ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪೊಲೀಸ್ ಠಾಣೆ ಎದುರು ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು,
ಪವಿತ್ರ ದೇವಾಲಯವಾದ ಆರ್ ಎಸ್ ಎಸ್ ಕಚೇರಿಗೆ ಶೂ ಹಾಕಿಕೊಂಡು ನುಗ್ಗಿ, ಸಂಘದ ಪ್ರಚಾರಕರನ್ನು ಎಳೆದಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.ಪೊಲೀಸರು ಏಕಾಏಕಿ ಯಾವುದೇ ನೋಟಿಸ್, ವಾರೆಂಟ್ ಇಲ್ಲದೆ ಆರ್‌ಎಸ್‌ಎಸ್ ಕಚೇರಿಗೆ ದೇಶದ ಇತಿಹಾಸದಲ್ಲೇ ಕಚೇರಿ ಆರಂಭವಾದಗಿನಿಂದ ಶೂ ಹಾಕಿಕೊಂಡು ಒಳಗೆ ನುಗ್ಗಿರುವ ಇಂತಹ ಘಟನೆ ನಡೆದಿರಲಿಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಅದೇ ಜೈಶ್ರೀರಾಮ್ ಕೂಗಿದರೆ, ಹನುಮ ಮಾಲೆ ಹಾಕುವವರು, ನರೇಂದ್ರ ಮೋದಿಗೆ ಜೈಕಾರ ಹಾಕುವವರಿಗೆ ಲಾಠಿ ಏಟು. ಹಿಂದೂ ಕಾರ್‍ಯಕರ್ತರನ್ನು ಎಲ್ಲಿಬೇಕು ಅಲ್ಲಿ ಕೊಲೆ ಮಾಡುತ್ತಿದ್ದಾರೆ. ನಾಗಮಂಗಲದಲ್ಲಿ ವಿನಾಯಕನ ಉತ್ಸವ ನಡೆಸಿದರೆ ಪೆಟ್ರೋಲ್ ಬಾಂಬ್ ಹಾಕಿ, ಕಲ್ಲು ತೂರಾಟ ಮಾಡುತ್ತಾರೆ. ಕುಕ್ಕರ್‌ನಲ್ಲಿ ಬಾಂಬ್ ತೆಗೆದುಕೊಂಡು ಹೋಗುವವರು ಕಾಂಗ್ರೆಸ್ ನವರ ಸಹೋದರರೇ ಎಂದು ಪ್ರಶ್ನಿಸಿದರು.
ಗೃಹ ಇಲಾಖೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು, ಅಲ್ಲಿಯವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.