ಯುವಕನ ಆತ್ಮ ಹತ್ಯೆ

KannadaprabhaNewsNetwork | Published : Oct 7, 2023 2:18 AM

ಸಾರಾಂಶ

ಯುವಕನ ಆತ್ಮ ಹತ್ಯೆ
ನರಸಿಂಹರಾಜಪುರ: ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಹೆಬ್ಬೆ ರಸ್ತೆಯ ಅವಿವಾಹಿತ ಸಂಜು ( 26) ಎಂಬ ಯುವಕನೊಬ್ಬನು ತನ್ನ ಮನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನ ತಂದೆ ಕೆಲವು ವರ್ಷಗಳ ಹಿಂದೆಯೇ ಮೃತ ಪಟ್ಟಿದ್ದರು. ಡ್ರೈವಿಂಗ್ ವೃತ್ತಿ ಮಾಡುತ್ತಿದ್ದ ಸಂಜು ಗುರುವಾರ ಸಂಜೆ ಸಮಯದಲ್ಲಿ ತಾಯಿ ಹಾಗೂ ತಂಗಿ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this article