ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Dec 26, 2023, 01:31 AM ISTUpdated : Dec 26, 2023, 01:32 AM IST
ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ರೈತರ ಪ್ರತಿಭಟನೆ | Kannada Prabha

ಸಾರಾಂಶ

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸಾಲ ಮನ್ನಾಕ್ಕಾಗಿ, ಪರಿಹಾರಕ್ಕಾಗಿ ರೈತರು ಬರಗಾಲ ಬರಬೇಕೆಂದು ಆಶಿಸುತ್ತಾರೆ ಎಂದು ಹೇಳಿರುವುದು ಖಂಡನೀಯ ತಕ್ಷಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು

ಧರಣಿ । ಜಿಲ್ಲಾಡಳಿತ ಮುಂಭಾಗ ಕಬ್ಬು ಬೆಳೆಗಾರರ ಸಂಘ ಆಕ್ರೋಶ । ಸಚಿವ ಸ್ಥಾನದಿಂದ ವಜಾಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸಾಲ ಮನ್ನಾಕ್ಕಾಗಿ ಪರಿಹಾರಕ್ಕಾಗಿ ರೈತರು ಬರಗಾಲ ಬರಬೇಕೆಂದು ಆಶಿಸುತ್ತಾರೆ ಎಂದು ಹೇಳಿರುವುದು ಖಂಡನೀಯ ತಕ್ಷಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ ಶಿವಾನಂದ ಪಾಟೀಲ್ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಡಳಿತ ಭವನದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಶಿವಾನಂದ ಪಾಟೀಲ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ದೇಶಾದ್ಯಂತ ವಿಶ್ವ ರೈತ ದಿನಾಚರಣೆಯನ್ನು ಆಚರಿಸಿ ರೈತ ದೇಶದ ಬೆನ್ನೆಲುಬು ಹಾಗೂ ದೇಶಕ್ಕೆ ಅನ್ನ ನೀಡುವ ಅನ್ನದಾತ ಎಂದು ಮಾತನಾಡುತ್ತಾರೆ, ಅದೇ ರಾಜ್ಯ ಸರ್ಕಾರದ ಮಂತ್ರಿಯಾದ ಶಿವಾನಂದ ಪಾಟೀಲ್ ರೈತರು ಬರಗಾಲವನ್ನು ಬರಬೇಕೆಂದು ಆಶಿಸುತ್ತಾರೆ, ಸಾಲ ಮನ್ನಾವನ್ನು ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಾರೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ಬರಗಾಲವು ಸ್ವಾಭಾವಿಕವಾಗಿ ಬರುತ್ತದೆ. ಪ್ರತಿಬಾರಿ ಸಾಲ ಮನ್ನಾ ಮಾಡಲಾಗುತ್ತದೆಯೇ ವಿದ್ಯುತ್ ಅನ್ನು ಉಚಿತವಾಗಿ ಕೊಡಲಾಗುತ್ತಿದೆ. ಗೊಬ್ಬರದ ಸಬ್ಸಿಡಿ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಲ ಮನ್ನಾವನ್ನು ರೈತರು ನಿರೀಕ್ಷಿಸುವುದು ಸರಿಯಲ್ಲ ಹಾಗೂ ರೈತರ ಸಾಲ ಮನ್ನಾವನ್ನು ಸರ್ಕಾರ ಮಾಡುವುದಿಲ್ಲ ಎಂದು ಹೇಳಿರುವುದು ಅವಿವೇಕತನದಿಂದ ಕೂಡಿದೆ ಎಂದರು,

‘ರಾಜ್ಯದ ಮುಖ್ಯಮಂತ್ರಿಗಳು ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಮಂತ್ರಿಗಳು ಘೋಷಣೆ ಮಾಡಿದಾಗ ಅವಿವೇಕಿ ಶಿವಾನಂದ ಪಾಟೀಲ್ ಎಲ್ಲಿ ಹೋಗಿದ್ದ, ತಾಕತ್ತಿದ್ದರೆ ಅಲ್ಲಿ ಎದ್ದು ನಿಂತು ಪ್ರತಿಭಟಿಸಬೇಕಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು, ಮಲೆಯೂರು ಹರ್ಷ, ಎಳನೀರು ಮಹೇಂದ್ರ, ಸತೀಶ್, ಗ್ರಾಮ ಘಟಕದ ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಪ್ರಭುಸ್ವಾಮಿ ಉಡೀಗಾಲ, ಗ್ರಾಮ ಘಟಕದ ಅಧ್ಯಕ್ಷ, ಮಂಜುನಾಥ್, ಮಹದೇವಸ್ವಾಮಿ, ಚೇರ್ಮನ್ ಗುರು, ನಾಗೇಂದ್ರ ಕಿಳಲೀಪುರ ನಂದೀಶ್, ಶ್ರೀಕಂಠ, ನಾಗರಾಜು, ಮಹದೇವಪ್ಪ, ಸಿದ್ದಪ್ಪ ಇತರರು ಭಾಗವಹಿಸಿದ್ದರು. ಪಾಟೀಲ್‌ ರೈತರ ಕ್ಷಮೆ ಕೇಳಬೇಕುತಕ್ಷಣ ರೈತರ ಕ್ಷಮೆಯನ್ನು ಶಿವಾನಂದ ಪಾಟೀಲ್ ಕೇಳಬೇಕು, ಸಚಿವ ಸಂಪುಟದಿಂದ ಮುಖ್ಯಮಂತ್ರಿ ಇವರನ್ನು ವಜಾ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇವರು ಪ್ರವಾಸವನ್ನು ಮಾಡಲು ಬಿಡುವುದಿಲ್ಲ. ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು, ಮಲೆಯೂರು ಹರ್ಷ, ಎಳನೀರು ಮಹೇಂದ್ರ, ಸತೀಶ್, ಗ್ರಾಮ ಘಟಕದ ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಪ್ರಭುಸ್ವಾಮಿ ಉಡೀಗಾಲ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ