ನಾಗರಾಜ್ ನ್ಯಾಮತಿ
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಅನತಿ ದೂರದಲ್ಲೇ ಕೃಷ್ಣಾ ನದಿಯೂ ಹರಿಯುತ್ತಿದೆ. ಮತ್ತೊಂದು ಭಾಗದಲ್ಲಿ ನಾರಾಯಣಪುರ ಜಲಾಶಯ ಹೊಂದಿದ್ದರೂ ಸುರಪುರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರದ ಸ್ಥಿತಿ ಎದುರಾಗಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾರಾಯಣಪುರ ಜಲಾಶಯದ ನಾಲೆಗಳಲ್ಲಿ ಸದ್ಯ ನೀರು ಹರಿಯುತ್ತಿಲ್ಲ. ಅಲ್ಲದೆ ಕೃಷ್ಣೆಯ ಒಡಿಲು ಬರದಾಗಿದೆ. ಇದರಿಂದ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಅದಾಗ್ಯೂ ಕುಡಿಯುವ ನೀರಿಗೆ ನಾರಾಯಣಪುರ ಜಲಾಶಯವೇ ಜೀವಗಂಗೆಯಾಗಿದೆ.ಅಂತರ್ಜಲ ಬರಿದಾಗಿ, ಕೊಳವೆಬಾವಿಗಳು ಬತ್ತಿ ಹೋಗಿವೆ. ದೂರದ ಜಮೀನುಗಳಿಂದ ನೀರು ತರಬೇಕಾದ ಅನಿವಾರ್ಯತೆ ಬಹುತೇಕ ಗ್ರಾಮಗಳಲ್ಲಿ ಎದುರಾಗಿದೆ. ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೂ ನೀರಿಲ್ಲವಾಗಿದೆ. ಅವುಗಳಿಗೂ ಕುಡಿಯಲು ನೀರು ಹೊಂದಿಸುವುದು ಬಹುದೊಡ್ಡ ಸವಾಲಾಗಿದೆ.
ತಾಲೂಕಿನ 68 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಇರುವುದನ್ನು ಗುರುತಿಸಲಾಗಿದೆ. ಸೂಗೂರು, ಯಕ್ತಾಪುರ, ಕಿರದಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಹೋಗಲಾಡಿಸಲು ತಾಲೂಕಾಡಳಿತ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರೂಪುರೇಷೆ ರಚಿಸಿದೆ.
ತಾಲೂಕಿನ ಯಕ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಕ್ತಾಪುರ, ಗುತ್ತಿಬಸವೇಶ್ವರ ಕಾಲೋನಿ, ಬೇವಿನಾಳ ಎಸ್.ಕೆ., ತಳ್ಳಳ್ಳ ಬಿ, ತಳ್ಳಳ್ಳಿ ಬಿ. ಜನತಾ ಕಾಲೊನಿ, ಹೂವಿನಹಳ್ಳಿ ಎಸ್‌ಸಿ ಕಾಲೊನಿ, ಐನಾಪುರ ಬರುವ 12 ಗ್ರಾಮಗಳಲ್ಲಿ ನೀರಿನ ತೊಂದರೆಯಿದೆ. ಸೂಗೂರು ಗ್ರಾಪಂ ವ್ಯಾಪ್ತಿಯ ಚಂದಲಾಪುರ, ಅಡ್ಡೊಡಗಿ, ಹೆಮ್ಮಡಗಿ, ಕುಪಗಲ್, ಚೌಡೇಶ್ವರಹಾಳ, ದೇವತ್ಕಲ್- ಕೋನಾಳ, ದೇವತ್ಕಲ್, ಗುಡಿಯಾಳ(ಜಿ), ರಾಯಗೇರಾ, ಕನಕನಮಡ್ಡಿ, ಮಲ್ಲಿಮಡ್ಡಿ ಕ್ಯಾಂಪ್, ತಿಂಥಣಿ-3, ಹೇಮನೂರು- ಶಖಾಪುರ, ಹೆಮನೂರು, ದೇವಿಕೇರಾ- ರತ್ತಾಳ, ದೇವಿಕೇರಾ, ಅರೆಕೇರಾ ಜೆ-2, ಖಾನಾಪುರ ಎಸ್.ಎಚ್.-1, ದೇವರಗೋನಾ-3, ಪೇಠಾ ಅಮ್ಮಾಪುರ-3, ತಿಂಥಣಿ-3, ಆಲ್ದಾಳ-4, ಕಿರದಳ್ಳಿ-2, ಹೆಗ್ಗಣದೊಡ್ಡಿ-1, ಮಲ್ಲಾ ಬಿ-1, ವಾಗಣಗೇರಾ-3, ಕಚಕನೂರು-3, ಮಾಲಗತ್ತಿ-4, ಬಾದ್ಯಾಪುರ-3, ಏವೂರ-2, ಯಾಳಗಿ-2 ಸೇರದಿಂತೆ ಒಟ್ಟು 68 ಗ್ರಾಮಗಳನ್ನು ನೀರಿನ ಅಭಾವ ಗ್ರಾಮಗಳಾಗಿ ಗುರುತಿಸಲಾಗಿದೆ.
ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 19, 20, 23 ವಾರ್ಡ್ಗಳಲ್ಲಿ ನೀರಿನ ಅಭಾವ ತಲೆದೋರಿದೆ. ಬೇಸಿಗೆ ಹೆಚ್ಚಳವಾದಂತೆ 10 ವಾರ್ಡ್‌ಗಳಲ್ಲಿ ನೀರಿನ ಅಭಾವ ಉಂಟಾಗುವುದನ್ನು ಗುರುತಿಸಲಾಗಿದೆ. ಈ ಭಾಗದ ದೊಡ್ಡಿಗಳಲ್ಲಿ ಕುಡಿಯುವ ನೀರಿನ ಎದುರಾಗಲಿದೆ. ಇದನ್ನು ಪುರಸಭೆ ಹೇಗೆ ನಿರ್ವಹಣೆ ಮಾಡಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ವಿಜಯಕುಮಾರ, ಕೆಬಿಜೆನ್ನಲ್ ಜೆಇಇ.
ಹನಮಂತ್ರಾಯ ಪಾಟೀಲ್, ಆರ್‌ಡಬ್ಲ್ಯುಎಸ್ ಎಎಇ, ಸುರಪುರ.