)
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತನಿಗೆ ತಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕವಾಗುತ್ತೇನೆ ಎಂಬ ಬಲವಾದ ನಂಬಿಕೆ ಇತ್ತು. ಅದು ಸಿಗದಿದ್ದಾಗ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ತನಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿಲ್ಲ ಎಂಬ ಅಸಹನೆ ಎದ್ದಿದೆ. ಎಷ್ಟೋ ಸಂದರ್ಭದಲ್ಲಿ ನಮ್ಮ ವಿರುದ್ಧವಾಗಿ ಪಕ್ಷದ ತೀರ್ಮಾನಗಳು ಆಗುತ್ತವೆ. ಸಂದರ್ಭಕ್ಕಾಗಿ ಕಾಯಬೇಕು. ಅದನ್ನು ಬಿಟ್ಟು ಈ ರೀತಿ ಉದ್ವೇಗಕ್ಕೊಳಗಾಗಿ ಮಾತನಾಡಬಾರದಿತ್ತು ಎಂದರು.
ಆತ 8 ದಿನಗಳ ಕಾಲ ನಿದ್ರೆಯೇ ಮಾಡಿಲ್ಲ. ಅಕಸ್ಮಾತ್ ಆಗಿ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದರು. ಪೂರ್ಣ ಗುಣಮುಖರಾಗುವ ಮುನ್ನವೇ ಎದ್ದು ಬಂದು ಮಾತನಾಡಿದ್ದರಿಂದ ಈ ರೀತಿ ಆಗಿದೆ ಎಂದರು.ಸುಂದರೇಶ್ ಅವರಿಗೆ ಎಚ್1ಎನ್1 ಆಗಿತ್ತು. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದು ಮೆದುಳಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಇದಕ್ಕೆ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ಚಿಕಿತ್ಸೆ ಪೂರ್ಣಗೊಳ್ಳದೆ ಅವರು ಆಸ್ಪತ್ರೆಯಿಂದ ಬರಬಾರದಿತ್ತು. ಮುಖ್ಯಮಂತ್ರಿಗಳು ಶಿವಮೊಗ್ಗಕ್ಕೆ ಬರುವ ಹಿನ್ನೆಲೆ ಅವರು ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಅನಾರೋಗ್ಯ ಕಾರಣದಿಂದ ಆತ ಈ ರೀತಿ ಮಾತನಾಡಿದ್ದು ಬಿಟ್ಟರೆ ಇದರಲ್ಲಿ ಬೇರೆ ರಾಜಕಾರಣ ಇಲ್ಲ. ಅವತ್ತೆ ಪುನಃ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡ ಬಳಿಕ ಅವರಿಗೆ ತಪ್ಪಿನ ಅರಿವಾಗಿದೆ ಎಂದರು.