ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಹಾಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದ್ದು ಎಲ್ಲಾ ತಾಲೂಕುಗಳಲ್ಲಿ ಮುಂದಿನ 2-3 ದಿನಗಳಲ್ಲಿ ಸಮಿತಿಗಳ ರಚನೆ ಪೂರ್ಣವಾಗಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಅರ್ಹ ಮಹಿಳೆಯರ ಖಾತೆಗೆ ಕೋಟ್ಯಂತರ ರು. ಜಮೆಯಾಗಿದೆ. ಮರಣ ಹೊಂದಿದ ಫಲಾನುಭವಿಗಳಿಂದ ಸರ್ಕಾರಕ್ಕೆ ಜಮೆಯಾಗಬೇಕಾದ 73,75,747 ಬಾಕಿ ಇರುವುದು ವರದಿಯಾಗಿದ್ದು, ಬ್ಯಾಂಕ್‌ಗಳ ಜೊತೆ ಸಭೆ ನಡೆಸಿ, ಖಾತೆಯಲ್ಲಿ ಹಣ ಇರುವವರಿಂದ ಹಣ ರಿಕವರಿ ಮಾಡಲು ಸೂಚಿಸಲಾಯಿತು.ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 8,69,04,686 ಮಹಿಳೆಯರು ಪ್ರಯಾಣಿಸಿದ್ದಾರೆ. ಜೂನ್ 2023 ರಿಂದ ಸೆಪ್ಟೆಂಬರ್ 2026 ರವರೆಗೆ ಸರ್ಕಾರದಿಂದ ಕೆಎಸ್‌ಆರ್‌ಟಿಸಿಗೆ 3,36,18,95,464 ರು. ಆದಾಯ ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 401 ಬಸ್‌ಗಳಿವೆ. ಆದರೆ ಸೊರಬ, ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ಡಿಪೋಗಳಿಲ್ಲದೆ ಅಲ್ಲಿ ಬಸ್ ಕೊರತೆ ಉಂಟಾಗಿದೆ ಎಂದು ಕೆಸ್‌ಆರ್‌ಟಿಸಿ ಡಿಸಿ ನವೀನ್ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಜಿಲ್ಲೆಯ 4,73,682 ಕುಟುಂಬಗಳಿಗೆ ಸೌಲಭ್ಯ ತಲುಪಿದ್ದು, ಶೇ. 96 ರಷ್ಟು ಸಾಧನೆಯಾಗಿದೆ. ಸರ್ಕಾರದಿಂದ ಒಟ್ಟು 82,368.67 ರು. ಲಕ್ಷ ವೆಚ್ಚ ಮಾಡಲಾಗಿದೆ.
ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಜಿ.ಪಂ. ಸಿಇಓ ರಿಷಿ ಆನಂದ್, ಜಿಲ್ಲಾ ಹಾಗೂ ತಾಲೂಕುಗಳ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳು, ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್...
ತಾವು ಮೊದಲು ಇಸ್ತ್ರಿ ಕೆಲಸ ಮಾಡುತ್ತಿದ್ದವರು, ಗೃಹಲಕ್ಷ್ಮಿ ಹಣದಿಂದೀಗ ಬಟ್ಟೆ ಮತ್ತು ಸೀರೆ ತಂದು ವ್ಯಾಪಾರ ಆರಂಭಿಸಿದ್ದು, ಲಾಭ ಸಿಗುತ್ತಿದೆ. ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಚಿರ ಋಣಿ.
------------------
- ಸವಿತಾ, ಉಂಬ್ಳೇಬೈಲು
-------------ತಮ್ಮ ಪತಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಬಿಪಿಎಲ್ ಕಾರ್ಡ್‌ನಿಂದ ಅವರ ಆಪರೇಷನ್, ರೇಷನ್‌ಗೆ ತುಂಬಾ ಸಹಾಯ ಆಗಿದೆ ಹಾಗೂ ಗೃಹಲಕ್ಷ್ಮಿ ಹಣದಿಂದ ಹೊಲಿಗೆ ಮಷೀನ್ ಪಡೆದು, ಬಟ್ಟೆ ಹೊಲಿಯುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ನೆರವಾಗಿದೆ. ಸರ್ಕಾರಕ್ಕೆ ಋಣಿ.
-ರೇಖಾ ಸತೀಶ್, ಸೊರಬ-------------------------
ಪೋಟೋ: 27ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಮೆಹರೋಜ್ ಖಾನ್ ಮಾತನಾಡಿದರು.