ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಬೋಸ್ ಮಂದಣ್ಣ, ಕೃಷಿ ಚಟುವಟಿಕೆಗೆ ಪೂರಕವಾದ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಫಸಲು ಬರುವ ನಿರೀಕ್ಷೆಯಿದೆ. ವಿಜ್ಞಾನಿಗಳು ಶಿಪಾರಸ್ಸು ಮಾಡುವ ಕೀಟನಾಶಕಗಳನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಕೃಷಿ ಅಭಿವೃದ್ಧಿಯಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು.ಪಂಚಾಯಿತಿ ಸದಸ್ಯ ಪ್ರಸಾದ್ ಕುಟ್ಡಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರು.ವಿವಿಧ ಇಲಾಖೆಯ ಸಂಶೋಧನಾ ವಿಜ್ಞಾನಿಗಳಾದ ಡಾ.ಪ್ರಭಾಕರ, ಡಾ.ಮೋಹನ್ ಕುಮಾರ, ಡಾ.ರಮೇಶ್ ಕೃಷ್ಣ, ಡಾ.ರಾಜೇಂದ್ರ, ಡಾ.ಬಿಶ್ವರ್ಜನ್, ಡಾ.ಕೃಷ್ಣಕುಮಾರ್, ಡಾ.ಶಿವಕುಮಾರ್, ಡಾ.ಸಲೀಂ ಹಾಗೂ ಚಂದ್ರಶೇಖರ್ ಸೂಕ್ತ ಮಾಹಿತಿ ಸಲಹೆಗಳನ್ನು ನೀಡಿದರು.ಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಬೆಳೆಗಾರರು ಭಾಗವಹಿಸಿ ಕೃಷಿ ಬಗೆಗಿನ ಸಂಶಯಗಳಿಗೆ ಸಲಹೆ ಪಡೆದುಕೊಂಡರು.ಇದೇ ಸಂದರ್ಭ ವಿವಿಧ ಬಗೆಯ ಹಣ್ಣಿನ ಗಿಡಗಳು, ಬೀಜೋತ್ಪನ್ನಗಳು ಹಾಗೂ ಕೀಟನಾಶಕ ಜೌಷಧಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.