ಬಿಜಿಕೆರೆ ಬಸವರಾಜ
ಪಟ್ಟಣದ ಕೂಗಳತೆ ದೂರದಲ್ಲಿರುವ ಸೂಲೇನಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲದ ಪರಿಣಾಮ ನೀರು ಹೊರ ಹೋಗದೆ ಇಡೀ ಗ್ರಾಮಕ್ಕೆ ಕೊಚ್ಚೆ ನೀರು ದಿಗ್ಬಂಧನ ಹಾಕಿದ್ದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದೆ.
ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂಲೇನಹಳ್ಳಿ ಗ್ರಾಮ ಮೊಳಕಾಲ್ಮೂರು ಪಟ್ಟಣಕ್ಕೆ ಕೂಗಳತೆ ದೂರಲ್ಲಿದೆ. 250ಕ್ಕೂ ಹೆಚ್ಚು ಮನೆಗಳಿವೆ. ಎರಡೂ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿದೆ. ಈ ಗ್ರಾಮದಲ್ಲಿ ಚರಂಡಿ ಇಲ್ಲದೆ ಪರಿಣಾಮ ಇಡೀ ಗ್ರಾಮದ ಚರಂಡಿ ನೀರು ಹೊರ ಹೋಗದೆ ನಿಂತಲ್ಲಿಯೇ ನಿಂತು ಇಡೀ ಊರು ಕೊಚ್ಚೆಯಂತಾಗಿ ಅನೈರ್ಮಲ್ಯದ ತಾಣವಾಗಿದೆ.ಈ ಹಿಂದೆ ಸರಾಗವಾಗಿ ಹರಿದು ಹೋಗುತ್ತಿದ್ದ ಜಮೀನು ಖಾಸಗಿಯವರಿಗೆ ಸೇರಿದೆ ಎನ್ನುವ ಕಾರಣಕ್ಕೆ ಚರಂಡಿ ನೀರು ಹರಿಯುವಿಕೆಯನ್ನು ಬಂದ್ ಮಾಡಿರುವ ಪರಿಣಾಮ
ಇಡೀ ಗ್ರಾಮ ಕೊಚ್ಚೆಯಲ್ಲಿ ತೇಲುತ್ತಿದೆ. ಮಕ್ಕಳು, ವೃದ್ಧರು, ಮಹಿಳೆಯರು ಕೊಚ್ಚೆ ನೀರಲ್ಲಿಯೇ ನಡೆದಾಡುತ್ತಾ ಜೀವನ ಕಳೆಯುವ ಕರುಣಾಜನಕ ಸ್ಥಿತಿ ಇದೆ. ಗ್ರಾಮ ಪಂಚಾಯಿತಿಯವರು ವಾರಕ್ಕೊಮ್ಮೆ ಸೆಪ್ಟಿಕ್ ಟ್ಯಾಂಕ್ ಬಳಸಿ ಕೊಚ್ಚೆ ನೀರು ಹೊರ ಹಾಕುವಲ್ಲಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದು ನೆಪ ಮಾತ್ರ ಎಂಬಂತಾಗಿದೆ.
ಎಲ್ಲಾ ಕಾಲಕ್ಕೂ ಇಡೀ ಊರು ನೀರಿನಿಂದ ಆವೃತವಾಗಿರುತ್ತದೆ. ಇನ್ನೂ ಮಳೆಗಾಲದಲ್ಲಿ ಮಳೆ ನೀರಿನ ಜತೆಗೆ ಕೊಚ್ಚೆ ನೀರು ಸೇರಿ ಮನೆಗಳ ಬಾಗಿಲುಗಳ ವರೆಗೆ ಆವರಿಸುತ್ತಾ
ದುರ್ವಾಸನೆ ಬೀರುವಂತಾಗುತ್ತದೆ. ಕನಿಷ್ಟ ಬ್ಲೀಚಿಂಗ್ ಹಾಕಲು ಮುಂದಾಗುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ, ಈ ಅವ್ಯವಸ್ಥೆಯಿಂದಾಗಿ ಇಡೀ ಗ್ರಾಮ ಸೊಳ್ಳೆಗಳ ಅವಾಸ್ತಾನವಾಗಿದೆ. ಸೊಳ್ಳೆಗಳ ಉಪಟಳ ಹೆಚ್ಚಾಗಿದೆ. ಆರಾಮಾಗಿ ಮನೆಯಲ್ಲಿ ಇರಲು ಆಗದಂಥ ಸ್ಥಿತಿ ತಲೆದೋರಿದೆ. ಡೆಂಘೀ ಮಲೇರಿಯಾದಂತ ಖಾಯಿಲೆಗಳ ಭೀತಿ ಎದುರಾಗಿದೆ. ದಶಕದಿಂದ ಜನರು ಕೊಚ್ಚೆ ನೀರಲ್ಲಿಯೇ ಜೀವನ ನಡೆಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ.
ಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.