ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಕೆ.ಕೆ.ಪ್ರಸಾದ್‌ ಚುನಾವಣೆಗೆ 6 ವರ್ಷ ಅನರ್ಹ

KannadaprabhaNewsNetwork |  
Published : Jul 09, 2025, 12:18 AM IST
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಛೇರಿ  | Kannada Prabha

ಸಾರಾಂಶ

ಗ್ರಾಪಂ. ಅನುದಾನ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿ ಮುಂದಿನ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಗ್ರಾ.ಪಂ. ಅನುದಾನ ದುರುಪಯೋಗ ಆರೋಪ ಸಾಬೀತು ಹಿನ್ನೆಲೆ । ಸದಸ್ಯತ್ವಕ್ಕೂ ಕೊಕ್‌

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಗ್ರಾಪಂ. ಅನುದಾನ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿ ಮುಂದಿನ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.ಕೆ.ಕೆ. ಪ್ರಸಾದ್, ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಗ್ರಾಮ ಪಂಚಾಯಿತಿ ಅನುದಾನ 30,000 ರು.ವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್ ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಆನರ್ಹಗೊಳಿಸಿ 6 ವರ್ಷ ಚುನಾವಣೆಗೆ ನಿಲ್ಲದಂತೆ ಆದೇಶಿಸಿದ್ದಾರೆ.ಪ್ರಕರಣದ ವಿವರ:

ಕೆ.ಕೆ.ಪ್ರಸಾದ್ ಉಪಾಧ್ಯಕ್ಷರಾಗಿದ್ದ ಸಂದರ್ಭ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಆವರಣದಲ್ಲಿರುವ ಮಳಿಗೆ 49 ಅನ್ನು ಅನಧಿಕೃತವಾಗಿ ವಶಕ್ಕೆ ತೆಗೆದುಕೊಂಡು ಯಾವುದೇ ಹರಾಜು ಪ್ರಕ್ರಿಯೆ ನಡೆಸದೆ ಒಣಮೀನು ಮಳಿಗೆಯನ್ನು 8 ತಿಂಗಳಿನಿಂದ ನಡೆಸುತ್ತಿದ್ದಾರೆ. ಹಾಗೆಯೇ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದೇವು ಅವರ ಹೆಸರಿಗೆ ಸೌರವಿದ್ಯುತ್ ದೀಪ ಅಳವಡಿಸಲು 30,000 ರು. ಅನುದಾನವನ್ನು ಮಂಜೂರು ಮಾಡಿಸಿಕೊಂಡು ಸದರಿ ಬೀದಿ ದೀಪವನ್ನು ತಮ್ಮ ತಾಯಿಯ ಮನೆಯ ಗೋಡೆಯ ಆವರಣದೊಳಗೆ ಅಳವಡಿಸಿಕೊಂಡು ಸರ್ಕಾರದಿಂದ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಿದ್ದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ಜಿ.ಎನ್.ದಿನೇಶ್ ದೂರು ಸಲ್ಲಿಸಿದ್ದರು.ಈ ದೂರನ್ನು ದಾಖಲಿಸಿಕೊಂಡು ಆರೋಪದ ಕುರಿತು ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಲಾಗಿತ್ತು. ಇದರಂತೆ ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಮೊದಲ ಆರೋಪವು ಸಾಬೀತುಗೊಂಡಿಲ್ಲ. ಆದರೆ 2ನೇ ಆರೋಪದಲ್ಲಿ ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾಗಿದ್ದು, ಕೆ.ಕೆ.ಪ್ರಸಾದ್ ವಿರುದ್ಧ ಕ್ರಮ ವಹಿಸಬಹುದೆಂದು ಶಿಫಾರಸು ಮಾಡಿದ್ದರು.

PREV