ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಕಾಲಿಕ ಆಲಿಕಲ್ಲು ಮಳೆಗೆ ಹಾನಿಗೀಡಾದ ದ್ರಾಕ್ಷಿ ತೋಟಗಳಿಗೆ ಮತ್ತು ಕುಸುಮ್ ಸಿ ಯೋಜನೆಯಡಿಯಲ್ಲಿ ನಿರ್ಮಾಣ ಸೌರ ವಿದ್ಯುತ್ ಘಟಕ (19.7 ಮೆ.ವ್ಯಾ) ಸ್ಥಾವರಕ್ಕೆ ಭೇಟಿ ರೈತರೊಂದಿಗೆ ಸಂವಾದ ನಡೆಸಿದರು.
ತಾಲೂಕಿನ ಕೊತ್ತನೂರು ಗ್ರಾಮದ ಯಶ್ವಂತ್‌ರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ, ಅಲ್ಲಿಯ ರೈತರೊಂದಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಫಸಲ್ ಭಿಮಾ ಯೋಜನೆಯ ಬಗ್ಗೆ ತಿಳಿಸಿದರು.ದಿಬ್ಬೂರು ಗ್ರಾಮದಲ್ಲಿ ಆಕಾಲಿಕ ಆಲಿ ಕಲ್ಲು ಮಳೆ ಬಿದ್ದು ಹಾನಿಯಾಗಿದ್ದ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ, ಬೆಳೆ ಹಾನಿಗೊಳಗಾದ ಪಾಪೇಗೌಡ, ಮೋಹನ್, ರಮೇಶ್, ವೆಂಕಟೇಶ್, ಚಂದ್ರಪ್ಪ ಮತ್ತು ಡಾ. ಪಾಪೇಗೌಡ ಅವರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರಕ್ಕೆ ಕೊಡಿಸುವ ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾಸ್ ಮತ್ತು ತೈಲ ನಮ್ಮ ದೇಶದಲ್ಲಿ ಉತ್ಪಾದನೆಯಾಗುವುದಿಲ್ಲ. ಇದನ್ನು ಆಮದು ಮಾಡಿಕೊಳ್ಳಬೇಕು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ 145 ಕೋಟಿ ಜನಸಂಖ್ಯೆ ಇದ್ದು ಎಲ್ಲರಿಗೂ ಗ್ಯಾಸ್ ದೊರೆಯುತ್ತಿರುವುದು ಸಂತಸದ ವಿಷಯವಾಗಿದೆ. ಭಾರತದ 145 ಕೋಟಿ ಜನರಲ್ಲಿ ಅಲ್ಪಸ್ವಲ್ಪ ಜನರಿಗೆ ಗ್ಯಾಸ್ ಮತ್ತು ಪೆಟ್ರೋಲ್ ಅಭಾವದಿಂದ ತೊಂದರೆ ಆಗಿರಬಹುದು. ಆದರೆ ಸಂಪೂರ್ಣ ಯಾರಿಗೂ ಸಂಕಷ್ಟ ಒದಗಿ ಬಂದಿರುವುದಿಲ್ಲ. ವಿಶ್ವದ ಎಲ್ಲೆಡೆ ಗ್ಯಾಸ್ ಮತ್ತು ಪೆಟ್ರೋಲ್‌ಗೆ ಅಭಾವವಿದ್ದು ದರಗಳು ಸಹ ಹೆಚ್ಚಾಗಿ ಇವೆ. ಆದರೆ ಭಾರತದಲ್ಲಿ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಸುಂಕವನ್ನು 10 ರು.ಗಳ ಇಳಿಕೆ ಮಾಡಿರುವಂತಹ ಹೆಗ್ಗಳಿಕೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಸಲ್ಲುತ್ತದೆ. ಪಕ್ಕದ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 400 ರೂಪಾಯಿಗಳು ಇದ್ದು, ವಿಶ್ವದ ಎಲ್ಲೆಡೆಯೂ ಬೆಲೆ ಏರಿಕೆ ಮಾಡಲಾಗಿದೆ ಎಂದರು.
ಚಿಕ್ಕಬಳ್ಳಾಪುರದ ರೈತರು ಸಾಕಷ್ಟು ಶ್ರಮಜೀವಿಗಳಾಗಿದ್ದು, ಈ ಭಾಗದಲ್ಲಿ ಹಿಂದೆ ಹನಿ ಹನಿ ಹನಿ ನೀರಿಗೂ ತತ್ವಾರ ಇತ್ತು. ಆಗ ಸಾವಿರಾರು ಅಡಿಗಳಿಂದ ನೀರು ತೆಗೆದು ಬೆಳೆ ಇಡುತ್ತಿದ್ದರು. ರೈತರಿಗೆ ಹನಿ ನೀರಾವರಿಯಲ್ಲಿ ಶೇಕಡ 50 ರಷ್ಟು ಸಬ್ಸಿಡಿಯನ್ನು ಮತ್ತು ಕೃಷಿ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6,000 ರು.ಗಳನ್ನು, ರಸಗೊಬ್ಬರಗಳ ಮೇಲೆ ಸಬ್ಸಿಡಿಯನ್ನು ಕೇಂದ್ರವೇ ಭರಿಸಿ ಮೊದಲಿನ ದರಕ್ಕೆ ನೀಡುತ್ತಿದೆ ಎಂದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಚಿಮೂಲ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ನಂದಿ ಮುನಿಸ್ವಾಮಿ, ಮುನಿನಂಜಪ್ಪ, ಗಿರೀಶ್ ಗರಿಗಿರೆಡ್ಡಿ, ಸತೀಶ್, ಯಶ್ವಂತ್, ಲಿಂಗಾರೆಡ್ಡಿ, ಮುನಿರೆಡ್ಡಿ, ಪ್ರಭಾಕರ್, ಆನಂದ್, ಮತ್ತಿತರರು ಇದ್ದರು.