹಿಕ ಉಪನ್ಯಾಸಕ ಡಾ. ಮುನಾವರಿ ಅಲಿಖಾನ ಸೌದಾಗರ, ಎನ್‌ಎಸ್‌ಎಸ್ ಕಾರ್ಯಕ್ರಮಧಿಕಾರಿ ಡಾ ಸರಸ್ವತಿ ಬಮ್ಮನಾಳ, ಡಿ.ಟಿ. ಲಮಾಣಿ, ಅಂಜನಾ ಪವಾರ, ರಮೇಶ ಎನ್.ಜಿ., ಶಾಂತಾ ವಿವಿಧ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಮಹಾವಿದ್ಯಾಲಯದ ಎನ್ ಎಸ್ ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?