ಕಿಕ್ಕೇರಿ: ತಾಲೂಕಿಗೆ ರೈತರ ಜೀವನಾಡಿ ಹೇಮಗಿರಿ ಸಕ್ಕರೆ ಕಾರ್ಖಾನೆ ಸಮಗ್ರ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಕಾರ್ಖಾನೆ ಅಧ್ಯಕ್ಷ ರವಿರೆಡ್ಡಿ ತಿಳಿಸಿದರು.
ಕಬ್ಬಿನ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ ಇಳುವರಿ ಹೆಚ್ಚಿಸಲು ಕಾರ್ಖಾನೆ 95 ಎಕರೆಯಲ್ಲಿ ಮಾದರಿ ತಾಕು, ವೈಜ್ಞಾನಿಕ ನಾಟಿ, ಮಣ್ಣಿನ ಪರೀಕ್ಷೆ, ಆಳವಾದ ಉಳುಮೆ ಮಾಡಿ ಪ್ರತಿ ಎಕರೆಗೆ 70 ಮೆ.ಟನ್ ಇಳುವರಿ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಖಾನೆ ಹಿರಿಯ ಅಧಿಕಾರಿ ಕೆ.ಬಾಬುರಾಜ್ ಮಾತನಾಡಿ, ಕಬ್ಬು ಕಟಾವುಗಾರರಿಗೆ ಕಾರ್ಖಾನೆ ನಿಗದಿ ಪಡಿಸದಷ್ಟು ಹಣ ನೀಡಿ ಸಮಸ್ಯೆಗಳಲ್ಲಿ ವಿಭಾಗ ಮಟ್ಟದ ಅಧಿಕಾರಿಗಳಿಗೆ ತಿಳಿಸಿ ಹೆಚ್ಚು ಹಣ ನೀಡದಿರಿ ಎಂದು ತಿಳಿ ಹೇಳಿದರು.ಕಾರ್ಖಾನೆ ಅಧಿಕಾರಿಗಳಾದ ಮೇಯನ್, ಅಶೋಕ್‌ಕುಮಾರ್, ಆರ್.ಇ. ಕುಮಾರ್, ಮೋಹನ್, ರವಿಚಂದ್ರನ್, ಜಿ.ಆರ್. ದತ್ತಾತ್ರೇಯ, ಚಾಮುಂಡೇಶ್ವರಿ ಷುಗರ್‍ಸ್ ಅಧ್ಯಕ್ಷ ನಾಚಿಯಪ್ಪನ್, ಮುಖ್ಯ ಹಣಕಾಸು ಅಧಿಕಾರಿ ಎನ್. ಶ್ರೀನಿವಾಸನ್, ಚೀಪ್ ಜನರಲ್ ಮಾನ್ಯೇಜರ್ ಪೂರ್ಣಸ್ವಾಮಿ, ಹೇಮಾವತಿ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗಾಧಿಕಾರಿ ದೇವೇಗೌಡ, ಕಾಯಿ ಮಂಜೇಗೌಡ, ಕೆ.ಜಿ. ಪುಟ್ಟರಾಜು, ಬೋರಾಪುರ ಮಂಜುನಾಥ್, ವಡಕಹಳ್ಳಿ ಮಂಜೇಗೌಡ, ಕುಮಾರ್, ಕಬ್ಬು ಬೆಳೆಗಾರ ಸಂಘ, ಲಾರಿ ಹಾಗೂ ಟ್ರ್ಯಾಕ್ಟರ್ ಮಾಲೀಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಖಾನೆ ಸಿಬ್ಬಂದಿ ಹಾಜರಿದ್ದರು.