ಭಾವೈಕ್ಯತೆಯ ರಸ ಹರಿಸಿದ ಸೂಫಿಸಂತ ಇಬ್ರಾಹಿಂ ಸುತಾರ್: ಮೌಲಾನಾ ಸೈಯದ್‌ಭಾಷಾ

KannadaprabhaNewsNetwork | Updated : Feb 07 2024, 03:58 PM IST

ಸಾರಾಂಶ

ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಡೆದ ಇಬ್ರಾಹಿಂ ಸುತಾರ ದ್ವಿತೀಯ ಪುಣ್ಯಸ್ಮರಣೆ, ಭಾವೈಕ್ಯ ದಿನೊತ್ಸವ ಹಾಗೂ ಭಾವೈಕ್ಯ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸರ್ವಧರ್ಮಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಭಾರತ ಅನೇಕ ಮಹಾತ್ಮರು, ಅವಧೂತರು, ಜ್ಞಾನಿಗಳು, ತತ್ವಜ್ಞಾನಿಗಳು, ಸಿದ್ಧಿಪುರುಷರು, ಸಂತರು, ಬಸವಾದಿ ಶರಣರು ಜನಿಸಿದ ಪುಣ್ಯಭೂಮಿ. ಕನ್ನಡದ ಕಬೀರ, ಭಾವೈಕ್ಯತೆಯ ಹರಿಕಾರ ಇಬ್ರಾಹಿಂ ಸುತಾರ್‌ ಅವರು ತಮ್ಮ ಪ್ರವಚನಗಳ ಮೂಲಕ ಎಲ್ಲರ ಹೃದಯಗಳನ್ನು ಬೆಸೆದು, ಭಾವೈಕ್ಯತೆ ರಸ ಹರಿಸಿದ್ದರು.

ಕೂಡಿ ಬಾಳುವುದೇ ಕೂಡಲಸಂಗಮ ಎಂಬುದು ಅವರ ಪ್ರವಚನಗಳ ಸಾರ ಎಂದು ಹೈದ್ರಾಬಾದ್‌ ನ ಸೂಫಿಸಂತ, ಪ್ರವಚನಕಾರ ಮೌಲಾನಾ ಸೈಯದ್‌ಭಾಷಾ ಹೇಳಿದರು.

ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಡೆದ ಇಬ್ರಾಹಿಂ ಸುತಾರ ದ್ವಿತೀಯ ಪುಣ್ಯಸ್ಮರಣೆ, ಭಾವೈಕ್ಯ ದಿನೊತ್ಸವ ಹಾಗೂ ಭಾವೈಕ್ಯ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸರ್ವಧರ್ಮಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಬ್ರಾಹಿಂ ಸುತಾರ್‌ ಅವರ ಪ್ರವಚನ ಕೇಳಲು ಸಹಾಸ್ರಾರು ಜನ ಸೇರುತ್ತಿದ್ದುದು ಭಾವೈಕ್ಯತೆಗೆ ಸಾಕ್ಷಿ. ಇಬ್ರಾಹಿಂ ಧರ್ಮ, ಜಾತಿ ವ್ಯವಸ್ಥೆ ಮೀರಿ ಬೆಳೆದ ಶ್ರೇಷ್ಠ ಸಂತರಾಗಿದ್ದರು ಎಂದು ಹೇಳಿದರು.

ಉಪ್ಪಿನ ಬೆಟಗೇರಿಯ ಸೂಫಿಸಂತ ಹಜರತ್ ಶಿರಾಜುಲ್ ಅಕ್ಷಾಖಾದ್ರಿ ಮಾತನಾಡಿ, ಜಗತ್ತಿನ ಸರ್ವಧರ್ಮಗಳ ಧ್ಯೇಯ ಮನುಕುಲದ ಉದ್ಧಾರವೇ ಆಗಿದ್ದು, ಭೇದಭಾವ ಇರುವವರು ಧರ್ಮ ಗುರು ಆಗಲು ಸಾಧ್ಯವಿಲ್ಲ. ಭೇದಭಾವ ಮಾಡುವವರಿಗೆ ಮೋಕ್ಷ ಇಲ್ಲ. ಸತ್ಸಂಗ ಪ್ರತಿಯೊಬ್ಬರನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತದೆ. ಬಸವಾದಿ ಶರಣರು ಅನ್ನದಾಸೋಹದ ಜೊತೆ ಜ್ಞಾನ ದಾಸೋಹವನ್ನು ನಾಡಿಗೆ ಉನಬಡಿಸಿದರು. ಸರ್ವಧರ್ಮ ಗ್ರಂಥಗಳು ಬೋಧನೆ ಮನುಕುಲದ ಉದ್ಧಾರವೇ ಆಗಿದೆ. ಇಬ್ರಾಹಿಂ ಸುತಾರ್‌ ಭಾವೈಕತೆಯ ರಾಯಭಾರಿಯಾಗಿದ್ದರು ಎಂದರು.

ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟನೆ ಮಾಡಿದರು. ಬಸವಾನಂದ ಟ್ರಸ್ಟ್ ಉಪಾಧ್ಯಕ್ಷ ಬಿ.ಎಂ. ಡಪಳಾಪುರ ಅಧ್ಯಕ್ಷತೆ ವಹಿಸಿದ್ದರು. ಕಾದರವಳ್ಳಿಯ ಹಜರತ್ ಮೌಲಾನಾ ತನ್ವಿರಸಾಬ್‌ ಮುಜಾವರ, ಕೊಣ್ಣೂರಿನ ಡಾ. ಬಸವರಾಜ ಚೌಗಲಾ, ಅವರಾದಿಯ ನಬಿಸಾಬ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಪ್ರಾಸ್ತವಿಕವಾಗಿ ಮಲ್ಲಪ್ಪಣ್ಣ ಕಟಗಿ ಮಾತನಾಡಿದರು. ನಿಖಿತಾ ಸುತಾರ ಕುರಾಣ ಪಠಣ ಮಾಡಿದರು. ಕು.ಆಯಾನ ಸುತಾರ ಗೀತಾ ಶ್ಲೋಕ ಹೇಳಿದ. ದಿಯಾ ಸುತಾರ ವಚನ ಪಠಣ ಮಾಡಿದಳು. ಮೆಹಬೂಬಿ ಸನದಿ ಪ್ರಾರ್ಥಿಸಿದರು. ಹಿರಿಯ ಭಜನಾ ಕಲಾವಿದ ಮೆಹಬೂಬ್ ಸನದಿ ಭಾವೈಕ್ಯ ಪ್ರಾರ್ಥನೆ ಮಾಡಿದರು.

ಪ್ರಶಸ್ತಿ ಪ್ರದಾನ : ನಾಡಿನ ಹಿರಿಯ ಭಜನಾ ಕಲಾವಿದ, ಆಧ್ಯಾತ್ಮಿಕ ಚಿಂತಕರಾದ ಮೆಹಬೂಬ ಎಂ.ಸನದಿ ಅವರಿಗೆ 2024ನೇ ಸಾಲಿನ ಭಾವೈಕ್ಯ ಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

ಮುಖಂಡರಾದ ಸಂಗಪ್ಪ ಹಲ್ಲಿ, ಎಂ.ಎಸ್. ಮುಗಳಖೋಡ, ಈರಣ್ಣ ಹಲಗತ್ತಿ, ಗೊಲೇಶ ಅಮ್ಮನಗಿ, ಪ್ರಭು ಬೆಳಗಲಿ, ಡಾ.ಬಿ.ಡಿ. ಸೋರಗಾಂವಿ, ಸಿ.ಬಿ. ಪಟ್ಟಣಶೆಟ್ಟಿ, ಚಂದ್ರು ಗೊಂದಿ, ಜಿ.ಎ. ಮಠಪತಿ, ಸಿ.ಎಂ. ಕಟಗಿ, ಕಲ್ಲಪ್ಪ ಚಿಂಚಲಿ, ಮಹಾಲಿಂಗಪ್ಪ ಲಾತೂರ, ಭೀಮಶಿ ನೇಗಿನಾಳ, ಚಂದ್ರಶೇಖರ ಕೊಳಕಿ, ಸಿದ್ಧಾರೂಢ ಮುಗಳಖೊಡ, ಈಶ್ವರ ವಂದಾಲ, ಮಹಾನಿಂಗ ಕರೆಹೊನ್ನ, ಮಹದೇವಪ್ಪ ಅಂಗಡಿ, ಅಲ್ಲಪ್ಪ ಗುಂಜಿಗಾಂವಿ, ಲಕ್ಕಪ್ಪ ಚಮಕೇರಿ, ಮಹಾಲಿಂಗ ಬಿಂಜಲಬಾವಿ, ನಜೀರ್‌ ಅತ್ತಾರ, ಅಬ್ದುಲ್ ಸುತಾರ, ಈಶ್ವರ ಮುಂಡಗನೂರ, ನಬಿಸಾಬ್‌ ಮುಲ್ಲಾ, ಶ್ರೀಶೈಲ ಕಿರಗಟಗಿ, ಹಣಮಂತ ರಾವಳ, ಚೇತನ ಹಾದಿಮನಿ, ಮಲ್ಲಪ್ಪ ಮುದಕಪ್ಪಗೋಳ, ಶಂಕರ ನಿಲಾರಿ ಸೇರಿದಂತೆ ಎಲ್ಲ ಸಮಾಜದ ಹಿರಿಯರು, ಊರಿನ ಗಣ್ಯರು ಇದ್ದರು. ಮಹಾಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಹುಮಯೂನ್ ಸುತಾರ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ. ಗಿಂಡೆ, ಎಂ.ಆರ್. ಬಿದರಿ ನಿರೂಪಿಸಿದರು,

Share this article