ಅರೆಭಾಷೆ ಗೌಡರ ಸಂಘದ ಅವಶ್ಯಕತೆ ಇದೆ: ಆನಂದ ಕರಂದ್ಲಾಜೆ

KannadaprabhaNewsNetwork |  
Published : Nov 19, 2026, 02:45 AM IST
ಚಿತ್ರ.1: ಗೌಡ ಸಂಘ ಸುಂಟಿಕೊಪ್ಪ 11ನೇ ವರ್ಷದ ವಾರ್ಷಿಕ ಮಹಾಸಭೆಯ ವೇದಿಕೆಯಲ್ಲಿರುವ ಅತಿಥಿಗಳು. | Kannada Prabha

ಸಾರಾಂಶ

ಕೊಡಗು ಜಿಲ್ಲೆಯೂ ಸಣ್ಣದಾದರೂ ಅರೆಭಾಷೆ ಗೌಡರ ಸಂಘದ ಅವಶ್ಯಕತೆ ಬಹಳ ಇದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರದ್ಲಾಜೆ ಆನಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಂಟಿಕೊಪ್ಪ: ಕೊಡಗು ಜಿಲ್ಲೆಯೂ ಸಣ್ಣದಾದರೂ ಅರೆಭಾಷೆ ಗೌಡರ ಸಂಘದ ಅವಶ್ಯಕತೆ ಬಹಳ ಇದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರದ್ಲಾಜೆ ಆನಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಭಾಂಗಣದಲ್ಲಿ ಗೌಡ ಸಂಘ ಸುಂಟಿಕೊಪ್ಪ 11ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಭಾಗಮಂಡಲದಿಂದ ಕುಶಾಲನಗರದವರೆಗೆ ವಿರಾಜಪೇಟೆಯಿಂದ ಕರಕೆ ವರಗೆ ನಮ್ಮ ಸಂಘಗಳು ಬಹಳ ಸದೃಢವಾಗಿ ಸುಸಜ್ಜಿತವಾಗಿ ನಡೆಯುತ್ತಿದೆ. ಸಂಘದ ಪ್ರತಿ ಸದಸ್ಯರಿಗೂ ಜವಾಬ್ಧಾರಿಯಿರುವುದರಿಂದ ಪ್ರತಿಯೊಬ್ಬ ಸದಸ್ಯರೂ ಭಾಗಿಯಾಗಬೇಕೆಂದು ನುಡಿದರು.

ಸಂಘವು ಸ್ವಂತ ಜಾಗವನ್ನು ಖರೀದಿಸಿದ್ದು ಇಲ್ಲಿ ಪರಿಸರ ಸ್ನೇಹಿ ಮಾದರಿಯಲ್ಲಿ ಗೌಡ ಸಮಾಜದ ಕಟ್ಟಡವನ್ನು ಕಟ್ಟಬೇಕೆಂದು ಅವರು ಸಲಹೆ ನೀಡಿದರು.

ತಲಕಾವೇರಿಯಲ್ಲಿ ನಡೆಯುವ ತೀರ್ಥೋದ್ಭವ ಕಾರ್ಯಕ್ರಮ ನಮ್ಮದೆ ಆಗಿದ್ದು, ಅಲ್ಲಿ ಗೌಡ ಜನಾಂಗದವರೇ ತಕ್ಕ ಮುಖ್ಯಸ್ಥರಾಗಿದ್ದಾರೆ. ಕೊಡಗಿನಲ್ಲಿ ಗೌಡ ಜನಾಂಗದವರು ಶೇ.14 ಇದ್ದು ಯಾವುದೋ ಒಂದು ಜನಾಂಗವನ್ನು ಅನುಕರಿಸುವುದು ವಿಷಾದನೀಯ ಎಂದು ಆನಂದ ಹೇಳಿದರು.

ಗೌರವಾಧ್ಯಕ್ಷ ಯಂಕನ ಉಲ್ಲಾಸ್‌, ಹಿರಿಯರಾದ ಕೋರನ ವಿಶ್ವನಾಥ್‌ ಮತ್ತು ಪಡನೂರನ ಬೋಪಯ್ಯ ಅವರ ಉಪಸ್ಥಿತಿಯಲ್ಲಿ ಕುದೇವರ ವೆಂಕಟರಮಣ ಮತ್ತು ಗಣಪತಿಗೆ ದೀಪ ಬೆಳಗಿ ಪೂಜೆ ಸಲ್ಲಿಸಲಾಯಿತು.

ಕೊಡಗು ಮಹಿಳಾ ಒಕ್ಕೂಟದ ಅಧ್ಯಕ್ಷ ಮೂಟೆಮನೆ ಪುಷ್ಪಾವತಿಯವರ ಸಮ್ಮುಖದಲ್ಲಿ ಸುಂಟಿಕೊಪ್ಪ ಗೌಡ ಸಂಘದ ಮಹಿಳಾ ಒಕ್ಕೂಟ ಸ್ಥಾಪನೆಯಾಯಿತು.

ಸಂಘದ ಅಧ್ಯಕ್ಷೆಯಾಗಿ ಪಟ್ಟೆಮನೆ ಗಿರೀಜ ಉದಯಕುಮಾರ್‌, ಕಾರ್ಯದರ್ಶಿಯಾಗಿ ಕೆದಕಲ್‌ ಪೊನ್ನಮ್ಮ, ನಿರ್ದೇಶಕರುಗಾಳಗಿ ಕಡ್ಯದ ರತಿಅರುಣ್‌, ಓಡಯಪ್ಪನ ವಿಮಾಲವತಿ, ಗುಡ್ಡೆಮನೆ ಜ್ಯೋತಿ ಹರೀಶ್‌ ಆಯ್ಕೆಮಾಡಲಾಯಿತು.

ಗೌಡ ಯುವ ಒಕ್ಕೂಟವನ್ನು ರಚಿಸಿದ್ದು ಅಧ್ಯಕ್ಷರಾಗಿ ಹೊನ್ನಪಾಡಿ ಸುರೇಶ್‌ ಕುಶಾಲಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸುಂಟಿಕೊಪ್ಪ ಗೌಡ ಸಂಘದ ಅಧ್ಯಕ್ಷ ಕುಂಜಿಲನ ಎಸ್.ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿಳಿಯಾರ ಜವಹಾರ್‌, ಕಾರ್ಯದರ್ಶಿ ಯಂಕನ ಕೌಶಿಕ್‌, ಖಂಜಾಜಿ ಕಡ್ಯದ ಅರುಣ್‌ ಮತ್ತಿತರರಿದ್ದರು.

ಚಿತ್ರ.1: ಗೌಡ ಸಂಘ ಸುಂಟಿಕೊಪ್ಪ 11ನೇ ವರ್ಷದ ವಾರ್ಷಿಕ ಮಹಾಸಭೆಯ ವೇದಿಕೆಯಲ್ಲಿರುವ ಅತಿಥಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ