ಸೂಜಿ ಗಾತ್ರದ ರಂಧ್ರದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ!

KannadaprabhaNewsNetwork |  
Published : Jun 19, 2025, 12:35 AM IST
ಪೋಟೋ: 18ಎಸ್‌ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಂಜಪ್ಪ ಲೈಫ್ ಕೇರ್‌ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಕ ತಜ್ಞ ಡಾ.ಅರವಿಂದ ಮಾತನಾಡಿದರು.  | Kannada Prabha

ಸಾರಾಂಶ

ಇಲ್ಲಿಯ ನಂಜಪ್ಪ ಲೈಫ್ ಕೇರ್‌ನಲ್ಲಿ ಆಧುನಿಕ ಇಂಟರ್ವೆನ್ಷನಲ್ ತಂತ್ರಜ್ಞಾನದಿಂದ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಎಂಬ ಕ್ಯಾನ್ಸರ್ ಸಂಬಂಧಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಕ ತಜ್ಞ ಡಾ.ಅರವಿಂದ ತಿಳಿಸಿದರು.

ಶಿವಮೊಗ್ಗ: ಇಲ್ಲಿಯ ನಂಜಪ್ಪ ಲೈಫ್ ಕೇರ್‌ನಲ್ಲಿ ಆಧುನಿಕ ಇಂಟರ್ವೆನ್ಷನಲ್ ತಂತ್ರಜ್ಞಾನದಿಂದ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಎಂಬ ಕ್ಯಾನ್ಸರ್ ಸಂಬಂಧಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಕ ತಜ್ಞ ಡಾ.ಅರವಿಂದ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಹಾವೇರಿಯ ಶಾರದಾ (57) ಎಂಬುವರು ತಮಗೆ ಆಹಾರ ನುಂಗುವಲ್ಲಿ ತೊಂದರೆ ಇದೆ ಎಂದು ಆಸ್ಪತ್ರೆಗೆ ಬಂದಿದ್ದರು. ಎಂಡೊಸ್ಕೊಪಿ ಮತ್ತು ಬಯಾಪ್ಸಿ ಪರೀಕ್ಷೆಯಿಂದ ಅನ್ನನಾಳದ ಕ್ಯಾನ್ಸರ್ ತಿಳಿದುಬಂತು. ನಂತರ ಪೆಟ್ ಸಿಟಿ ಸ್ಕ್ಯಾನಿಂಗ್‌ನಲ್ಲಿ ಕ್ಯಾನ್ಸರ್ 3ನೇ ಹಂತದಲ್ಲಿದೆ ಎಂದು ದೃಢಪಟ್ಟಿತು. ಬಳಿಕ ಕ್ಯಾನ್ಸರ್ ಚಿಕಿತ್ಸಕರಾದ ಡಾ.ನಮ್ರತಾ ಉಡುಪ ಅವರು ೪ ಸೈಕಲ್ ಕಿಮೊಥೆರಪಿ ಮಾಡಿ, ಕ್ಯಾನ್ಸರ್ ಗಡ್ಡೆಯನ್ನು ಕುಗ್ಗಿಸಿ ಶಸ್ತ್ರಚಿಕಿತ್ಸೆಗೆ ಅನುವುಮಾಡಿ ಕೊಟ್ಟರು ಎಂದು ವಿವರಿಸಿದರು.

ಈ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಕ್ಯಾನ್ಸರ್ ಡಾ.ಅರವಿಂದನ್ ಹಾಗೂ ಅರವಳಿಕೆ ತಜ್ಞ ಡಾ.ಪ್ರವೀಣ್ ಕುಮಾರ್ ಅವರನ್ನು ಶಸ್ತ್ರಚಿಕಿತ್ಸಕ ಡಾ.ಗುರುಚನ್ನ, ಒಳಗೊಂಡ ತಂಡ 6 ಗಂಟೆ ಚಿಕಿತ್ಸೆ ನಡೆಸಿ-ಅನ್ನನಾಳಕ್ಕೆ ಅಂಟಿಕೊಂಡಿದ್ದ ಶ್ವಾಸಕೋಶ ಭಾಗವನ್ನುವನ್ನು ತೆಗೆದು ಎದೆಯ ಭಾಗದಲ್ಲಿ ಜೋಡಿಸಲಾಯಿತು ಎಂದು ಮಾಹಿತಿ ನೀಡಿದರು.ಇಂತಹ ಶಸ್ತ್ರಚಿಕಿತ್ಸೆಯಲ್ಲಿ ಆಪರೇಷನ್ ನಂತರದ ದಿನಗಳಲ್ಲಿ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ. ಇದೇ ರೀತಿ ಶಾರದಾ ಅವರಿಗೂ ಮನೆಗೆ ಹೋದ ನಂತರ ತೀವ್ರ ಸುಸ್ತು ಹೊಟ್ಟೆನೋವಿನಿಂದ ನಂಜಪ್ಪ ಲೈಫ್ ಕೇರ್ ಎಮರ್ಜೆನ್ಸಿ ವಾರ್ಡ್ ಗೆ ಬಂದಾಗ, ಹಿಮೋಗ್ಲೋಬಿನ್ ೫ ಗ್ರಾಂ ಪರ್ ಡೆಸಿಲೇಟರ್ ಗೆ ಇಳಿದಿದೆ ಎಂಬುದು ತಿಳಿಯಿತು. ಶೀಘ್ರವೇ ಸಿಟಿ ಸ್ಕ್ಯಾನ್ ಮಾಡಿದಾಗ - ಸ್ಪಿನ್ ಎನ್ನುವ ಅಂಗಕ್ಕೆ ರಕ್ತ ಸಂಚರಿಸುವ ರಕ್ತನಾಳದಲ್ಲಿ ಸಣ್ಣ ರಂಧ್ರವಿದ್ದು ತೀವ್ರ ರಕ್ತಸ್ರಾವವಾಗಿರುವುದು ತಿಳಿಯಿತು.

ಸೈನಿಕ್ ಆರ್ಟರಿ ಸೂಡೋ ಅನುರಿಸಮ್. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪುನಃ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಿದ್ದು-ರೋಗಿಯು ಅದನ್ನು ತಡೆದುಕೊಳ್ಳುವುದೂ ಕಷ್ಟವಾಗುತ್ತದೆ. ಇಂಟರ್ವೆನ್ನನಲ್ ರೇಡಿಯಾಲಜಿ ಎಂದರೆ ಶಸ್ತ್ರಚಿಕಿತ್ಸೆ ಇಲ್ಲದೆ, ತೊಡೆಯ ಸಂಧಿಯಲ್ಲಿನ ರಕ್ತನಾಳದ ಮೂಲಕ ಸಣ್ಣ ಸೂಜಿ ಗಾತ್ರದ ರಂಧ್ರದಿಂದ ರಕ್ತ ಸ್ರಾವವಿರುವ ರಕ್ತನಾಳವನ್ನು ಮುಚ್ಚುವುದು ಆಧುನಿಕ ಮತ್ತು ಕಡಿಮೆ ರಿಸ್ಕ್ ಇರುವ ವಿಧಾನವಾಗಿರುತ್ತದೆ ಎಂದು ಮಾಹಿತಿ ನೀಡಿದರು.ಡಾ.ನಿಶಿತ ಮಾತನಾಡಿ, ಯಶಸ್ವಿಯಾಗಿ ಎಂಬೋಲೈಸ್ ಚಿಕಿತ್ಸೆ ಮಾಡಿದ್ದು, ಚಿಕಿತ್ಸೆಯ ನಂತರ ರಕ್ತಸ್ರಾವು ಸ್ಥಗಿತವಾಗಿ ರಾತ್ರಿಯ ವೇಳೆಗೆ ರೋಗಿಯು ಚೇತರಿಸಿಕೊಂಡು ಹೊಟ್ಟೆ ನೋವು ಶಮನವಾಗಿದೆ. ರೋಗಿಯು ಯಾವುದೇ ತೊಂದರೆ ಇಲ್ಲದೆ ಗುಣಮುಖರಾಗಿ ಮರುದಿನವೇ ಚೇತರಿಕೆಯಿಂದ ಮನೆಗೆ ಹೋಗಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ.ಗುರುಚನ್ನ, ಡಾ.ನಮ್ರತಾ ಉಡುಪ, ವಿಕಿರಣ ಶಾಸ್ತ್ರಜ್ಞ ಡಾ.ಶರಶ್ಚಂದ್ರ, ಇಂಟರ್ವೆನ್ನನಲ್ ರೇಡಿಯಾಲಜಿಸ್ಟ್ ಡಾ.ನಿಶಿತ ಹಾಗೂ ಅರವಳಿಕೆ ತಜ್ಞ ಡಾ.ಪ್ರವೀಣ್ ಕುಮಾರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ