ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಮಲ್ಲನಕುಪ್ಪೆ ಗ್ರಾಪಂ ಸರ್ಕಾರಿ ಶಾಲಾ ಆವರಣದಲ್ಲಿ ಜಿಪಂ, ತಾಪಂ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಾಲಾ ಅವಧಿಯಲ್ಲಿ ಹೋಂ ವರ್ಕ್ ಮಾಡುವುದು, ಓದುವುದನ್ನು ಮಾಡುತ್ತಿರುತ್ತಾರೆ. ಆದರೆ, ಬೇಸಿಗೆ ರಜೆ ಬಂದಾಗ ಅರ್ಥಪೂರ್ಣವಾಗಿ ಕಳಿಯಲು ಬೇಸಿಗೆ ಶಿಬಿರವು ಅನುಕೂಲವಾಗಿದೆ. ಶಿಬಿರದಲ್ಲಿ ಅನೇಕ ಕ್ರಿಯಾತ್ಮಕ ಚಟುವಿಟಿಕೆಗಳ ಮೂಲಕ ಗ್ರಾಮೀಣ ಮಕ್ಕಳ ಜ್ಞಾನ ಬೆಳೆಯಲು ಉತ್ತಮ ವೇದಿಕೆಯಾಗಿದೆ ಎಂದರು.ಶಿಬಿರದಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ. ಹಾಗಾಗಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಸಿಗೆ ಶಿಬಿರದ ಅನುಕೂಲ ಪಡೆದುಕೊಳ್ಳಬೇಕು ಎಂದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ: ಎ.ಆರ್.ನಾಗಣ್ಣ
ಪಟ್ಟಣದ ಕೃಷ್ಣನಗರದ ಮೂರನೇ ಹಂತದ ನಂದಗೋಕುಲ ಕಿಡ್ಸ್‌ವರ್ಲ್ಡ್ ಸಂಸ್ಥೆ ಶಾಂತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ನಡೆದ 6 ರಿಂದ 13ವರ್ಷದೊಳಗಿನ ಮಕ್ಕಳಿಗೆ ಶಿಬಿರದಲ್ಲಿ ಅಗ್ನಿಶಾಮಕದಳ ಸಿಬ್ಬಂದಿಯಿಂದ ಬೆಂಕಿ ಅನಾಹುತ ಸಂಭವಿಸಿದ್ದಾಗ ಕೈಗೊಳ್ಳ ಬಹುದಾದ ಕ್ರಮ ಹಾಗೂ ಅಣುಕು ಪ್ರದರ್ಶವನ್ನು ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.ಇದೇ ವೇಳೆ ರೈನ್ ಡ್ಯಾನ್ಸ್ ಮಾಡಿ ಮಕ್ಕಳಿಗೆ ಮಾಹಿತಿ ನೀಡಿ ಅವರು ಮನದ ತಣಿವನ್ನು ಈಡೇರಿಸಿದರು. ಇತ್ತೀಜಿನ ದಿನಗಳಲ್ಲಿ ಮಕ್ಕಳು ರಜೆ ದಿನಗಳಲ್ಲಿ ಆಟವಾಡಲು ಕೆರೆ, ಬಾವಿ, ಕಾಲುವೆಗಳಲ್ಲಿ ಈಜಲು ಹೋಗಿ ಅನಾಹುತ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ. ಇದನ್ನು ಮನಗೊಂಡು ಮಕ್ಕಳಿಗೆ ಭಾರತೀಯ ಸಂಸ್ಕಾರದ ಬಗ್ಗೆ ತಿಳಿಸಿ ಉತ್ತಮ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು,