ಹಾನಗಲ್ಲ: ವಿಬಿ-ಜಿ ರಾಮ್ ಜಿ ಯೋಜನೆಯ ಯಶಸ್ಸಿನಲ್ಲಿ ಕಾಯಕ ಬಂಧುಗಳು, ಮೇಟಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಸೂಚಿಸಿದರು.
ವಿಬಿ-ಜಿ ರಾಮ್ ಜಿ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ, ಯೋಜನೆಯ ಮುಖ್ಯ ಉದ್ದೇಶ, ಕಾಯಕ ಬಂಧುಗಳ ಕರ್ತವ್ಯಗಳು, ಕೂಲಿಕಾರರ ಹಾಜರಾತಿ ನಿರ್ವಹಣೆ ಹಾಗೂ ವೇತನ ಪಾವತಿ ಪ್ರಕ್ರಿಯೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ್ ಪಿ.ಎಚ್. ಕಾಮಗಾರಿಗಳ ಅಳತೆ ಮತ್ತು ಪ್ರಮಾಣದ ತಾಂತ್ರಿಕ ಅಂಶಗಳ ಬಗ್ಗೆ ವಿವರಿಸಿದರು.ತಾಲೂಕು ಎಂ.ಐ.ಎಸ್ ಸಂಯೋಜಕಿ ಆಶಾರಾಣಿ ಅಂಗಡಿ, ಎನ್.ಎಂ.ಎಂ.ಎಸ್ ಆ್ಯಪ್ ಬಳಕೆ, ತಾಂತ್ರಿಕ ನಿರ್ವಹಣೆ ಹಾಗೂ ಆನ್‌ಲೈನ್ ಹಾಜರಾತಿ ದಾಖಲಿಸುವ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವನಶ್ರೀ ಸಂಸ್ಥೆಯ ನಿಜಲಿಂಗಪ್ಪ, ತಾಂತ್ರಿಕ ಸಂಯೋಜಕಿ ವೀಣಾ ಸುರೇಶ್, ಅಡ್ಮಿನ್ ಖಾಜಾಬಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಕಾಯಕ ಬಂಧುಗಳು, ಮೇಟ್‌ಗಳು, ಬಿ.ಎಫ್.ಟಿ ಹಾಗೂ ಗ್ರಾಮ ಕಾಯಕ ಮಿತ್ರರು ಉಪಸ್ಥಿತರಿದ್ದರು.