ಯಶಸ್ಸು ನೆತ್ತಿಗೆರಬಾರದು

KannadaprabhaNewsNetwork |  
Published : Feb 25, 2026, 03:15 AM IST
ವಿಜಯಪುರ | Kannada Prabha

ಸಾರಾಂಶ

ಯಾರು ತಮ್ಮ ಯಶಸ್ಸನ್ನು ಅತೀ ಬೇಗ ವಿಜೃಂಭಿಸುತ್ತಾರೋ ಅಂದಿನಿಂದ ಅವರ ಆ ಸಾಧನೆಯ ಅಧೋಗತಿ ಪ್ರಾರಂಭ. ಹೀಗಾಗಿ ಯಶಸ್ಸು ನೆತ್ತಿಗೆರಬಾರದು ಎಂದು ಮಹಿಳಾ ಕ್ರಿಕೆಟ್‌ ತರಬೇತುದಾರ ಡಾ.ಅಶೋಕಕುಮಾರ ಜಾಧವ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರು ತಮ್ಮ ಯಶಸ್ಸನ್ನು ಅತೀ ಬೇಗ ವಿಜೃಂಭಿಸುತ್ತಾರೋ ಅಂದಿನಿಂದ ಅವರ ಆ ಸಾಧನೆಯ ಅಧೋಗತಿ ಪ್ರಾರಂಭ. ಹೀಗಾಗಿ ಯಶಸ್ಸು ನೆತ್ತಿಗೆರಬಾರದು ಎಂದು ಮಹಿಳಾ ಕ್ರಿಕೆಟ್‌ ತರಬೇತುದಾರ ಡಾ.ಅಶೋಕಕುಮಾರ ಜಾಧವ ಹೇಳಿದರು.

ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ದಕ್ಷಿಣ ಭಾರತ ಅಂತಾರಾಜ್ಯ 14 ವರ್ಷದೊಳಗಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಮೂರು ಶತಕ ಮತ್ತು ಒಂದು ದ್ವಿಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಸರ್ವಾಧಿಕ ಓಟಗಳನ್ನು ದಾಖಲಿಸಿ ದಕ್ಷಿಣ ಭಾರತ ತಂಡಕ್ಕೆ ಆಯ್ಕೆಯಾಗಿರುವ ವಿಜಯಪುರದ ಕ್ರಿಕೆಟಿಗ ಪವನದೀಪ ಭಾರದಖಾನೆ ಅವರಿಗೆ ಲಯನ್ಸ್‌ ಕ್ಲಬ್‌ ಆಫ್ ಬಿಜಾಪುರ ಪರಿವಾರದ ವತಿಯಿಂದ ಏರ್ಪಡಿಸಲಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿ ಸಿಕ್ಕಿರುವ ಈ ಯಶಸ್ಸು ಆಕಸ್ಮಿಕ. ಅದು ಶಾಶ್ವತ ಇರಬೇಕಾದರೇ ಪ್ರಯತ್ನ ಮತ್ತು ಸಾಧನೆ ನಿರಂತರ ಆಗಿರಬೇಕು ಎಂದು ತಿಳಿಸಿದರು.ಲಯನ್ಸ್‌ ಪರಿವಾರದ ಮಾಜಿ ಅಧ್ಯಕ್ಷ ಫಯಾಜ್‌ ಕಲಾದಗಿ ಮಾತನಾಡಿ, ಪವನದೀಪ ಅವರು ಭವಿಷ್ಯದಲ್ಲಿ ಭಾರತ ದೇಶದ ಕ್ರಿಕೆಟ್‌ ಧೃವತಾರೆ ಆಗಬೇಕು. ಐಪಿಎಲ್‌ ಪಂದ್ಯಾವಳಿಯಲ್ಲಿ ಮಿಂಚಿ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು. ಆ ನಿಟ್ಟಿನಲ್ಲಿ ಕನಸನ್ನು ಹೊಂದಿರಬೇಕು. ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳಿಂದ ಸಹಾಯ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು.ಲಯನ್ಸ್‌ ಕ್ಲಬ್‌ ಆಫ್ ಬಿಜಾಪುರ ಪರಿವಾರದ ಕಾರ್ಯದರ್ಶಿ ವಿದ್ಯಾ ಕೊಟೆನ್ನವರ ಮಾತನಾಡಿ, ಯಾವ ಮಕ್ಕಳು ಪಾಲಕರಿಗೆ, ಶಿಕ್ಷಕರಿಗೆ ಮತ್ತು ಹಿರಿಯರಿಗೆ ಗೌರವ ಕೊಟ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರು ಮಾತ್ರ ಸಾಧಕರಾಗುತ್ತಾರೆ. ಪವನದೀಪ ಇವತ್ತು ಅಂತಹ ಸಂಸ್ಕೃತಿ ಹೊಂದಿದ್ದರಿಂದಲೇ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯವು ಕೂಡ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಈ ಸಾಧನೆಯ ಜೋತೆಗೆ ಒಳ್ಳೆಯ ಸಂಸ್ಕೃತಿಯೂ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಕ್ರಿಕೆಟಿಗ ಪವನದೀಪ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಕ್ರಿಕೆಟ್‌ ಬೆಳವಣಿಗೆಗೆ ತಮ್ಮ ತಂದೆಯವರ ಪಾತ್ರ ಬಹಳ ಮಹತ್ತರದಾಗಿದ್ದು, ತಾನು 5-6 ವರ್ಷದವನಿದ್ದಾಗಲೇ ದೇಶಕ್ಕಾಗಿ ಆಡುವ ಕನಸನ್ನು ಕಂಡಿದ್ದು, ಅದನ್ನು ಈಡೇರಿಸಲು ಸದಾ ಪ್ರಯತ್ನಶೀಲನಾಗಿರುವೆ. ಅದಕ್ಕೆ ಗುರುಗಳ ಮತ್ತು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದ ಬೇಕು ಎಂದು ತಿಳಿಸಿದರು.ಲಯನ್ಸ್‌ ಪರಿವಾರದ ಅಧ್ಯಕ್ಷ ಚಿದಾನಂದ ನಿಂಬಾಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಣುತ್ತಿರುವ ಕನಸು ಶೀಘ್ರದಲ್ಲೇ ಈಡೇರಲಿ ಎಂದು ಪವನದೀಪನ ಸಾಧನೆಗೆ ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.ಬುಲ್ಸ್‌ ರಿಂಗ್‌ ಅಕಾಡೆಮಿಯ ಮುಖ್ಯಸ್ಥರು ಹಾಗೂ ಪವನದೀಪ ತರಬೇತುದಾರ ರವಿ ಭಾರದಖಾನೆ, ಲಯನ್ಸ್‌ ಪರಿವಾರದ ಸದಸ್ಯರಾದ ಡಾ.ರಶ್ಮಿ ಚಿತ್ತವಾಡಗಿ, ಶೈಲಾ ಬಸವಪ್ರಭು ಮಾತನಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್‌ ಪರಿವಾರದ ಪದಾಧಿಕಾರಿಗಳಾದ ಇಂದುಮತಿ ಕನ್ನೂರ, ಅನೀತಾ ಕುಮಸಿ, ಶಾಂತಾ ಉತ್ಲಾಸರ, ರಜನಿ ಸಂಬಣ್ಣಿ, ಮಾಯಾ ಚೌಧರಿ, ಧನರಾಜ, ಹಿಪ್ಪರಗಿ ಸೇರಿದಂತೆ ತರಬೇತಿ ಶಿಬಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯಾರು ತಮ್ಮ ಯಶಸ್ಸನ್ನು ಅತೀ ಬೇಗ ವಿಜೃಂಭಿಸುತ್ತಾರೋ ಅಂದಿನಿಂದ ಅವರ ಆ ಸಾಧನೆಯ ಅಧೋಗತಿ ಪ್ರಾರಂಭ. ಹೀಗಾಗಿ ಯಶಸ್ಸು ನೆತ್ತಿಗೆರಬಾರದು. ಚಿಕ್ಕ ವಯಸ್ಸಿನಲ್ಲಿ ಸಿಕ್ಕಿರುವ ಈ ಯಶಸ್ಸು ಆಕಸ್ಮಿಕ. ಅದು ಶಾಶ್ವತ ಇರಬೇಕಾದರೇ ಪ್ರಯತ್ನ ಮತ್ತು ಸಾಧನೆ ನಿರಂತರ ಆಗಿರಬೇಕು.

-ಡಾ.ಅಶೋಕಕುಮಾರ ಜಾಧವ,
ಮಹಿಳಾ ಕ್ರಿಕೆಟ್‌ ತರಬೇತುದಾರ.ಯಾವ ಮಕ್ಕಳು ಪಾಲಕರಿಗೆ, ಶಿಕ್ಷಕರಿಗೆ ಮತ್ತು ಹಿರಿಯರಿಗೆ ಗೌರವ ಕೊಟ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರು ಮಾತ್ರ ಸಾಧಕರಾಗುತ್ತಾರೆ. ಪವನದೀಪ ಇವತ್ತು ಅಂತಹ ಸಂಸ್ಕೃತಿ ಹೊಂದಿದ್ದರಿಂದಲೇ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯವು ಕೂಡ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಈ ಸಾಧನೆಯ ಜೋತೆಗೆ ಒಳ್ಳೆಯ ಸಂಸ್ಕೃತಿಯೂ ಮುಂದುವರೆಯಲಿ.

-ವಿದ್ಯಾ ಕೊಟೆನ್ನವರ,

ಲಯನ್ಸ್‌ ಕ್ಲಬ್‌ ಆಫ್ ಬಿಜಾಪುರ ಪರಿವಾರದ ಕಾರ್ಯದರ್ಶಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಪಂಖಾ ಮಸೀದಿಗೆ ಬೀಗ ಜಡಿಯಲು ಆಗ್ರಹ