ಉದ್ಯೋಗ ಮೇಳದ ಸದುಪಯೋಗ ಪಡೆಯಲು ಡಾ.ಟಿ.ಮಂಜುನಾಥ್ ಕರೆ
ವಿದ್ಯಾರ್ಥಿಗಳು ಉದ್ಯೋಗ ಮೇಳದ ಸದುಪಯೋಗ ಪಡೆಯಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಟಿ.ಮಂಜುನಾಥ್ ಹೇಳಿದ್ದಾರೆ.ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದ್ಯೋಗ ಮಾಹಿತಿ ಕೋಶ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ,ಇನ್ಸಿಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ನಡೆದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿಮ್ಮ ಮನೆ ಮುಂದೇನೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಬಂದಿದೆ, ಸ್ಪರ್ಧೆಯೂ ಇದೆ ಅವಕಾಶವೂ ಇದೆ. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಉದ್ಯೋಗ ನಿರ್ವಹಿಸುತ್ತಿದ್ದಾರೆ, ಕೋಜೆಂಟ್, ಅಮೆಜಾನ್, ನಿಪ್ಪೋನ್ ಇತ್ಯಾದಿ ಕಂಪನಿಗಳು ಇದೆ, ಸರ್ಕಾರದಿಂದ ಉದ್ಯೋಗಕ್ಕೂ ಹೋಗಬಹುದು, ಸಾಮಾನ್ಯ ಹುದ್ದೆಯಿಂದ ಮೇಲಿನ ಹುದ್ದೆಗೆ ಹೋಗಬಹುದು, ಪರಿಶ್ರಮ ಮುಖ್ಯ, ಪದವಿ, ಕೌಶಲ್ಯವೂ ಮುಖ್ಯ ಎಂದು ಹೇಳಿದರು.ಮಾಹಿತಿ ಕೋಶದ ಸಂಚಾಲಕ ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ ಉದ್ಯೋಗ ಮೇಳದ ಪ್ರಾಮುಖ್ಯತೆ ವಿವರಿಸಿದರು. ಉದ್ಯೋಗದಾತರು ಕಂಪನಿಗಳಲ್ಲಿ ಲಭ್ಯವಿರುವ ಹುದ್ದೆಗಳು ಮತ್ತು ಅದಕ್ಕೆ ಬೇಕಾದ ಕೌಶಲ್ಯ ವಿವರಿಸಿದರು.ಮೊಹಮದ್ ಅಸದ್, ಭೂಮಿಕ ಮತ್ತು ತಂಡದವರು, ದಿಲೀಪ್, ಗಣೇಶ್ ಎಚ್.ಎನ್.ಪೈ.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತರೀಕೆರೆ, ಚಿಕ್ಕಮಗಳೂರು, ಬೀರೂರು, ಕಡೂರು, ಶಿವಮೊಗ್ಗ, ಭದ್ರಾವತಿ ಹಾಗೂ ಇತರ ಭಾಗಗಳಿಂದ ಪಿಯುಸಿ ಡಿಪ್ಲೊಮ, ಪದವೀಧರರು ಕಾರ್ಯಕ್ರಮದ ಸದುಪಯೋಗ ಪಡೆದರು.-17ಕೆಟಿಆರ್.ಕೆ.10ಃ
ತರೀಕೆರೆ ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪ್ರಾಂಶುಪಾಲ ಡಾ. ಟಿ.ಮಂಜುನಾಥ್, ಮಾಹಿತಿ ಕೋಶದ ಸಂಚಾಲಕ ಆನಂದ್, ಮೊಹಮದ್ ಅಸದ್ ಮತ್ತಿತರರು ಭಾಗವಹಿಸಿದ್ದರು.