ಕಮಲಾಪುರ: ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಮಳೆಗೆ ದಸ್ತಾಪುರ ಗ್ರಾಮದ ರೈತ ಹಣಮರಾಯ ಢಣಕಾಪುರ ಅವರ ಅಪಾರ ಪ್ರಮಾಣದ ಕಬ್ಬು ಬೆಳೆ ಹಾಳಾಗುತ್ತಿರುವ ಜತೆಗೆ ಲಕ್ಷಾಂತರ ಬಂಡವಾಳ ಹೂಡಿದ ರೈತ ಇತ್ತ ಬೆಳೆಯು ಇಲ್ಲದೇ,ಅತ್ತ ಆದಾಯವು ಇಲ್ಲದೆ ಕಂಗಾಲಾಗಿದ್ದಾರೆ.
ಮಳೆ ನೀರಿನ ರಭಸಕ್ಕೆ ಕೊಚ್ಚಿ ಕೊಂಡು ಹೋದ ಕಬ್ಬು ಬೆಳೆ ಜಮೀನು ಕೆರೆಯಂತಾಗಿದೆ ಅತಿವೃಷ್ಟಿಗೆ ದಸ್ತಾಪುರ ರೈತ ತತ್ತರಿಸಿ ಹೋಗಿದ್ದಾರೆ. ಸಮೀಕ್ಷೆ ಆರಂಭಿಸದ ಸರಕಾರ ಪರಿಹಾರದ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಪರಿಹಾರ ಸಿಗುತ್ತಾ ಎನ್ನುವುದೇ ರೈತರಿಗೆ ಒಂದು ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲಿಯೂ ಕಮಲಾಪುರ ತಾಲೂಕಿನಲ್ಲಿ ಅಂತೊ ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಹೀಗಾಗಿ ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳನ್ನು ಸರ್ವೇ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರ ಒತ್ತಾಯವಾಗಿದೆ.
ಸಾಲ ಮಾಡಿ ರಾಸಾಯನಿಕ ಗೊಬ್ಬರ ಹಾಕಿ 5 ಎಕರೆ ಕಬ್ಬು ಬೆಳೆ ಬೆಳೆದಿದ್ದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಕಬ್ಬು ಬೆಳೆ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿ ಒಂದೊಂದು ದಂಟು ಉಳಿದಿದೆ. ಕಬ್ಬುಗದ್ದೆಯಲ್ಲಿ ಇನ್ನು ಒಳಗೆ ಹೋಗಲಾಗದೆ ಎದೆ ಭಾಗದವರೆಗೆ ನೀರು ನಿಂತಿವೆ. ಸರ್ಕಾರ ಹಾಗೂ ಕಂದಾಯ ಇಲಾಖೆ ಬಂದು ಬೆಳೆ ನೋಡಿ ಪರಿಹಾರ ನೀಡಬೇಕು.
-ಹಣಮಂತರಾಯ ಢಣಕಾಪುರ ಕಬ್ಬು ಬೆಳೆ ಹಾನಿಯಾದ ರೈತ ದಸ್ತಾಪುರ