ಪ್ರಾಮಾಣಿಕ ವ್ಯವಹಾರದಿಂದ ಯಶಸ್ಸು ಸಾಧ್ಯ: ಡಾ. ಹೆಗ್ಗಡೆ

KannadaprabhaNewsNetwork |  
Published : Aug 23, 2026, 02:45 AM IST
ಉದ್ಯಮ ತರಬೇತಿ | Kannada Prabha

ಸಾರಾಂಶ

ರುಡ್‌ಸೆಟ್ ಸಂಸ್ಥೆ ಉಜಿರೆಯಲ್ಲಿ ನಡೆಯುತ್ತಿರುವ ಅಸಿಸ್ಟೆಂಟ್ ಬುಕ್‌ ಕೀಪರ್ ಹಾಗೂ ವಸ್ತ್ರಚಿತ್ರಕಲಾ–ಲಘು ಉದ್ಯಮ ತರಬೇತಿಯ ಶಿಬಿರಾರ್ಥಿಗಳು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.

ಬೆಳ್ತಂಗಡಿ : ರುಡ್‌ಸೆಟ್ ಸಂಸ್ಥೆ ಉಜಿರೆಯಲ್ಲಿ ನಡೆಯುತ್ತಿರುವ ಅಸಿಸ್ಟೆಂಟ್ ಬುಕ್‌ ಕೀಪರ್ ಹಾಗೂ ವಸ್ತ್ರಚಿತ್ರಕಲಾ–ಲಘು ಉದ್ಯಮ ತರಬೇತಿಯ ಶಿಬಿರಾರ್ಥಿಗಳು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.

ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಹೆಗ್ಗಡೆಯವರು, ಆಧುನಿಕ ಜಗತ್ತಿನಲ್ಲಿ ನಿರಂತರವಾಗಿ ಬದಲಾವಣೆಗಳು ನಡೆಯುತ್ತಿದ್ದು, ಅದರೊಂದಿಗೆ ನಾವು ಕೂಡ ಬದಲಾಗುತ್ತಾ ಬೆಳೆಯಬೇಕು. ಹೊಸ ತಂತ್ರಜ್ಞಾನ, ಹೊಸ ಆಲೋಚನೆ ಮತ್ತು ಹೊಸತನವನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ವ್ಯವಹಾರವನ್ನು ಪ್ರಾಮಾಣಿಕತೆ ಹಾಗೂ ಗುಣಮಟ್ಟದೊಂದಿಗೆ ನಡೆಸಿದಾಗ ಯಶಸ್ಸು ಸಾಧ್ಯ ಎಂದರು. ರುಡ್‌ಸೆಟ್ ಸಂಸ್ಥೆಯಲ್ಲಿ ಪಡೆಯುತ್ತಿರುವ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕಲಿತ ಕೌಶಲ್ಯವನ್ನು ಕೇವಲ ಉದ್ಯೋಗಕ್ಕಾಗಿ ಬಳಸದೆ, ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಹೇಳಿದರು. ಈ ಸಂದರ್ಭ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುನಿಲ್ ಜಿ. ನಾಯಕ್, ಹಿರಿಯ ಉಪನ್ಯಾಸಕ ಕರುಣಾಕರ ಜೈನ್, ಅತಿಥಿ ಉಪನ್ಯಾಸಕ ಸಚಿನ್ ಹಾಗೂ ರಶ್ಮಿ ರಾಘವೇಂದ್ರ, ಸುರೇಶ ಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲಸೌಕರ್ಯ ಅಭಿವೃದ್ಧಿ: ಆಯುಕ್ತರಿಂದ ವಿವಿಧೆಡೆ ಪರಿಶೀಲನೆ
ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನ ಕಲಿಯಬೇಕು: ಆ್ಯಂಟನಿ ಪ್ರಕಾಶ್ ಮೊಂತೇರೊ