ಕೊಳಚೆ ಮುಕ್ತ ಪಟ್ಟಣವಾಗಿಸಲು ಸಾಕಷ್ಟು ಅನುದಾನ; ಘೋರ್ಪಡೆ

KannadaprabhaNewsNetwork |  
Published : Nov 14, 2026, 02:15 AM IST
ಗಜೇಂದ್ರಗಡ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಿವರಾಜ ಘೋರ್ಪಡೆ ಮಾತನಾಡಿದರು | Kannada Prabha

ಸಾರಾಂಶ

ಪಟ್ಟಣದಲ್ಲಿ ರಾಜಕಾಲುವೆ, ರಸ್ತೆ ಹಾಗೂ ಚರಂಡಿಗಳ ನಿರ್ಮಾಣದ ಮೂಲಕ ಗಜೇಂದ್ರಗಡ ಪಟ್ಟಣವನ್ನು ಕೊಳಚೆ ಮುಕ್ತವನ್ನಾಗಿಸಲು ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣದಲ್ಲಿ ರಾಜಕಾಲುವೆ, ರಸ್ತೆ ಹಾಗೂ ಚರಂಡಿಗಳ ನಿರ್ಮಾಣದ ಮೂಲಕ ಗಜೇಂದ್ರಗಡ ಪಟ್ಟಣವನ್ನು ಕೊಳಚೆ ಮುಕ್ತವನ್ನಾಗಿಸಲು ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.

ಪಟ್ಟಣದ ಪುರಸಭೆಗೆ ೨೦೨೫-೨೬ನೇ ಸಾಲಿನ (ಸಿ.ಎಂ.ಐ.ಡಿ.ಪಿ) ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ದಿ ಯೋಜನೆಯಡಿ ₹೩೦೪ ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಹಿನ್ನೆಲೆ ಸ್ಥಳೀಯ ಸೇವಾಲಾಲ್ ನಗರ ರಸ್ತೆ ಕಾಮಗಾರಿಗೆ ಶುಕ್ರವಾರ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದ ೨೩ ವಾರ್ಡ್‌ಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಕುರಿತಂತೆ ಪಟ್ಟಣದ ಪ್ರಮುಖರ ಜತೆಗೆ ಚರ್ಚಿಸಿ ಕೋಟಿಗಟ್ಟಲೆ ಅನುದಾನದಡಿ ಗಜೇಂದ್ರಗಡ, ರೋಣ ಹಾಗೂ ನರೇಗಲ್‌ನಲ್ಲಿ ವಿವಿಧ ಅಭಿವೃದ್ಧಿಗೆ ನೀಲನಕ್ಷೆಯನ್ನು ಶಾಸಕರು ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಿ.ಎಸ್. ಪಾಟೀಲ ನಗರ, ಬಸವೇಶ್ವರ ನಗರ, ಸೇವಾಲಾಲ್ ನಗರ ಸೇರಿ ವಿವಿಧ ವಾರ್ಡಗಳಲ್ಲಿ ಚರಂಡಿ ಮತ್ತು ರಸ್ತೆಗೆ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದ ಅವರು, ಈ ಹಿಂದೆ ವಿಪಕ್ಷಗಳು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೇವಲ ₹೧೦ ಲಕ್ಷದ ಕಾಮಗಾರಿಗೂ ಸಹ ಅಧಿಕಾರದಲ್ಲಿದ್ದವರು ಭೂಮಿಪೂಜೆ ನೇರವೇರಿಸಬೇಕು ಎಂಬ ಉದ್ದೇಶದಿಂದ ಅನೇಕ ಕೆಲಸ ಕಾರ್ಯಗಳ ಹಲವಾರು ತಿಂಗಳುಗಳ ಕಾಲ ತಡೆ ಹಿಡಿದಿದ್ದನ್ನು ನಾವು ಕಂಡಿದ್ದೇವು. ಆದರೆ ಅನೇಕ ಕೆಲಸ, ಕಾರ್ಯಗಳ ಒತ್ತಡದಲ್ಲಿರುವ ಶಾಸಕರು ನನ್ನಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಿಲ್ಲಬಾರದು ಎಂದು ಮಿಥುನ ಪಾಟೀಲರನ್ನು ಕರೆದುಕೊಂಡು ಭೂಮಿಪೂಜೆ ನೆರವೇರಿಸಿ ಎಂದು ಹೇಳುವ ಮೂಲಕ ಅಭಿವೃದ್ಧಿ ಮುಖ್ಯ ಎಂಬ ಸಂದೇಶ ನೀಡಿದ್ದಾರೆ ಎಂದರು.

ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿ, ಗಜೇಂದ್ರಗಡ ತಾಲೂಕಿನ ೧೯ ಕೆರೆ ತುಂಬಿಸಲು ಅಂದಾಜು ₹೧೦೦ ಕೋಟಿ ಅನುದಾನ, ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಕ್ಷಣಗಣನೆ, ಅಗ್ನಿಶಾಮಕ ಠಾಣೆ ಉದ್ಘಾಟನೆಗೆ ದಿನಗಣನೆ, ಪ್ರಜಾಸೌಧ ನಿರ್ಮಾಣ ಕಾಮಗಾರಿ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ವಿಪಕ್ಷಗಳ ಸುಳ್ಳು ಆರೋಪಗಳಿಗೆ ಕಿವಿಗೊಡದೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿರುವವರ ಕೈ ಬಲಪಡಿಸೋಣ ಎಂದರು.

ರೋಣ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮಾಜಿ ಪುರಸಭೆ ಸದಸ್ಯರಾದ ರೂಪೇಶ ರಾಠೋಡ, ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ಮುದಿಯಪ್ಪ ಮುಧೋಳ, ವೆಂಕಟೇಶ ಮುದಗಲ್, ಶಾರದಾ ರಾಠೋಡ, ಗಜೇಂದ್ರಗಡ ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ, ಮುಖಂಡರಾದ ಸಿದ್ದಪ್ಪ ಬಂಡಿ, ಪ್ರಶಾಂತ ರಾಠೋಡ, ತುಳಸಿನಾಥ ಮಾಳೋತ್ತರ, ಈಶಪ್ಪ ರಾಠೋಡ, ಬಿ.ಎಸ್. ಶೀಲವಂತರ, ಸಿದ್ದಪ್ಪ ಚೋಳಿನ, ಎ.ಡಿ. ಕೋಲಕಾರ, ಸಿದ್ದು ಗೊಂಗಡಶೆಟ್ಟಿಮಠ ಸೇರಿ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ